Home National Supreme court: ದೇಶದ ಎಲ್ಲಾ MP, MLAಗಳಿಗೆ ನಡುಕ ಹುಟ್ಟಿಸಿದ ಸುಪ್ರೀಂ ಕೋರ್ಟ್- ಬಂತು...

Supreme court: ದೇಶದ ಎಲ್ಲಾ MP, MLAಗಳಿಗೆ ನಡುಕ ಹುಟ್ಟಿಸಿದ ಸುಪ್ರೀಂ ಕೋರ್ಟ್- ಬಂತು ನೋಡಿ ಹೊಸ ಆದೇಶ

Hindu neighbor gifts plot of land

Hindu neighbour gifts land to Muslim journalist

Supreme court: ಎಲ್ಲಾ ಸಂಸದರು (MP) ಮತ್ತು ಶಾಸಕರಿಗೆ (MLA) ಸುಪ್ರೀಂ ಕೋರ್ಟ್(Supreme court) ನಡುಕ ಹುಟ್ಟಿಸುವಂತಹ ಆದೇಶವನ್ನು ಹೊರಡಿಸಿದ್ದು, ಅವರ ಮೇಲಿರುವ ಪ್ರಕರಣಗಳನ್ನು ಆದಷ್ಟು ಬೇಗ ವಿಚಾರಣೆ ನಡೆಸಬೇಕು ಎಂದು ಹೇಳಿ ವಿಶೇಷ ಪೀಠ ರಚನೆಗೆ ಮುಂದಾಗಿದೆ.

ಹೌದು, ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ತ್ವರಿತ ವಿಲೇವಾರಿಗಾಗಿ ನಿರ್ದೇಶನ ನೀಡಬೇಕು. ಆರು ವರ್ಷಗಳ ನಿಷೇಧಕ್ಕೆ ವಿರುದ್ಧವಾಗಿ ಹಾಲಿ ಶಾಸಕರು ಸೇರಿದಂತೆ ಅಪರಾಧಿ ರಾಜಕಾರಣಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಜೀವಮಾನದ ನಿಷೇಧವನ್ನು ಹೇರುವಂತೆ ವಕೀಲ ಹಾಗೂ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯನ್ನು ನಿನ್ನೆ ತಾನೆ ಸಿಜೆಐ ನೇತೃತ್ವದ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ನಡೆಸಿದ ಪೀಠವು ಸಂಸದರು (MP) ಮತ್ತು ಶಾಸಕರ (MLA) ವಿರುದ್ಧ ಬಾಕಿ ಉಳಿದಿರುವ ಪ್ರಕರಣಗಳ ಮೇಲೆ ನಿಗಾ ಇಡಲು ವಿಶೇಷ ಪೀಠ ರಚನೆ ಮಾಡುವಂತೆ ಹಾಗೂ ಪೀಠದ ನೇತೃತ್ವವನ್ನು ಹೈಕೋರ್ಟ್ (High Court) ಮುಖ್ಯ ನ್ಯಾಯಮೂರ್ತಿಗಳು ವಹಿಸಿಕೊಳ್ಳುವಂತೆ ಸೂಚನೆ ನೀಡಿದೆ. ಹೀಗಾಗಿ ಜನಪ್ರತಿನಿಧಿಗಳ ಮೇಲಿನ ಪ್ರಕರಣ ತನಿಖೆಗೆ ವಿಶೇಷ ಪೀಠ ರಚನೆಯಾಗಲಿದೆ.

ಇದನ್ನೂ ಓದಿ: Karnataka government: ‘ಜನನ-ಮರಣ ನೋಂದಣಿ’ ಶುಲ್ಕದಲ್ಲಿ ಭಾರೀ ಹೆಚ್ಚಳ !! ಸರ್ಕಾರದಿಂದ ಜನತೆಗೆ ಶಾಕ್