Religious Conversion: ಕಾಲೇಜಿಗೆ ಹೋಗ ಹೋಗುತ್ತಲೇ ಮುಸ್ಲಿಂಗೆ ಮತಾಂತರವಾದ ಹಿಂದೂ ಯುವಕ !! ಬಯಲಾಯ್ತು ಸ್ಫೋಟಕ ಆಡಿಯೋ !!

Share the Article

Religious Conversion: ಧರ್ಮ ಮತಾಂತರ (Religious Conversion) ದಂಧೆ ಅಲ್ಲಲ್ಲಿ ಬೆಳಕಿಗೆ ಬರುತ್ತಿದೆ. ಇದೀಗ ಪರುಶುರಾಂಪುರದಲ್ಲಿ ಕುರುಬ ಸಮುದಾಯದ 17 ವರ್ಷದ ಬಾಲಕನನ್ನು ಇಸ್ಲಾಂಗೆ ಮತಾಂತರಗೊಳಿಸಲು (Conversion to Islam) ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಅಬ್ಬಾಸ್ ಹಾಗೂ ಬಾಲಕನ ಫೋನ್ ಸಂಭಾಷಣೆ ಆಡಿಯೋ ಲಭ್ಯವಾಗಿದೆ. ಆರೋಪಿಯು ಈ ಆಡಿಯೋದಲ್ಲಿ ಇಸ್ಲಾಂ ಪ್ರಾರ್ಥನೆಯ ಕುರಿತಂತೆ ಬಾಲಕನಿಗೆ ಪ್ರಚೋದನೆ ನೀಡಿದ್ದಾನೆ.

ಹಣ, ಆಸ್ತಿ ಮತ್ತು ಕೆಲಸದ ಆಮಿಷ ಒಡ್ಡಿರುವ ಆರೋಪಿ ಅಬ್ಬಾಸ್, ನಮ್ಮ ಅಲ್ಲಾ ನಿನ್ನನ್ನು ಅದೆಷ್ಟು ಇಷ್ಟಪಟ್ಟಿದ್ದಾನೆ. ಈ ವಯಸ್ಸಿಗೆ ಹಲಾಲ್ ಅವಕಾಶ ನಿನಗೆ ಸಿಕ್ಕಿದೆ. ನನಗಾಗಿಯೂ ನೀನು ಪ್ರಾರ್ಥನೆ ಮಾಡು ಎಂದು ಹೇಳಿದ್ದಾನೆ. ಅಲ್ಲದೇ, ನಿನಗೆ ಹೇಳಲಾಗದಷ್ಟು ಆರಾಮವಾಗಿರುವ ಕೆಲಸ ದೇವರು ಕೊಟ್ಟಿದ್ದಾನೆ. ಬೇರೆಯವರೆಲ್ಲ ಕೆಲಸಕ್ಕೆ ಹೋಗಿ ಕಷ್ಟ ಪಡುತ್ತಿದ್ದಾರೆ. ನಿನಗೆ ನಿನ್ನದೇ ಕೆಲಸ, ನೀನೆ ಓನರ್, ನಿನ್ನದೇ ಹಲಾಲ್. ನಿನಗೆ ಇಷ್ಟು ಒಳ್ಳೆಯ ಕೆಲಸ ಎಲ್ಲೂ ಸಿಗಲ್ಲ. ಮೊದಲು ನೀನು ಸುನ್ನತ್ ಶುಕ್ರಿಯಾ ಓದು, ಆಮೇಲೆ ನಮಾಜ್ ಮಾಡುವಂತೆ ಪ್ರಚೋದನೆ ನೀಡಿದ್ದಾನೆ.

ನಿಮ್ಮಪ್ಪನಿಗೆ ಭಾರೀ ವಯಸ್ಸಾಗಿದೆ ಕಣೋ. ಎರಡು ಕೋಟಿ ರೂ. ಮನೆಯಲ್ಲಿ ಬಹಳ ಕೆಲಸ ಮಾಡಬೇಕು. ಬುಕ್‌ ತೆಗೆದುಕೊಂಡು ಕರೆಕ್ಟಾಗಿ ಬರೀತಿರು, ಅಲ್ಲಾ ನೋಡ್ತಿದ್ದಾನೆ. ಒಂದು ಲೆವಲ್‌ ಇಟ್ಟುಕೊಂಡು ಎರಡು ಕೋಟಿ ಮಾಡಿಕೊ. ಮುಂದೆ ಎಲ್ಲಾ ಮಾಡಿ ಊರು ಬಿಟ್ಟು ಬಿಡೋಣ. ಐದು ವರ್ಷದಲ್ಲಿ ನೀನು ಎರಡು ಕೋಟಿ ದುಡಿತಿಯಾ ಎಂದಿದ್ದಾನೆ. ಅಲ್ಲಾಹ್ ನಿಮಗೆ ಒಳ್ಳೆಯದು‌ ಮಾಡಲಿ ಲೆಟ್ಸ್ ಗೋ ಫಾರ್ ಹಂಟ್​ ಎಂದು ಅಬ್ಬಾಸ್​ ಹೇಳಿದ್ದಾನೆ.

ಅಲ್ಲದೇ, ಅದೆಷ್ಟೇ ಕಷ್ಟ ಆಗಲಿ ನಿಮ್ಮಪ್ಪನ ಮುಂದೆ ನಾನು ಹೇಳಿದ್ದನ್ನ ಹೇಳು. ನೀನು ಹೇಳಿದಂಗೆ ಕೇಳ್ತಿನಿ ಅಂತ ಹೇಳು, ಅದಾದ ಮೇಲೆ ನೆಮ್ಮದಿಯಾಗಿ ನಮಾಜ್ ಮಾಡಿ ಫೋನ್ ಮಾಡು ಎಂದಿರುವ ಅಬ್ಬಾಸ್, ನಿಮ್ಮಪ್ಪನ ಬಳಿ ಕೆಲಸಗಾರ ಓನರ್ ಮಾತಾಡಿಸಿದಂತೆ ಮಾತಾಡು. ನೀನು ಎಲ್ಲೇ ಹೊರಗಡೆ ಹೋಗಿ ಬರ್ತಿನಿ ಅಂದ್ರೂ ಕಳ್ಸೊತರ ಮಾಡು ಎಂದು ಅಬ್ಬಾಸ್ ಹೇಳಿದ್ದಾನೆ.

ಸದ್ಯ ಚಿತ್ರದುರ್ಗದ ಚಳ್ಳಕೆರೆಯ ಪರಶುರಾಂಪುರದ ಕುರುಬ ಸಮಾಜದ 17 ವರ್ಷದ ಬಾಲಕನ ಬಲವಂತದ ಮತಾಂತರದ ವಿರುದ್ಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ಸಂಬಂಧ ಇಬ್ಬರ ಮೇಲೆ ಚಳ್ಳಕೆರೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

 

ಇದನ್ನು ಓದಿ: Pension Scheme: ಪಿಂಚಣಿ ಪಡೆಯುವವರೇ ಇತ್ತ ಗಮನಿಸಿ- ಇನ್ನು NPCI ಲಿಂಕ್ ಕಡ್ಡಾಯ, ಮಾಡಿಲ್ಲ ಅಂದ್ರೆ ಸಿಗಲ್ಲ ಪೆನ್ಶನ್ !!

Leave A Reply