karnataka guest lecturer recruitment: ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರ ಆಯ್ಕೆಗೆ ಬಂತು ಹೊಸ ರೂಲ್ಸ್- ಸರ್ಕಾರದಿಂದ ಮಹತ್ವದ ಆದೇಶ

Karnataka higher Education Department changed the rules for guest lecturer recruitment 2023

karnataka guest lecturer recruitment 2023: ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯ (karnataka guest lecturer recruitment 2023)ಆಯ್ಕೆ ವಿಚಾರದಲ್ಲಿ ಬದಲಾವಣೆ ಕುರಿತು ಮಹತ್ವದ ಆದೇಶ ಹೊರಡಿಸಿದೆ.

2023-24ನೇ ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರಸ್ತುತ 2023-24ನೇ ಸಾಲಿಗೆ ಆಯ್ಕೆಗೊಳ್ಳುವ ಅತಿಥಿ ಉಪನ್ಯಾಸಕರನ್ನು ಸೆಮಿಸ್ಟರ್ ಬದಲಾಗಿ ಶೈಕ್ಷಣಿಕ ವರ್ಷಕ್ಕೆ (10 ತಿಂಗಳಿಗೆ ಮಾತ್ರ) ನೇಮಕ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ಈ ಕುರಿತು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ನಿರ್ದೇಶನ ನೀಡಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗೆ ಆದೇಶ ಹೊರಡಿಸಲಾಗಿದೆ.

ಅತಿಥಿ ಉಪನ್ಯಾಸಕರ ಆಯ್ಕೆಗೆ ಕನಿಷ್ಠ ಸ್ನಾತಕೋತ್ತರ ಪದವಿ ಹೊಂದಿರಬೇಕಾಗಿದ್ದು, ಯುಜಿಸಿ ಎನ್‌ಇಟಿ / ಎಸ್‌ಎಲ್‌ಇಟಿ / ಪಿಹೆಚ್‌ಡಿ / ಕೆಎಸ್‌ಇಟಿ / ಜತೆಗೆ ಕರ್ತವ್ಯ ಅನುಭವ ಹೊಂದಿರಬೇಕು. ಈ ಅರ್ಹತೆಗಳಿಗೆ ಅಂಕಗಳನ್ನು ನೀಡಿ, ಮೆರಿಟ್‌ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ಈ ಹಿಂದೆ ಸೆಮಿಸ್ಟರ್‌ಗಳ ಅವಧಿಗೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿ, ನಿಯೋಜನೆ ಮಾಡಲಾಗಿ ಸಂಭಾವನೆ ನೀಡಲಾಗುತ್ತಿತ್ತು. ಈಗ 10 ತಿಂಗಳ ಅವಧಿಗೆ / ಅಂದರೆ ಶೈಕ್ಷಣಿಕ ವರ್ಷಕ್ಕೆ ಭರ್ತಿ ಮಾಡಲು ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: Agricultural land: ಕೃಷಿ ಭೂಮಿಯಲ್ಲಿ ಮನೆ, ಕಟ್ಟಡ ಕಟ್ಟೋರಿಗೆ ಬಂತು ಹೊಸ ರೂಲ್ಸ್ – ಈ ಕೆಲಸ ಇನ್ನು ಕಡ್ಡಾಯ !!

Leave A Reply

Your email address will not be published.