Gruhalakshmi scheme: ಗೃಹಲಕ್ಷ್ಮೀ ದುಡ್ಡು ಬಾರದ ಮಹಿಳೆಯರೇ ಗಮನಿಸಿ- ಇಲ್ಲಿ ಖಾತೆ ತೆರೆದ್ರೆ ಕ್ಷಣಾರ್ಧದಲ್ಲಿ ನಿಮ್ಮ ಅಕೌಂಟ್ ಗೆ ಜಮಾ ಆಗುತ್ತೆ ಹಣ !!

Share the Article

Gruhalakshmi scheme: ರಾಜ್ಯ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಜಾರಿಗೊಳಿಸಿರುವ ಗೃಹಲಕ್ಷ್ಮೀ ಯೋಜನೆಯ(Gruhalakshmi scheme)ಡಿಯಲ್ಲಿ ಈಗಾಗಲೇ ಮಹಿಳೆಯರಿಗೆ ಎರಡು ಕಂತಿನ ಹಣಗಳು ಜಮಾ ಆಗಿವೆ. ನಾರಿಯರೆಲ್ಲರೂ ಮೂರನೆ ಕಂತಿನ ಹಣಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೆ ಕೆಲ ಮಹಿಳೆಯರಿಗೆ ಇನ್ನೂ ಯಾವ ಕಂತಿನ ಹಣವೂ ಜಮಾ ಆಗಿಲ್ಲ. ಆದರೀಗ ಸರ್ಕಾರ ಹೊಸ ಬದಲಾವಣೆ ತಂದಿದ್ದು, ಇಲ್ಲಿ ಖಾತೆ ತೆರೆದರೆ ಕೂಡಲೇ ಹಣ ಜಮಾ ಆಗುತ್ತೆ ಎಂದು ಹೇಳಿದೆ.

ಹೌದು, ಗೃಹಲಕ್ಷ್ಮೀ ಯೋಜನೆ ಅನುಷ್ಠಾನಗೊಂಡು ಮೂರು ತಿಂಗಳೇ ಕಳೆಯುತ್ತಿದ್ದರೂ ಕೆಲವು ಮಹಿಳೆಯರ ಬ್ಯಾಂಕ್ ಖಾತೆಗೆ ( Bank Account ) ಇನ್ನೂ ಒಂದನೇ ಕಂತಿನ ಹಣವೂ ಜಮಾ ಆಗಿಲ್ಲ. ಇಂತಹ ಮಹಿಳೆಯರು ಅಂಚೆ ಕಚೇರಿಯಲ್ಲಿ ಹೊಸದಾಗಿ ಖಾತೆ ತೆರೆದರೆ ಕೂಡಲೇ ಹಣ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದು ಇನ್ನು ಬ್ಯಾಂಕ್ ಖಾತೆ ಗೆ ಹಣ ಬಾರದೇ ಇದ್ದರೇ ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವುದು ಉತ್ತಮ. ಅಂಚೆ ಕಚೇರಿಯಲ್ಲಿ ಖಾತೆ ತೆರೆದು, ಆ ಖಾತೆಯ ಸಂಖ್ಯೆಯನ್ನು ಯೋಜನೆಗೆ ಲಿಂಕ್ ಮಾಡಿದ್ರೇ ಅವರಿಗೆ ಸಮಸ್ಯೆ ಆಗದಂತೆ ಅಂಚೆ ಇಲಾಖೆಯ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

 

ಇದನ್ನು ಓದಿ: Sukanya Samriddhi Yojana: ಮಕ್ಕಳ ಭದ್ರ ಭವಿಷ್ಯಕ್ಕೆ ಸರ್ಕಾರದಿಂದ ಹೊಸ ಸ್ಕೀಮ್ ಘೋಷಣೆ- ಕೇವಲ 12 ಸಾವಿರ ಇನ್ವೆಸ್ಟ್ ಮಾಡಿದ್ರೆ ಕೈ ಸೇರುತ್ತೆ ಬರೋಬ್ಬರಿ 70 ಲಕ್ಷ !!

Leave A Reply