Landslide in Sullia: ಕರಾವಳಿಯಲ್ಲಿ ಭಾರೀ ಮಳೆ- ಸುಳ್ಯದಲ್ಲಿ ಭೂ ಕುಸಿತ

Dakshina Kannada news due to heavy rain landslide in sullia latest news

Landslide in Sullia: ಕೆಲ ದಿನಗಳಿಂದ ಕರಾವಳಿಯ ಹಲವೆಡೆ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿದ್ದು, ಶನಿವಾರ ರಾತ್ರಿಯೂ ಗುಡುಗು-ಸಿಡಿಲಿನ ಅಬ್ಬರದೊಂದಿಗೆ ಮಳೆಯಾಗಿದ್ದು, ಸುಳ್ಯದಲ್ಲಿ ಶನಿವಾರ ನವೆಂಬರ್‌ 04 ರಂದು ಸುರಿದ ಮಳೆಗೆ ಪರಿವಾರಕಾನ ಬಳಿಯ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗ ಭಾರಿ ಮಳೆಗೆ ಏಕಾಏಕಿ ಭೂಮಿ ಕುಸಿದು (Landslide in Sullia) ಬೃಹತ್ ಹೊಂಡ ನಿರ್ಮಾಣವಾಗಿದೆ. ಸುಮಾರು ಹತ್ತು ಅಡಿಯಷ್ಟು ಉದ್ದಕ್ಕೆ ಹೊಂಡ ನಿರ್ಮಾಣವಾಗಿದ್ದು ,ಪಕ್ಕದಲ್ಲಿ ಇರುವ ವಿದ್ಯುತ್ ಕಂಬ ಬೀಳುವ ಆತಂಕ ಎದುರಾಗಿದೆ.

ಸಾಮಾನ್ಯವಾಗಿ ಈ ಭಾಗದಲ್ಲಿ ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಸಾಗುವ ವಾಹನಗಳು ಕೆಲವೊಮ್ಮೆ ತಂಗುವುದುಂಟು. ಆದರೆ ಅದೃಷ್ಟವಶಾತ್ ಘಟನೆ ವೇಳೆ ಯಾರೂ ಇರದ ಕಾರಣ ಯಾವುದೇ ಅಪಾಯ ಉಂಟಾಗಿಲ್ಲ. ಸದ್ಯ ಭೂಮಿ ಕುಸಿತದ ಘಟನೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ.

ಇದೀಗ ಹವಾಮಾನ ಇಲಾಖೆಯು ಕರಾವಳಿಯಾದ್ಯಂತ ಭಾರಿ ಮಳೆಯ ಮುನ್ಸೂಚನೆ ನೀಡಿದ್ದು, ಕರಾವಳಿ ಭಾಗದಲ್ಲಿ ಗುಡುಗು ಮಿಂಚಿನಿಂದ ಕೂಡಿದ ಭಾರಿ ಮಳೆ ಸೋಮವಾರವೂ ಇದೇ ವಾತಾವರಣ ಮುಂದುವರಿಯಲಿದೆ ಎಂದು ಎಚ್ಚರ ನೀಡಿದೆ.

ಇದನ್ನೂ ಓದಿ: 2,000 ನೋಟು ಬದಲಾಣೆಗೆ ಬಂತು ಮತ್ತೊಂದು ಹೊಸ ನಿಯಮ- RBI ನಿಂದ ಘೋಷಣೆ

Leave A Reply

Your email address will not be published.