Bigg Boss: ಬಿಗ್‌ಬಾಸ್‌ ಒಟಿಟಿ ವಿಜೇತ ಅರೆಸ್ಟ್‌; ಹಾವಿನ ವಿಷ ಬಳಕೆ ಆರೋಪ!!!

Entertainment news Bigg boss ott winner elvish yadav arrested for holding snakes at Rave party

Bigg Boss: ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಸಿದ ಆರೋಪದ ಮೇರೆಗೆ ಯೂಟ್ಯೂಬರ್, ಎಲ್ವಿಶ್ ಯಾದವ್ (Bigg Boss ott winner Elvish Yadav)ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Bigg Boss

ದೆಹಲಿ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿನ ವಿವಿಧ ಫಾರ್ಮ್ ಹೌಸ್‌ಗಳಲ್ಲಿ ರೇವ್ ಪಾರ್ಟಿಗಳನ್ನು ಆಯೋಜಿಸಲಾಗಿದ್ದ ಕುರಿತ ಮಾಹಿತಿಯನ್ನು ಐವರು ವ್ಯಕ್ತಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಎಲ್ವಿಶ್ ಯಾದವ್ ಅವರು ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ಗಾಗಿ ವಿಡಿಯೊಗಳನ್ನು ಶೂಟ್ ಮಾಡಲು ಹಾವುಗಳನ್ನು ಬಳಸಿದ್ದಾರೆ ಎಂದು ಕೂಡ ಅವರು ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.ಪ್ರಾಣಿ ರಕ್ಷಣಾ ಎನ್‌ಜಿಒ ದೂರಿನ ಮೇರೆಗೆ ನವೆಂಬರ್‌ 2ರ ಸಂಜೆ ನೋಯ್ಡಾದಲ್ಲಿ ಸೆಕ್ಟರ್ 49ರಲ್ಲಿ ರೇವ್ ಪಾರ್ಟಿಯೊಂದರ ಮೇಲೆ ದಾಳಿ ನಡೆಸಿದ ನಂತರ ನೋಯ್ಡಾ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ವಿವಿಧ ಸ್ಥಳಗಳಿಂದ ಹಾವುಗಳನ್ನು ಹಿಡಿದು ಅವುಗಳ ವಿಷವನ್ನು ಹೊರತೆಗೆಯಲಾಗುತ್ತಿತ್ತು. ಎಲ್ವಿಶ್ ಯಾದವ್‌ ಅವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿತ್ತು. ಪಾರ್ಟಿಗಳಲ್ಲಿ ವಿಷವನ್ನು ಪೂರೈಸಲು ಅವರು ಭಾರಿ ಮೊತ್ತದ ಹಣವನ್ನು ಸಂಗ್ರಹಿಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಹಾವು ಮತ್ತು ಅವುಗಳ ವಿಷವನ್ನು ಸರಬರಾಜು ಮಾಡುತ್ತಿದ್ದ ಇವರ ಗ್ಯಾಂಗ್‌ನ ಐವರು ಸದಸ್ಯರನ್ನು ನೋಯ್ಡಾದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿದೇಶಿ ಪ್ರಜೆಗಳಿಗೂ ಆತಿಥ್ಯ ನೀಡಿದ ರೇವ್ ಪಾರ್ಟಿಗಳಲ್ಲಿ ಭಾಗವಹಿಸಿದ್ದ ಕೆಲವರು ಹಾವಿನ ವಿಷವನ್ನು ತೆಗೆದುಕೊಂಡಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಎಫ್‌ಐಆರ್‌ನಲ್ಲಿ ಎಲ್ವಿಶ್ ಯಾದವ್ ಸೇರಿದಂತೆ ಆರು ಮಂದಿಯ ಹೆಸರುಗಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆರು ಆರೋಪಿಗಳ ಪೈಕಿ ಐವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು ಆದರೆ ಎಲ್ವಿಶ್ ಯಾದವ್ ಅವರನ್ನು ಇನ್ನೂ ಬಂಧಿಸಲಾಗಿಲ್ಲ ಎನ್ನಲಾಗಿದೆ.

ಆರೋಪಿಯಿಂದ ಐದು ನಾಗರಹಾವು ಸೇರಿದಂತೆ ಒಂಬತ್ತು ಹಾವುಗಳು ಹಾಗೂ ಹಾವಿನ ವಿಷವನ್ನು ವಶಪಡಿಸಿಕೊಳ್ಳಲಾಗಿದ್ದು, ಹಾವುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆಕ್ಟರ್ 51ರ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾವಿನ ವಿಷ ಲಭ್ಯವಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತರನ್ನು ಆಗ್ನೇಯ ದೆಹಲಿಯ ಬದರ್‌ಪುರದ ಮೊಹರ್‌ಬಂದ್ ಗ್ರಾಮದ ನಿವಾಸಿಗಳಾದ ರಾಹುಲ್(32), ತೀತುನಾಥ್ (45), ಜೈಕರನ್ (50), ನಾರಾಯಣ್ (50) ಮತ್ತು ರವಿನಾಥ್ (45) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: BEML JObs 2023: ಬಿಇಎಂಎಲ್‌ನಿಂದ ಉದ್ಯೋಗಾವಕಾಶ: ವೇತನ ರೂ.60000-300000 ವರೆಗೆ, ಈಗಲೇ ಅರ್ಜಿ ಸಲ್ಲಿಸಿ

Leave A Reply

Your email address will not be published.