Home latest Whatsapp new rule : ವಾಟ್ಸಪ್ ಬಳಕೆದಾರರಿಗೆ ಇನ್ಮುಂದೆ ಬಂತು ಹೊಸ ರೂಲ್ಸ್- ಸುಪ್ರೀಂ ನಿಂದ...

Whatsapp new rule : ವಾಟ್ಸಪ್ ಬಳಕೆದಾರರಿಗೆ ಇನ್ಮುಂದೆ ಬಂತು ಹೊಸ ರೂಲ್ಸ್- ಸುಪ್ರೀಂ ನಿಂದ ಖಡಕ್ ಎಚ್ಚರಿಕೆ !!

Whatsapp new rule

Hindu neighbor gifts plot of land

Hindu neighbour gifts land to Muslim journalist

Whatsapp new rule: ದೇಶಾದ್ಯಂತ ವಾಟ್ಸಪ್ ಬಳಸುವ ಬಳಕೆದಾರರಿಗೆ ಸುಪ್ರೀಂ ಕೋರ್ಟ್ ಹೊಸ ರೂಲ್ಸ್(Whatsapp new rule) ಅನ್ನು ಜಾರಿ ಮಾಡಿದ್ದು ಅದರಲ್ಲಿಯೂ ಕೂಡ ಪ್ರಿಪೇಯ್ಡ್ ಮೊಬೈಲ್ ನಂಬರ್ ಬಳಸುವಂತಹ ಬಳಕೆದಾರರಿಗೆ ಹೊಸದಾಗಿ ಖಡಕ್ ಎಚ್ಚರಿಕೆಯೊಂದನ್ನು ನೀಡಿದೆ.

ಹೌದು, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ, ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾದಂತಹ ಮೊಬೈಲ್ ಸೇವಾ ಪೂರೈಕೆದಾರರು ಒಂದು ನಂಬರ್ ಅನ್ನು ಬಳಸೆ ಅದು ನಿರ್ದಿಷ್ಟ ಅವಧಿಯ ನಂತರ ನಿಷ್ಕ್ರಿಯಗೊಂಡರೆ, ಆ ಸಂಖ್ಯೆಯನ್ನು ಹೊಸ ಚಂದಾದಾರರಿಗೆ ಮರುಹಂಚಿಕೆ ಮಾಡಲು ಅನುಮತಿ ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಈ ವೇಳೆ ಮೊದಲ ಚಂದಾದದರ ಗೌಪ್ಯತೆಯನ್ನು ಕಾಪಾಡಬೇಕು ಎಂದು ಸುಪ್ರೀಂ ಎಚ್ಚರಿಕೆ ನೀಡಿದೆ.

ಅಂದಹಾಗೆ ಮೊಬೈಲ್ ನಂಬರ್ ಗಳು ನಿಷ್ಕ್ರಿಯಗೊಂಡಂತ ಸಂದರ್ಭದಲ್ಲಿ ಅದನ್ನು ಇತರ ಚಂದದಾರರಿಗೆ ಕೊಡುವಾಗ ಮೊದಲು ಆ ನಂಬರನ್ನು ವಾಟ್ಸಾಪ್ ಗಾಗಿ ಬಳಸುತ್ತಿದ್ದ ಚಂದಾದಾರರ ಮಾಹಿತಿಗಳು ಲೀಕಾಗುವ ಸಾಧ್ಯತೆಗಳಿರುತ್ತದೆ. ಏಕೆಂದರೆ ಆ ನಂಬರ್ ಅವರ ಮೊಬೈಲ್ ಗೆ ಲಿಂಕ್ ಆಗಿದ್ದು ಅವರ ಎಲ್ಲಾ ಡೇಟಾಗಳು ಕೂಡ ಇನ್ನೊಬ್ಬರು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಎಲ್ಲಾ ವಾಟ್ಸಪ್ ಬಳಕೆದಾರರು ಮೊಬೈಲ್ ನಂಬರ್ ಬದಲಾಯಿಸುವ ಮೊದಲು ತಮ ಸಂಪೂರ್ಣ ಡೇಟಾವನ್ನು ಅಳಿಸಿಹಾಕಬೇಕೆಂದು ನ್ಯಾಯಾಲವು ಎಚ್ಚರಿಸಿದೆ.

ಇದರೊಂದಿಗೆ ಮೊಬೈಲ್ ಸೇವಾ ಪೂರೈಕೆದಾರರು 90 ದಿನಗಳ ಅವಧಿಯ ನಂತರ ಹೊಸ ಚಂದಾದಾರರಿಗೆ ನಿಷ್ಕ್ರಿಯಗೊಳಿಸಿದ ಸಂಖ್ಯೆಗಳನ್ನು ಮರುಹೊಂದಿಸಲು ಕಾನೂನು ಅಧಿಕಾರವನ್ನು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ತೀರ್ಪು ಸ್ಪಷ್ಟಪಡಿಸುತ್ತದೆ. ಆದರೆ ಇದರೊಳಗೆ ಪೂರ್ವ ಬಳಕೆದಾರರು ಅದರಲ್ಲಿರುವ ತಮ್ಮ ಸಂಪೂರ್ಣ ಮಾಹಿತಿಗಳನ್ನು ಅಳಿಸಿಹಾಕಬೇಕು ಎಂದೂ ತಿಳಿಸಿದೆ.

ಇದನ್ನೂ ಓದಿ: BH Number plate: ವಾಹನ ಮಾಲಿಕರಿಗೆ ಸಿಹಿ ಸುದ್ದಿ- BH ನಂಬರ್ ಪ್ಲೇಟ್ ಬಗ್ಗೆ ನಿಯಮ ಬದಲಿಸಿದ ಕೇಂದ್ರ !!