Sowjanya case: ಸೌಜನ್ಯ ಹೋರಾಟದಲ್ಲಿ ಪೂರಕ ಬೆಳವಣಿಗೆ ?: ಮರುತನಿಖೆಗೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ಸಿಬಿಐ !

Dakshina Kannada news CBI applied to High Court for Sowjanya case re-investigation

Sowjanya case : ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಪಾಂಗಾಳದ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು(Sowjanya case ) ಮರುತನಿಖೆಗೆ ಒಳಪಡಿಸುವಂತೆ ಹೈಕೋರ್ಟ್ ಗೆ ಸಿಬಿಐ ಅಧಿಕಾರಿಗಳು ಮೇಲ್ಮನವಿ ಸಲ್ಲಿಸಿದ್ದಾರೆ ಎನ್ನುವ ಮಹತ್ವದ ಮಾಹಿತಿ ಲಭ್ಯವಾಗಿದೆ. ಸದ್ಯಕ್ಕೆ ಬಂದ ಮಾಹಿತಿಗಳ ಪ್ರಕಾರ ಇದು ಸೌಜನ್ಯ ಹೋರಾಟಕ್ಕೆ ಪೂರಕ ಬೆಳವಣಿಗೆ ಅಲ್ಲ ಎಂದು ಹೇಳಲಾಗುತ್ತಿದೆ.

ಪ್ರಕರಣದಲ್ಲಿ ಹಲವು ಆರೋಪಿಗಳ ಮತ್ತು ಪ್ರಭಾವಿಗಳ ಹೆಸರು ಕೇಳಿಬಂದಿತ್ತು. ಆದರೆ ಕೊನೆಗೆ ಓರ್ವ ಆರೋಪಿ ಎಂದು ಗುರುತಿಸಲ್ಪಟ್ಟಿದ್ದ ಸಂತೋಷ್ ರಾವ್ ನನ್ನು ನಿರ್ದೋಷಿ ಎಂದು ತೀರ್ಪು ನೀಡಿ ಕೋರ್ಟ್ ಬಿಡುಗಡೆ ಮಾಡಿತ್ತು. ಇದೀಗ ತೀರ್ಪು ಬಂದು ಹಲವು ತಿಂಗಳು ಕಳೆದ ಬಳಿಕ ಸಿಬಿಐ ಅಧಿಕಾರಿಗಳು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಸಿಬಿಐನ ಅಚಾನಕ್ ನಡೆ ಅಚ್ಚರಿ ಮೂಡಿಸಿದೆ.

ಸೌಜನ್ಯ ಕೊಲೆ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ಆರೋಪಿ ಸಂತೋಷ್ ರಾವ್ ಗೆ ಸಾಕ್ಷ್ಯಧಾರ ಕೊರತೆಯಿಂದ ನಿರ್ದೋಷಿ ಎಂದು ತೀರ್ಪು ನೀಡಿದ್ದು, ಇದೀಗ ನವೆಂಬರ್ 5, ಶನಿವಾರದಂದು ಸಿಬಿಐ ತನಿಖಾಧಿಕಾರಿಗಳು ಹೈ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಸೌಜನ್ಯಳಿಗೆ ನ್ಯಾಯಕ್ಕಾಗಿ ಕೂಗು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳ ಈ ವಿಶೇಷ ನಡೆ ಕುತೂಹಲ ಹುಟ್ಟಿಸಿದೆ. ಸದ್ಯದ ಮಾಹಿತಿಗಳ ಪ್ರಕಾರ ಈ ಬೆಳವಣಿಗೆ ಸೌಜನ್ಯ ಹೋರಾಟಕ್ಕೆ ಪೂರಕ ಎಂದು ತಿಳಿದುಬಂದಿದೆ. ಮರುತನಿಖೆಗೆ ಹೈಕೋರ್ಟ್ ಸಮ್ಮತಿಸುತ್ತಾ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ. ಏಕಾಏಕಿ ಸಿಬಿಐ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ ಕಾರಣ ಏನು ಅನ್ನುವುದರ ಬಗ್ಗೆ ಇನ್ನೂ ನಿಗೂಢತೆಯಿದೆ. ಹಿಂದೆ, ಸೌಜನ್ಯ ತಾಯಿ ಕುಸುಮಾವತಿ ಮತ್ತು ಇತರ ಹೋರಾಟಗಾರರು ಮರು ಅಪೀಲ್ ಹೋಗುವುದನ್ನು ವಿರೋಧಿಸಿದ್ದರು ಎಂದು ನಾವಿಲ್ಲ ಗಮನಿಸಬಹುದು.

ಇದನ್ನೂ ಓದಿ: BH Number plate: ವಾಹನ ಮಾಲಿಕರಿಗೆ ಸಿಹಿ ಸುದ್ದಿ- BH ನಂಬರ್ ಪ್ಲೇಟ್ ಬಗ್ಗೆ ನಿಯಮ ಬದಲಿಸಿದ ಕೇಂದ್ರ !!

Leave A Reply

Your email address will not be published.