Fixed Deposit Rates: FD ಇಡುವವರಿಗೆ ಮಹತ್ವದ ಸುದ್ದಿ- 9% ಗೂ ಅಧಿಕ ಬಡ್ಡಿ ನೀಡುತ್ತವೆ ಈ ಬ್ಯಾಂಕ್ ಗಳು !!

Business news these banks offering above 9 percent FD interest rates

Fixed Deposit Rates: ಭಾರತದಲ್ಲಿ ಅತಿಸಾಮಾನ್ಯವಾಗಿ ಬಳಕೆಯಾಗುವ ಸೇವಿಂಗ್ ಸ್ಕೀಮ್ಗಳಲ್ಲಿ (Savings Scheme)ಫಿಕ್ಸೆಡ್ ಡೆಪಾಸಿಟ್ (Fixed Deposit) ಕೂಡ ಒಂದು. ಭಾರತದ ಅತಿ ದೊಡ್ಡ ಬ್ಯಾಂಕ್‌ ಎನಿಸಿಕೊಂಡಿರುವ ಎಸ್‌ಬಿಐ (SBI) ಹಣಕಾಸಿನ ಭದ್ರತೆಯನ್ನು ಉಳಿಸಿಕೊಂಡು ತಮ್ಮ ಉಳಿತಾಯವನ್ನು ಹೆಚ್ಚಿಸಲು ಬಯಸುವ ಮಂದಿಗೆ ಫಿಕ್ಸೆಡ್ ಡೆಪಾಸಿಟ್‌ಗೆ(Fixed Deposit Rates) ಹೆಚ್ಚಿನ ಬಡ್ಡಿದರವನ್ನು ನೀಡುತ್ತಿದೆ. ಇದಲ್ಲದೇ, ಕೆಲವು ಸಣ್ಣ ಹಣಕಾಸು ಬ್ಯಾಂಕ್‌ಗಳು ಶೇಕಡಾ 9 ಮತ್ತು ಅದಕ್ಕಿಂತ ಹೆಚ್ಚಿನ ಆದಾಯವನ್ನು ನೀಡುತ್ತಿದ್ದು, ಹೀಗಾಗಿ, FD ಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಪ್ರಯೋಜನ ಪಡೆಯಬಹುದು.

ICICI ಬ್ಯಾಂಕ್ ಹಿರಿಯ ನಾಗರಿಕರಿಗೆ ವಿವಿಧ ಅವಧಿಯ FD ಗಳಲ್ಲಿ 3.50% ರಿಂದ 7.65% ವರೆಗಿನ ಬಡ್ಡಿದರಗಳನ್ನು ನೀಡುತ್ತಿದೆ. ಅದೇ ರೀತಿ ICICI ಎಲ್ಲಾ ಗ್ರಾಹಕರಿಗೆ 3% ರಿಂದ 7.1% ವರೆಗಿನ FD ಗಳ ಮೇಲಿನ ಬಡ್ಡಿದರಗಳನ್ನು ಒದಗಿಸುತ್ತಿದೆ.

HDFC ಬ್ಯಾಂಕ್ ಹಿರಿಯ ನಾಗರಿಕರು 3.5% ರಿಂದ 7.75% ವರೆಗೆ ಬಡ್ಡಿದರವನ್ನು ಪಡೆಯಲಿದ್ದು, ಈ ದರಗಳು 1 ಅಕ್ಟೋಬರ್ 2023 ರಿಂದ ಅನ್ವಯವಾಗಲಿದೆ. ಅದೇ ರೀತಿ, ಇನ್ನುಳಿದ HDFC ಗ್ರಾಹಕರಿಗೆ ವಿವಿಧ ಅವಧಿಗಳಿಗೆ 3% ರಿಂದ 7.20% ವರೆಗಿನ FD ಮೇಲೆ ಬಡ್ಡಿದರಗಳನ್ನು ನೀಡಲಾಗುತ್ತಿದೆ.

DCB ಬ್ಯಾಂಕ್ ಹಿರಿಯ ನಾಗರಿಕರಿಗೆ 4.25% ರಿಂದ 8.50% ವರೆಗೆ FD ಮೇಲೆ ಬಡ್ಡಿದರಗಳನ್ನು ನೀಡಲಾಗುತ್ತಿದೆ. ಅದೇ ರೀತಿ, ಸಾಮಾನ್ಯ ಗ್ರಾಹಕರಿಗೆ 3.75% ರಿಂದ 7.9% ವರೆಗೆ ಬಡ್ಡಿ ನೀಡಲಾಗುತ್ತಿದ್ದು, ಈ ದರಗಳು 27 ಸೆಪ್ಟೆಂಬರ್ 2023 ರಿಂದ ಜಾರಿಯಲ್ಲಿದೆ.

ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ, ಏಳು ದಿನಗಳಿಂದ ಹತ್ತು ವರ್ಷಗಳವರೆಗೆ FD ಗಳ ಮೇಲೆ 4.5% ರಿಂದ 9% ರ ನಡುವಿನ ಬಡ್ಡಿದರಗಳನ್ನು ನೀಡಲಾಗುತ್ತಿದೆ. ಅದೇ ರೀತಿ, ಏಳು ದಿನಗಳಿಂದ ಹತ್ತು ವರ್ಷಗಳಲ್ಲಿ FD ಗಳ ಮೇಲೆ ಹಿರಿಯ ನಾಗರಿಕರಿಗೆ 4.5% ರಿಂದ 9.5% ವರೆಗಿನ ಬಡ್ಡಿದರಗಳನ್ನು ನೀಡಲಾಗುತ್ತಿದೆ. ಈ ಹೊಸ ದರಗಳು 9 ಅಕ್ಟೋಬರ್ 2023 ರಿಂದ ಅನ್ವಯವಾಗಿದ್ದು, 1001 ದಿನಗಳ ಅವಧಿಯ FD ಗಳ ಮೇಲೆ ಗರಿಷ್ಠ 9% ಬಡ್ಡಿ ದರವನ್ನು ನೀಡಲಾಗುತ್ತಿದೆ.

ಸಾಮಾನ್ಯ ಗ್ರಾಹಕರಿಗೆ RBL ಬ್ಯಾಂಕ್ FD ಮೇಲೆ 3.50% ರಿಂದ 7.80% ವರೆಗೆ ಬಡ್ಡಿದರಗಳನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ 4% ರಿಂದ 8.30% ವರೆಗೆ ಬಡ್ಡಿದರಗಳನ್ನು ನೀಡಲಾಗುತ್ತಿದ್ದು, ಈ ದರಗಳು 16 ಅಕ್ಟೋಬರ್ 2023 ರಿಂದ ಜಾರಿಯಲ್ಲಿದೆ.

ಇದನ್ನೂ ಓದಿ: One Rank, One Pension: ಪಿಂಚಣಿದಾರರಿಗೆ ಬೊಂಬಾಟ್ ನ್ಯೂಸ್- ಈ ದಿನ ಖಾತೆಗೆ ಜಮಾ ಆಗಲಿದೆ OROP 3ನೇ ಕಂತಿನ ಹಣ

Leave A Reply

Your email address will not be published.