Sukanya samruddi yojana: ಹೆಣ್ಣು ಹೆತ್ತವರಿಗೆ ಖುಷಿ ಸುದ್ದಿ- ಮದುವೆಗಾಗಿ ಸರ್ಕಾರವೇ ನೀಡುತ್ತೆ 27ಲಕ್ಷ !! ಆದ್ರೆ ಈ ಕೆಲಸ ಮಾಡಿದ್ರೆ ಮಾತ್ರ

Best saving scheme for girls Sukanya samruddi yojana for girl child details with maturity returns

Sukanya samruddi yojana: ಕೇಂದ್ರ ಸರ್ಕಾರ(Central Government)ಈಗಾಗಲೇ ಹೆಣ್ಣು ಮಕ್ಕಳಿಗಾಗಿ (women Empowerment)ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಸುಕನ್ಯಾ ಸಮೃದ್ಧಿ ಎನ್ನುವ ಯೋಜನೆಯೂ (Sukanya Samruddi yojana)ಒಂದಾಗಿದ್ದು, ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರಪಡಿಸಲು ಪೋಷಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಆರಂಭಿಸಿದೆ.

ಹೆಣ್ಣು ಮಗು ಹುಟ್ಟಿದ 10 ವರ್ಷಗಳ ಅವಧಿಯೊಳಗೆ ಮಗುವಿನ ಪಾಲಕರು ಅಥವಾ ಪೋಷಕರು ಮಗುವಿನ ಹೆಸರಲ್ಲಿ ಖಾತೆ ತೆರೆಯಬಹುದಾಗಿದ್ದು, ಓರ್ವ ಹೆಣ್ಣು ಮಗುವಿನ ಹೆಸರಲ್ಲಿ ಒಂದೇ ಖಾತೆಯನ್ನು ತೆರೆಯಬಹುದು. ಹೆಣ್ಣು ಮಗು 10 ವರ್ಷ ತುಂಬುವವರೆಗೆ ಸುಕನ್ಯಾ ಸಮೃದ್ಧಿ ಖಾತೆಯನ್ನು ಆಕೆಯ ಹೆಸರಿನಲ್ಲಿ ತೆರೆಯಬಹುದಾಗಿದೆ. ಸ್ವಲ್ಪ ಸ್ವಲ್ಪ ಉಳಿತಾಯ (savings) ಮಾಡಿದರೆ, ಆ ಹೆಣ್ಣು ಮಗುವಿಗೆ 21 ವರ್ಷ ವಯಸ್ಸಿಗೆ ಬರುವಷ್ಟರಲ್ಲಿ, ಕೇಂದ್ರ ಸರ್ಕಾರವೇ (central government) ನಿಮಗೆ 27 ಲಕ್ಷ ರೂಪಾಯಿಗಳನ್ನು ನೀಡುತ್ತದೆ.

ಈ ಯೋಜನೆಯಡಿಯಲ್ಲಿ ಕನಿಷ್ಠ 250 ರೂಪಾಯಿಗಳಿಂದ ಗರಿಷ್ಠ 1.50 ಲಕ್ಷ ರೂಪಾಯಿಗಳವರೆಗೆ ಹೂಡಿಕೆ (investment) ಮಾಡಬಹುದಾಗಿದೆ. ಯಾವುದೇ ರಾಷ್ಟ್ರೀಕೃತ ಬ್ಯಾಂಕ್ (nationalised bank) ಅಥವಾ ಪೋಸ್ಟ್ ಆಫೀಸ್ (post office) ನಲ್ಲಿಯೂ ನೀವು ಖಾತೆ ಆರಂಭಿಸಬಹುದು.ಸುಕನ್ಯಾ ಸಮೃದ್ಧಿ ಖಾತೆಯ ಮೇಲಿನ ಬಡ್ಡಿಯ ದರವು (Intrest Rate)ಶೇಕಡಾ 8 ರಷ್ಟು ಇದ್ದು, ಇನ್ನುಳಿದ ಯೋಜನೆಗಳಿಗೆ ಹೋಲಿಸಿದರೆ ಈ ಯೋಜನೆಗೆ ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆಯಬಹುದು. ನೀವು ಪ್ರತಿ ತಿಂಗಳು 5000 ಹೂಡಿಕೆ ಮಾಡಿದರೆ, ಒಂದು ವರ್ಷಕ್ಕೆ 60,000 ಆಗಲಿದೆ. ಅದೇ ರೀತಿ 15 ವರ್ಷಗಳಲ್ಲಿ ಅಂದಾಜು 9 ಲಕ್ಷ ರೂ. ಹೂಡಿಕೆ ಮಾಡಿದರೆ ಬಡ್ಡಿ ( interest) ಮೊತ್ತ ರೂ. 17,93,814, ಸಿಗಲಿದೆ. 6 ವರ್ಷಗಳ ಬಳಿಕ ನಿಮ್ಮ ಹೆಣ್ಣು ಮಗುವಿಗೆ 21 ನೇ ವಯಸ್ಸಿನಲ್ಲಿ ಒಟ್ಟು ನೀವು ಪಡೆಯುವ ಮೊತ್ತ ರೂ. 26,93,814. ಆಗಲಿದ್ದು, ಅಂದರೆ ಬರೋಬ್ಬರಿ 27 ಲಕ್ಷಗಳು ನಿಮ್ಮ ಕೈ ಸೇರಲಿದೆ.

ಇದನ್ನೂ ಓದಿ: ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರ ಆಯ್ಕೆಗೆ ಬಂತು ಹೊಸ ರೂಲ್ಸ್- ಸರ್ಕಾರದಿಂದ ಮಹತ್ವದ ಆದೇಶ

Leave A Reply

Your email address will not be published.