Home Karnataka State Politics Updates CM Siddaramaiah: ಕರ್ನಾಟಕದಲ್ಲಿ ಸಿಎಂ ಬದಲಾವಣೆ ಫಿಕ್ಸ್ ?!

CM Siddaramaiah: ಕರ್ನಾಟಕದಲ್ಲಿ ಸಿಎಂ ಬದಲಾವಣೆ ಫಿಕ್ಸ್ ?!

CM Siddaramaiah

Hindu neighbor gifts plot of land

Hindu neighbour gifts land to Muslim journalist

CM Siddaramaiah: ಸಿಎಂ ಸಿದ್ದರಾಮಯ್ಯನವರು ಎರಡು ದಿನಗಳ ಹಿಂದಷ್ಟೇ ಮುಂದಿನ ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ. ನಮ್ಮದೇ ಸರ್ಕಾರ ಇರುತ್ತದೆ. ಇದರಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಹೇಳಿಕೆಯನ್ನು ನೀಡಿದ್ದರು. ಈ ವಿಚಾರ ರಾಜ್ಯಾದ್ಯಂತ ಬಹಳಷ್ಟು ಮಹತ್ವ ಪಡೆದಿತ್ತು. ಆದರೆ ಈ ಬೆನ್ನಲ್ಲೇ ಸಿದ್ದರಾಮಯ್ಯನವರು(CM Siddaramaiah)ಯೂಟರ್ನ್ ಹೊಡೆದಿದ್ದು, ನಾನು ಈ ರೀತಿ ಹೇಳೇ ಇಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಹೌದು, ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ವಿಚಾರ ಬಹಳ ಚರ್ಚೆಯಾಗುತ್ತಿದೆ. ಎರಡೂ ವರೆ ವರ್ಷಗಳ ಕಾಲ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾರೆ ಮುಂದಿನ ಎರಡೂವರೆ ವರ್ಷ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ವಿಚಾರ ಭಾರಿ ಸದ್ದು ಮಾಡುತ್ತಿದೆ. ಈ ಕುರಿತಂತೆ ಇತ್ತೀಚಿಗಷ್ಟೇ ಸಿದ್ದರಾಮಯ್ಯನವರು ಮುಂದಿನ ಐದು ವರ್ಷಗಳ ಕಾಲ ನಾನೆ ಸಿಎಂ ಎಂದು ಹೇಳಿ ಎಲ್ಲಾ ಗೊಂದಲಗಳಿಗೆ ತೆರಳಿಯುವ ಪ್ರಯತ್ನ ಮಾಡಿದ್ದರು. ಆದರೆ ಈ ಬೆನ್ನಲ್ಲೇ ತಮ್ಮ ಹೇಳಿಕೆಯ ಕುರಿತು ಸಿದ್ದರಾಮಯ್ಯನವರು ನಾನು ಹಾಗೆ ಹೇಳೇ ಇಲ್ಲ ಎಂದು ಯೂಟರ್ನ್ ಹೊಡೆದಿದ್ದಾರೆ. ನೇರ, ದಿಟ್ಟ ಮುಖ್ಯಮಂತ್ರಿಗಳ ಈ ವಿಚಿತ್ರ ನಡೆ ಎಲ್ಲರಿಗೂ ಅಚ್ಚೆತ್ತು ಉಂಟುಮಾಡಿದೆ.

ಮೊನ್ನೆ ಮೊನ್ನೆ ತಾನೆ ಕರ್ನಾಟಕ ನಾಮಕರಣದ 50 ವರ್ಷದ ಸಂಭ್ರಮಕ್ಕಾಗಿ ವಿಜಯನಗರದ ಹಂಪಿಗೆ ಬಂದ ಸಿದ್ದರಾಮಯ್ಯನವರು ಮಾಧ್ಯಮಗಳೊಂದಿಗೆ ಮಾತನಾಡುವಾಗ ಸಿಎಂ ಬದಲಾವಣೆ ಕುರಿತು ಪ್ರಶ್ನೆ ಎದುರಾಗಿತ್ತು. ಈ ಪ್ರತಿಕ್ರಿಯಿಸಿದ ಅವರು ನಾನು ಈಗ ಮುಖ್ಯಮಂತ್ರಿ, ಮುಂದಿನ 5 ವರ್ಷ ನಮ್ಮೇ ಸರ್ಕಾರ ಇರುತ್ತೆ. ಡಿಸಿಎಂ ವಿಚಾರ ತಿರ್ಮಾನ ಮಾಡೋದು ಹೈಕಮಾಂಡ್. ನಮ್ಮದು ನ್ಯಾಷನಲ್ ಪಾರ್ಟಿ. ಏನೇ ತೀರ್ಮಾನ ಆದರೂ ಹೈಕಮಾಂಡ್ ಜೊತೆ ಚರ್ಚೆ ಮಾಡಿಯೇ ಆಗೋದು ಎಂದು ಉತ್ತರಿಸಿ ಪರೋಕ್ಷವಾಗಿ ನಾನೇ 5 ವರ್ಷವೂ ಸಿಎಂ ಆಗಿರುತ್ತೇನೆ ಎಂದಿದ್ದರು. ಆದರೆ ಇದೀಗ ಸಿಎಂ ಸಿದ್ದರಾಮಯ್ಯ ಈ ಹೇಳಿಕೆ ಕುರಿತು ಉಲ್ಟಾ ಹೊಡೆದಿದ್ದಾರೆ.

ಅಂದಹಾಗೆ ನಿನ್ನೆ ದಿನ ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಗದಗದಲ್ಲಿ ಮಾತನಾಡಿದ ಅವರು, ನಾನೊಂದು ಹೇಳಿದರೆ ನೀವೊಂದು ಬರೆಯುತ್ತೀರಿ. ನಾನು ಆ ಅರ್ಥದಲ್ಲಿ ಹೇಳಿಲ್ಲ. ಹೈಕಮಾಂಡ್ ವಿಚಾರಕ್ಕೆ ನಾವು ಬದ್ಧ ಎಂದು ಹೇಳಿದ್ದೆ. ನಮ್ಮದು ರಾಷ್ಟ್ರೀಯ ಪಕ್ಷ. ಎಲ್ಲಾ ರಾಷ್ಟ್ರ ನಾಯಕರೇ ತೀರ್ಮಾನ ಮಾಡೋದು ಎಂದು ಹೇಳಿದ್ದಾರೆ. ಹೀಗಾಗಿ ಪಕ್ಷದ ಶಾಸಕರು, ವರಿಷ್ಠರು ಹೇಳುವಂತೆ ಸಿದ್ದರಾಮಯ್ಯ 2.5 ವರ್ಷ ಮಾತ್ರ ಮುಖ್ಯಮಂತ್ರಿ ಆಗಿದ್ದು, ಮುಂದೆ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರಾ? ಸಿಎಂ ಬದಲಾವಣೆ ಫಿಕ್ಸಾ? ಎಂಬ ಅನುಮಾನಗಳು ಮೂಡಿವೆ.

ಪಕ್ಕ ಕುಳಿತರು ಮಾತನಾಡದ ಸಿಎಂ- ಡಿಸಿಎಂ!!
ಬಹುಶಃ ಸಿದ್ದರಾಮಯ್ಯನವರ 5 ವರ್ಷವೂ ನಾನೇ ಸಿಎಂ ಹೇಳಿಕೆಯಿಂದ ಡಿಸಿಎಂ ಡಿಕೆ ಶಿವಕುಮಾರ್ ಅವರು ಮುನಿಸಿಕೊಂಡಂತೆ ಕಾಣುತ್ತದೆ. ಯಾಕೆಂದರೆ ಗದಗದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಅಕ್ಕ ಪಕ್ಕ ಕುಳಿತರೂ ಒಬ್ಬರೂ ತುಟಿ ಬಿಚ್ಚಲಿಲ್ಲ. ಪರಸ್ಪರ ಮಾತನಾಡಲಿಲ್ಲ. ಮುಖವನ್ನೂ ನೋಡಲಿಲ್ಲ.

ಇದನ್ನೂ ಓದಿ: Government employees : ಹೊಸ ವರ್ಷಕ್ಕೆ ಸರ್ಕಾರಿ ನೌಕರರ ವೇತನದಲ್ಲಿ ಮತ್ತೆ ಭರ್ಜರಿ ಏರಿಕೆ