Bengaluru: ಬೆಂಗಳೂರು ರೌಡಿಶೀಟರ್ ನನ್ನು ಭೀಕರವಾಗಿ ಕೊಚ್ಚಿ ಕೊಂದ 6 ಮಂದಿ ದುಷ್ಕರ್ಮಿಗಳು !!
Bengaluru crime news rowdy sheeter murdered in Bengaluru chunchanghatta

Bengaluru: ಬೆಂಗಳೂರು ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ನನ್ನು (rowdy sheeter) ಬರ್ಬರ ಹತ್ಯೆ ಮಾಡಿ ಆರು ದುಷ್ಕರ್ಮಿಗಳು ಪರಾರಿ ಆಗಿರುವಂತಹ ಘಟನೆ ನಡೆದಿದೆ.

ಹೌದು, ಬೆಂಗಳೂರಿನ(Bengaluru) ಚುಂಚನಘಟ್ಟ ಮುಖ್ಯರಸ್ತೆಯಲ್ಲಿ ರಾತ್ರಿ 9.30ರ ಸುಮಾರಿಗೆ ಸಹದೇವ್ ಎನ್ನುವ ರೌಡಿಶೀಟರ್ನನ್ನು (rowdy sheeter) ಬರ್ಬರ ಹತ್ಯೆ ಮಾಡಿ ಆರು ದುಷ್ಕರ್ಮಿಗಳು ಪರಾರಿ ಆಗಿದ್ದಾರೆ.
ಅಂದಹಾಗೆ ದೊರೆತ ಮಾಹಿತಿ ಪ್ರಕಾರ ಟೀ ಕುಡಿಯಲು ಬೇಕರಿ ಬಳಿ ಬಂದಿದ್ದ ಸಹದೇವ್ ನನ್ನು ಹಿಂಬಾಲಿಸಿ ಬಂದ 6 ಮಂದಿ ದುಷ್ಕರ್ಮಿಗಳ ಆತನನ್ನು ಬೀಕರವಾಗಿ ಕೊಲೆಗೈದಿದ್ದಾರೆ. ಘಟನಾ ಸ್ಥಳಕ್ಕೆ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.