

Ratan Dubey: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಸೇರಿ ಎಲ್ಲಾ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿದೆ. ನ.7 ರಂದು ಮೊದಲ ಹಂತದ ಮತದಾನ ಇರುವುದರಿಂದ ಪ್ರಚಾರ ಭಾರಿ ಜೋರಾಗಿಯೇ ಇದೆ. ಇದಕ್ಕೆ ಪೂರಕವಾಗಿ ಛತ್ತೀಸ್‌ಗಢ ವಿಧಾನಸಭೆ ಚುನಾವಣೆ (Chhattisgarh Assembly Election) ನಡೆಯೋ ಮೊದಲೇ ಮಾವೋದಾದಿಗಳ ಉಪಟಳ ಶುರುವಾಗಿದೆ. ಬಿಜೆಪಿ ನಾಯಕ ರತನ ದುಬೆ (Ratan Dubey) ಅವರನ್ನು ಹತ್ಯೆ ಮಾಡಲಾಗಿದೆ. ಚುನಾವಣೆಗೆ ಇನ್ನೇನು ಮೂರೇ ದಿನ ಇರುವಾಗ, ಜನ ಹಾಗೂ ಜನಪ್ರತಿನಿಧಿಗಳಲ್ಲಿ ಆತಂಕ ಹುಟ್ಟುವ ಪ್ರಯತ್ನ ಮಾಡಲಾಗುತ್ತಿದೆ.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ರತನ್ ದುಬೆ ಅವರನ್ನು ಮಾವೋವಾದಿಗಳು ಗುಂಡಿಕ್ಕಿ ಹತ್ಯ ಮಾಡಿದ್ದು, ಕೌಶಾಲ್ನರ್ ಜಿಲ್ಲೆಯಲ್ಲಿ ರತನ್‌ದುಬೆ ಅವರು ಚುನಾವಣೆ ಪ್ರಚಾರ ಕೈಗೊಳ್ಳುತ್ತಿರುವಾಗಲೇ ನಕ್ಸಲರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.
ಇದನ್ನು ಓದಿ: DY Chandrachud: ನ್ಯಾಯಾಲಯದ ತೀರ್ಪು ರದ್ದುಪಡಿಸುವ ಅಧಿಕಾರ ಶಾಸಕಾಂಗಕ್ಕೆ ಇಲ್ಲ- ಸಿಜೆಐ ಚಂದ್ರಚೂಡ್













