Krishi Bhagya Scheme: ಕೃಷಿ ಭಾಗ್ಯ ಜಾರಿ- ರೈತರಿಗೆ ಉಚಿತವಾಗಿ ಸಿಗಲಿದೆ ಈ ಸೌಲಭ್ಯ
Karnataka news agriculture news good news for farmers krishi Bhagya scheme restarted
Krishi Bhagya Scheme: ರಾಜ್ಯ ಸರ್ಕಾರ(Congress Government)ರೈತರಿಗೆ(Farmers)ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ.ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಕೃಷಿ ಭಾಗ್ಯ ಯೋಜನೆಯನ್ನು( Krishi Bhagya Scheme)2023-24ನೇ ಸಾಲಿನಲ್ಲಿ ರೂ.100 ಕೋಟಿಗಳ ಅನುದಾನದಲ್ಲಿ 24 ಜಿಲ್ಲೆಗಳ 106 ತಾಲ್ಲೂಕುಗಳಿಗೆ ಮಳೆಯಾಶ್ರಿತ ಕೃಷಿ ನೀತಿ-2014ರನ್ವಯ ಅನುಷ್ಠಾನಗೊಳಿಸುವಂತೆ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಕಾಂಗ್ರೆಸ್ ಜಾರಿಗೊಳಿಸುತ್ತಿರುವ ಯೋಜನೆಗಳು ಜನಸಾಮಾನ್ಯರಿಗೆ ಹೆಚ್ಚಿನ ಪ್ರಯೋಜನ ನೀಡುತ್ತಿದೆ. ಇದೀಗ, ರಾಜ್ಯ ಸರ್ಕಾರದಿಂದ ( Karnataka Governament ) ಕೃಷಿ ಭಾಗ್ಯ ಯೋಜನೆಯನ್ನು ( Krishi Bhagya Scheme ) ಪುನರಾರಂಭಿಸಲು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಹೀಗಾಗಿ, ರೈತರಿಗೆ ಉಚಿತವಾಗಿ ಕೃಷಿ ಹೊಂಡ ನಿರ್ಮಾಣ ಸೌಲಭ್ಯ ದೊರೆಯಲಿದೆ.
ರಾಜ್ಯದಲ್ಲಿ ಮಳೆಯಾಶ್ರಿತ ಕೃಷಿ ನೀತಿ-2014ರ ಅನುಸಾರ ರಾಜ್ಯದ 24 ಜಿಲ್ಲೆಯ 106 ತಾಲ್ಲೂಕುಗಳಲ್ಲಿ 2023-24ನೇ ಸಾಲಿನಲ್ಲಿ ಕೃಷಿ ಹೊಂಡ ಹಾಗೂ ಇತರೆ ಘಟಕಗಳನ್ನು ಒಳಗೊಂಡ ಕೃಷಿ ಭಾಗ್ಯ ಯೋಜನೆಯನ್ನು ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಕೃಷಿ ಭಾಗ್ಯ ಪುನರಾರಂಭದಿಂದಾಗಿ(Krishi Bhagya Scheme ) ಕೃಷಿ ಹೊಂಡದ ನಿರ್ಮಾಣ ಸೌಲಭ್ಯ ರೈತರಿಗೆ ದೊರೆಯಲಿದ್ದು, ಸಾಮಾನ್ಯ ವರ್ಗದವರಿಗೆ ಕೃಷಿ ಹೊಂಡ ನಿರ್ಮಾಣ ಮಾಡುವ ಸಲುವಾಗಿ ಶೇ.80ರಷ್ಟು ಸಬ್ಸಿಡಿಯೊಂದಿಗೆ ಸಾಲಸೌಲಭ್ಯ ಸಿಗಲಿದ್ದು, ಅದೇ ರೀತಿ, ಎಸ್ಸಿ, ಎಸ್ಟಿ ಸಮುದಾಯದವರಿಗೆ ಶೇ.90ರಷ್ಟು ಸಬ್ಸಿಡಿ ದೊರೆಯಲಿದೆ.
ಇದನ್ನೂ ಓದಿ: Fixed Deposit Rates: FD ಇಡುವವರಿಗೆ ಮಹತ್ವದ ಸುದ್ದಿ- 9% ಗೂ ಅಧಿಕ ಬಡ್ಡಿ ನೀಡುತ್ತವೆ ಈ ಬ್ಯಾಂಕ್ ಗಳು !!