Home latest Tamilnadu: ಮದುವೆ ಆದ ಮೂರೇ ದಿನಕ್ಕೆ ನವ ದಂಪತಿಗಳನ್ನು ಕೊಚ್ಚಿ ಕೊಂದ ಪಾಪಿಗಳು !!

Tamilnadu: ಮದುವೆ ಆದ ಮೂರೇ ದಿನಕ್ಕೆ ನವ ದಂಪತಿಗಳನ್ನು ಕೊಚ್ಚಿ ಕೊಂದ ಪಾಪಿಗಳು !!

Tamilnadu

Hindu neighbor gifts plot of land

Hindu neighbour gifts land to Muslim journalist

Tamilnadu: ಅವರು ಆಗಷ್ಟೇ ಮದುವೆಯಾದ ನವ ದಂಪತಿಗಳು. ಮದುವೆಯಾಗಿ ಕೇವಲ ಮೂರು ದಿನ ಆದದ್ದು ಅಷ್ಟೇ. ಇನ್ನೇನು ಹೊಸ ಜೀವನ ಆರಂಭಿಸಬೇಕು ಅನ್ನುವಷ್ಟರಲ್ಲಿ ಆ ಜೀವನ ಆರಂಭದಲ್ಲೇ ಅಂತ್ಯಕಂಡಿದೆ.

ಹೌದು, ಮದುವೆಯಾಗಿ, ಹೊಸ ಜೀವನ ಆರಂಭಿಸಬೇಕು ಎಂದು ತುದಿಗಾಲಲ್ಲಿ ನಿಂತಿದ್ದ ನವದಂತಿಯೊಂದನ್ನು ಮದ್ವೆಯಾಗಿ ಮೂರೇ ದಿನಕ್ಕೆ ಬರ್ಬರ ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ(Tamilnadu) ತೂತುಕುಡಿಯಲ್ಲಿ ನಡೆದಿದೆ.

ಕೊಲೆಯಾದ ನವದಂಪತಿಯನ್ನು ಮಾರಿ ಸೆಲ್ವಂ (23) ಮತ್ತು ಕಾರ್ತಿಕಾ (21) ಎಂದು ಗುರುತಿಸಲಾಗಿದ್ದು ಗುರುವಾರ (ನ.02) ರಾತ್ರಿ 3 ಬೈಕ್ ಗಳಲ್ಲಿ ಬಂದ 6 ಮಂದಿಯಿದ್ದ ಒಂದು ಗುಂಪು ನವದಂಪತಿ ವಾಸವಿದ್ದ ಮನೆಗೆ ನುಗ್ಗಿ ಇಬ್ಬರನ್ನೂ ಭೀಕರವಾಗಿ ಹತ್ಯೆ ಮಾಡಿದ್ದಾರೆಂದು ಪೋಲಿಸರು ಹೇಳಿದ್ದಾರೆ.

ಅಂದಹಾಗೆ ಮಾರಿ ಮತ್ತು ಕಾರ್ತಿಕಾ ಅ.30ರಂದು ಕೋವಿಲ್​ಪಟ್ಟಿ ಠಾಣೆಗೆ ತೆರಳಿ ಪೊಲೀಸ್​ ರಕ್ಷಣೆ ಕೋರಿದ್ದರು. ಇದಾದ ಬಳಿಕ ಇಬ್ಬರು ಅದೇ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿದ್ದ ದೇವಸ್ಥಾನದಲ್ಲಿ ವಿವಾಹವಾದರು. ಈ ಮದುವೆಗೆ ಕಾರ್ತಿಕಾಳ ಪಾಲಕರ ವಿರೋಧವಿತ್ತು. ಇದವೇ ಇವರಿಬ್ಬರ ಭೀಕರ ಕೊಲೆಗೆ ಕಾರಣ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಇನ್ನೂ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: Tarnsposrt department: ರಾಜ್ಯಾದ್ಯಂತ KSRTC ಬಸ್ ದರದಲ್ಲಿ ಭಾರೀ ಏರಿಕೆ !!