Solar Pumpset: ರೈತರಿಗೆ ಖುಷಿ ಸುದ್ದಿ- ಸೋಲಾರ್ ಪಂಪ್‌ಸೆಟ್‌ಗಾಗಿ ಅರ್ಜಿ ಆಹ್ವಾನ – ಸಿಗೋ ಸಹಾಯಧನ ಎಷ್ಟು, ಅರ್ಜಿ ಸಲ್ಲಿಸುವುದು ಎಲ್ಲಿ ?

Agriculture news subsidy for solar pump set up to 1.5 lakhs latest news

Solar Pumpset: ರೈತರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ(State)ಹಾಗೂ ಕೇಂದ್ರ ಸರ್ಕಾರ(Central Government)ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತೋಟಗಾರಿಕೆ ಇಲಾಖೆ ವತಿಯಿಂದ ವಿನೂತನ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಸಹಾಯಧನ ಯೋಜನೆಯಡಿ ಸೋಲಾರ್‌ ಪಂಪ್‌ಸೆಟ್‌ (Solar Pumpset)ಅಳವಡಿಸಲು 2023-24ನೇ ಸಾಲಿನ ಸಹಾಯಧನ ನೀಡಲಿದೆ. ಈ ಯೋಜನೆಯಡಿ ಸಾಮಾನ್ಯ ವರ್ಗದ ರೈತರು ಹಾಗೂ ಪರಿಶಿಷ್ಟ ಜಾತಿ, ಪಂಗಡದ ಫ‌ಲಾನುಭವಿ ರೈತರು ಶೇ.50 ಸಹಾಯಧನ ಪಡೆದುಕೊಳ್ಳಬಹುದು.

ಮಾರ್ಗಸೂಚಿ ಅನುಸಾರ ಫ‌ಲಾನುಭವಿಗಳ ಜೇಷ್ಠತಾ ಆಧಾರದ ಅನುಸಾರ ಸಹಾಯಧನಕ್ಕೆ ಪರಿಗಣಿಸಲಾಗುತ್ತದೆ. ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅವಶ್ಯಕ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಸೋಲಾರ್‌ ಪಂಪ್‌ ಸೆಟ್‌ಗಳಿಗೆ ವಿಮೆ ಮಾಡಿಸುವುದು ಕಂಪೆನಿಯ ಹೊಣೆಯಾಗಿದ್ದು, ಅವರಿಂದ ಸೂಕ್ತ ದಾಖಲೆ ಸ್ವೀಕರಿಸಲಾಗುತ್ತದೆ.ಅಧಿಕೃತ ಸಂಸ್ಥೆಯಿಂದ ಮಾತ್ರ ಸೋಲಾರ್‌ ಪಂಪ್‌ಸೆಟ್‌ ಖರೀದಿ ಮಾಡಬೇಕು ಎಂಬುದನ್ನು ಗಮನಿಸಬೇಕು.
ಬೇಕಾಗುವ ದಾಖಲೆಗಳು ಹೀಗಿವೆ:
*ಪಹಣಿ
*ಆಧಾರ್‌ ಕಾರ್ಡ್‌
*ಬ್ಯಾಂಕ್‌ ಪಾಸ್‌ ಬುಕ್‌
*ಜಾತಿ-ಆದಾಯ ಪತ್ರ
* ಬೆಳೆ ದೃಢೀಕರಣ ಪತ್ರ
* 20 ರೂ.ನ ಬಾಂಡ್‌ ಪೇಪರ್‌
*ಅರ್ಜಿದಾರರ ಫೋಟೋ
* ಎಫ್ಐಡಿ ಸಂಖ್ಯೆ

ಸಹಾಯಧನ ಎಷ್ಟು ಸಿಗಲಿದೆ ಎಂದು ಗಮನಿಸಿದರೆ,
# 5ಎಚ್‌ಪಿ ಮತ್ತು ಅದಕ್ಕಿಂತ ಹೆಚ್ಚಿನ ಪಂಪ್‌ಸೆಟ್‌ಗಳಿಗೆ 3 ಲಕ್ಷ ರೂ.ಗಳ ಶೇ.50 ರಂತೆ 1.50 ಲಕ್ಷಕ್ಕೆ ಮಿತಿಗೊಳಿಸಿ ಸಹಾಯಧನ ಸಿಗಲಿದೆ.
# 3 ಎಚ್‌.ಪಿ.ಸೋಲಾರ್‌ ಪಂಪ್‌ಸೆಟ್‌ಗೆ 1 ಲಕ್ಷ ರೂ., 5 ಎಚ್‌ಪಿ ಹಾಗೂ ಹೆಚ್ಚಿನ ಸಾಮರ್ಥ್ಯದ ಪಂಪ್‌ ಸೆಟ್‌ಗಳಿಗೆ 1.50 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ.
# 3 ಎಚ್‌ಪಿಯ ಸೋಲಾರ್‌ ಪಂಪ್‌ ಸೆಟ್‌ಗಳಿಗೆ ಘಟಕ ವೆಚ್ಚ 1.98 ಲಕ್ಷ ರೂ.ಗೆ ಶೇ.50ರಂತೆ 0.99 ಲಕ್ಷಕ್ಕೆ ಮಿತಿಗೊಳಿಸಿ ಸಹಾಯಧನ ನೀಡಲಾಗುತ್ತದೆ.

ಇದನ್ನೂ ಓದಿ: Good News: ಸರ್ಕಾರಿ ಪದವಿ ಕಾಲೇಜು ನೌಕರರಿಗೆ ಸಂತಸದ ಸುದ್ದಿ – ಗೌರವ ಧನ ಬಿಡುಗಡೆ ಕುರಿತು ಇಲ್ಲಿದೆ ಬಿಗ್ ಅಪ್ಡೇಟ್

Leave A Reply

Your email address will not be published.