B S Yadiyurappa: ಸದಾನಂದಗೌಡರ ರಾಜಕೀಯ ನಿವೃತ್ತಿ ಘೋಷಣೆ – ಅಚ್ಚರಿ ಕಾರಣ ತೆರೆದಿಟ್ಟ ಯಡಿಯೂರಪ್ಪ !!

B S Yadiyurappa said the reason behind Sadananda Gouda's retirement announcement

Share the Article

B S Yadiyurappa: ನಿನ್ನೆ ತಾನೆ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಬಿಜೆಪಿ ಸಂಸದರಾಗಿರುವ ಡಿ ವಿ ಸದಾನಂದ ಗೌಡರವರು ತಮ್ಮ ಚುನಾವಣಾ ರಾಜಕೀಯಕ್ಕೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಈ ಬೆನ್ನಲ್ಲೇ ಸದಾನಂದ ಗೌಡರು ನಿವೃತ್ತಿ ಘೋಷಣೆ ಮಾಡಲು ಹಿಂದಿರುವ ಅಚ್ಚರಿಯ ಕಾರಣವನ್ನು ಬಿಎಸ್ ಯಡಿಯೂರಪ್ಪನವರು(B S Yadiyurappa) ತೆರೆದಿಟ್ಟಿದ್ದಾರೆ.

ಹೌದು, ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಸದಾನಂದಗೌಡರ ರಾಜಕೀಯ ನಿವೃತ್ತಿ ಕುರಿತು ಮಾತನಾಡಿದ ಯಡಿಯೂರಪ್ಪರು ‘ಸದಾನಂದಗೌಡರಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಲ್ಲಅಂತ ಹೈಕಮಾಂಡ್ ನೇರವಾಗಿ ತಿಳಿಸಿತ್ತು. ಹೀಗಾಗಿ ರಾಜೀನಾಮೆ ನೀಡಿರಬಹುದು. ಅವರಿಗೆ ಚುನಾವಣೆಗೆ ನಿಲ್ಲದಂತೆ ಹೈಕಮಾಂಡ್ ನೇರವಾಗಿ ಸೂಚಿಸಿದೆ ಎಂದು ಹೇಳಿದರು.

ಅಲ್ಲದೆ ಚುನಾವಣೆಗೆ ನಿಲ್ಲುವುದಿಲ್ಲ ಎಂದರೆ ಪಕ್ಷದಿಂದ ಹೊರಗೆ ಉಳಿಯುತ್ತಾರೆ ಎಂದರ್ಥವಲ್ಲ. ಇನ್ನು ಮುಂದಿನ ರಾಜಕೀಯ ವಿಚಾರಗಳ ಕುರಿತು ಅವರು ಸದಾ ಚಟುವಟಿಕೆಯಿಂದ ಇರುತ್ತಾರೆ. ಪಕ್ಷದ ಎಲ್ಲಾ ಕಾರ್ಯಗಳಲ್ಲೂ ಭಾಗವಹಿಸುತ್ತಾರೆ ಎಂದು ಹೇಳಿದ್ದಾರೆ.

ಅಂದಹಾಗೆ ಚುನಾವಣಾ ನಿವೃತ್ತಿ ಘೋಷಿಸಿದ ಸದಾನಂದಗೌಡರು 10 ವರ್ಷ ಎಂಎಲ್‍ಎ, 20 ವರ್ಷ ಎಂಪಿ, 1 ವರ್ಷ ಮುಖ್ಯಮಂತ್ರಿ, ಒಂದೂವರೆ ವರ್ಷ ವಿರೋಧ ಪಕ್ಷದ ನಾಯಕ, 5 ವರ್ಷ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ, ನಾಲ್ಕೂವರೆ ವರ್ಷ ಪಕ್ಷದ ರಾಜ್ಯಾಧ್ಯಕ್ಷ, ಕೇಂದ್ರದಲ್ಲಿ 7 ವರ್ಷ ನರೇಂದ್ರ ಮೋದಿ ಜೊತೆ ಕ್ಯಾಬಿನೆಟ್ ಮಂತ್ರಿ ಆಗಿದ್ದರು.

 

ಇದನ್ನು ಓದಿ: White hair: ತಲೆಯ ಒಂದು ಬಿಳಿ ಕೂದಲನ್ನು ಕಿತ್ತರೆ ಅಕ್ಕ ಪಕ್ಕದ ಕೂದಲೆಲ್ಲಾ ಬಿಳಿ ಆಗುತ್ತಾ ?!

Leave A Reply