Puttur: ಬಡಗನ್ನೂರಿನಲ್ಲಿ ಅಡಿಕೆ ಕಳ್ಳತನದ 4 ಆರೋಪಿಗಳ ಬಂಧನ , ರೂ 4,15,925/- ಮೌಲ್ಯದ ಸೊತ್ತು ವಶಕ್ಕೆ
Puttur news 4 accused of arecanut theft arrested in Badgannur
Puttur: ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಕೊಯಿಲಾ ಎಂಬಲ್ಲಿರುವ ನವೀನ ಕುಮಾರ ರೈ ರವರ ಹಳೆಯ ಮನೆಯ ಕೊಟ್ಟಿಗೆಯ ಅಟ್ಟದಲ್ಲಿದ್ದ ಎನ್ ಕೆ ಆರ್ ಎಂದು ಮಾರ್ಕ್ ಮಾಡಿರುವ ಸುಮಾರು 23 ಗೋಣಿ ಸುಲಿಯದ ಅಡಿಕೆಯನ್ನು ದಿನಾಂಕ 12-10-2023 ರಂದು ಬೆಳಿಗ್ಗೆ 08:00 ಗಂಟೆಯಿಂದ ದಿನಾಂಕ 26-10-2023 ರ ಬೆಳಿಗ್ಗೆ 11:00 ಘಂಟೆ ಮದ್ಯೆ ಯಾರೋ ಕಳ್ಳರು ಕಳುವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು (Puttur)ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ 1) ಶ್ರವಣ್ ಕೆ, ಪ್ರಾಯ 20 ವರ್ಷ, ತಂದೆ:ಬಾಸ್ಕರ್ ನಾಯರ್, ವಾಸ:ಕೊಯ್ಲ ಮನೆ, ಬಡಗನ್ನೂರು ಗ್ರಾಮ, ಪುತ್ತೂರು ತಾಲೂಕು 2) ಜಯಚಂದ್ರ, ಪ್ರಾಯ: 21 ವರ್ಷ, ವಾಸ: ಬಾಣಪದವು ಮನೆ, ತಂದೆ:ರವಿ ಶಂಕರ್, ವಾಸ: ಬಡಗನ್ನೂರು ಗ್ರಾಮ, ಪುತ್ತೂರು ತಾಲೂಕು, 3) ಅಶೋಕ, ಪ್ರಾಯ:24 ವರ್ಷ, ತಂದೆ: ರಮೇಶ, ವಾಸ: ಡೊಬ್ಬಟ್ಟಗಿರಿ ಮನೆ, ನಿಡ್ಪಳ್ಳಿ ಗ್ರಾಮ, ಪುತ್ತೂರು ತಾಲೂಕು, 4) ಪುನೀತ್, ಪ್ರಾಯ: 20 ವರ್ಷ, ತಂದೆ: ಮೋಹನ, ವಾಸ:ಕಲ್ಲಮೂಲೆ ಮನೆ, ನಿಡ್ಪಳ್ಳಿ ಗ್ರಾಮ, ಪುತ್ತೂರು ತಾಲೂಕು. ರವರನ್ನು ಬಂದಿಸಿ, ಸುಮಾರು ರೂ 1,55,925/- ಮೌಲ್ಯದ ಅಡಿಕೆ ಹಾಗೂ ಕಳವು ಮಾಡಲು ಉಪಯೋಗಿಸಿದ ಸ್ವಿಪ್ಟ್ ಕಾರು ಮತ್ತು ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಮೌಲ್ಯ ಸುಮಾರು ರೂ 4,15,925/- ಆಗಿರುತ್ತದೆ.
ಈ ಪ್ರಕರಣವನ್ನು ಬೇದಿಸುವಲ್ಲಿ ದ ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ ಬಿ ರಿಷ್ಯತ್ ಮತ್ತು ದ ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಎಮ್ ಎನ್ ರವರ ನಿರ್ದೇಶನದಲ್ಲಿ ಪುತ್ತೂರು ಉಪಾಧೀಕ್ಷಕರಾದ ಡಾ. ಗಾನ ಪಿ. ಕುಮಾರ್ ರವರ ಮಾರ್ಗದರ್ಶನದಲ್ಲಿ , ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ರವಿ.ಬಿ.ಎಸ್, ರವರ ಆದೇಶದಂತೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಧನಂಜಯ ಬಿ.ಸಿ ರವರ ನೇತೃತ್ವದಲ್ಲಿ ಎಎಸ್ಐ ಮುರುಗೇಶ್, ಸಿಬ್ಬಂದಿಗಳಾದ ಬಾಲಕೃಷ್ಣ, ಅದ್ರಾಮ, ಪ್ರವೀಣ್ ರೈ, ಹರೀಶ್ ಗೌಡ, ದಯಾನಂದ, ಸುಂದರ್, ವೆಂಕಪ್ಪ, ಸಲೀಂ, ನಾಗೇಶ್ ಕೆ ಸಿ, ಮುನಿಯ ನಾಯ್ಕ, ಕಾರ್ತಿಕ್, ಯುವರಾಜ ನಾಯ್ಕ, ಚಾಲಕರಾದ ಯೋಗೀಶ್ ಭಾಗವಹಿಸಿದ್ದಾರೆ.