H D Devegowda: ಲೋಕಸಭಾ ಚುನಾವಣೆ- BJP ಯಿಂದ ಎಚ್ ಡಿ ದೇವೇಗೌಡ ಸ್ಪರ್ಧೆ ?!

Politics news Lok sabha election 2024 BJP give ticket to jds leader HD deve Gowda

H D Devegowda: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್(Congress) ಅನ್ನು ಕಟ್ಟಿ ಹಾಕಲು ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎರಡು ಮೈತ್ರಿ ಮಾಡಿಕೊಂಡು ರಾಜಕೀಯ ತಂತ್ರ ಹೆಣೆಯುತ್ತಿವೆ. ಈ ಬೆನ್ನಲ್ಲೇ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದ್ದು ತಮ್ಮ ಪಕ್ಷದಿಂದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದಂತ ಹೆಚ್ ಡಿ ದೇವೇಗೌಡರವರನ್ನು(H D Devegowda)ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಚಿಂತನೆ ನಡೆಸಿದೆ.

ಹೌದು, ರಾಜಕೀಯದಲ್ಲಿ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಕರ್ನಾಟಕದಲ್ಲಿ ಆಗುತ್ತಿರುವ ಬೆಳವಣಿಗೆಗಳೇ ಸಾಕ್ಷಿಯಾಗಿವೆ. ಬದ್ಧ ವೈರಿಗಳಾಗಿದ್ದ ಜೆಡಿಎಸ್ ಹಾಗೂ ಬಿಜೆಪಿ ಚುನಾವಣಾ ಮೈತ್ರಿ ಮಾಡಿಕೊಂಡು ಲೋಕಸಮರವನ್ನು ಎರುದಿಸಲು ಸಜ್ಜಾಗಿವೆ. ಈ ಬೆನ್ನಲ್ಲೇ ಲೋಕಸ ಸಮರದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಕಣಕ್ಕಿಳಿಸಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ. ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕಲು ಅವರ ಸ್ಪರ್ಧೆ ಅನಿವಾರ್ಯ ಎಂಬ ನಿಲುವಿಗೆ ಹಲವು ನಾಯಕರು ಬಂದಿದ್ದು ದೊಡ್ಡ ಗೌಡರು ಬಿಜೆಪಿಯಿಂದ ಸ್ಪರ್ಧಿಸೋದು ಪಕ್ಕಾನಾ? ಎಂಬ ಕುತೂಹಲ ಹಲವರಲ್ಲಿ ಶುರುವಾಗಿದೆ.

ಅಂದಹಾಗೆ ದೇವೇಗೌಡರ ಉತ್ಸಾಹ ಬಿಜೆಪಿಯ ಕೇಂದ್ರ ನಾಯಕರಿಗೆ ತುಂಬಾ ಗಮನಸೆಳೆದಿದ್ದು ಅವರನ್ನೇ ಕಣಕ್ಕಿಳಿಸಿದರೆ ಲಾಭವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ಎಂದು ಸ್ವತಃ ಜೆಡಿಎಸ್ ಮುಖಂಡರೇ ಹೇಳುತ್ತಾರೆ. ಇನ್ನು ಕಾಂಗ್ರೆಸ್ ಈ ಸಲ 20 ಸ್ಥಾನಗಳನ್ನು ಗೆಲ್ಲುವ ಹುಮ್ಮಸ್ಸಿನಲ್ಲಿದ್ದು ಈ ಎಲ್ಲ ಕಾರಣಗಳಿಗಾಗಿ ದೊಡ್ಡಗೌಡರನ್ನೇ ಕಣಕ್ಕಿಳಿಸಿದರೆ ಒಕ್ಕಲಿಗ ಪ್ರಭಾವ ಇರುವ ಹಲವು ಕ್ಷೇತ್ರಗಳಲ್ಲಿ ಲಾಭವಾಗುತ್ತದೆ ಎನ್ನುವುದು ಬಿಜೆಪಿ ವರಿಷ್ಠರ ಲೆಕ್ಕಾಚಾರವಾಗಿದೆ.

ಯಾವ ಕ್ಷೇತ್ರದಿಂದ ಗೌಡ್ರು ಕಣಕ್ಕಿಳಿಯಬಹುದು?
ಮೈತ್ರಿ ಪ್ರಯುಕ್ತ ಹಾಸನ ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಸೇರಿ 5 ಕ್ಷೇತ್ರಗಳಿಗೆ.ಜೆಡಿಎಸ್ ಬೇಡಿಕೆ ಇಟ್ಟಿದೆ. ಆದರೆ ಇದಿನ್ನೂ ಫೈನಲ್ ಆಗಿಲ್ಲ. ಆದರೆ ಇದರ ಹೊರತಾಗಿಯೂ ದೇವೇಗೌಡರು ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸಲು ಬಯಸುತ್ತಾರೋ ಆ ಕ್ಷೇತ್ರವನ್ನು ಬಿಜೆಪಿ ಬಿಟ್ಟುಕೊಡಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಅಲ್ಲದೆ ತುಮಕೂರು ತುಂಬಾ ಸುರಕ್ಷಿತ ಕ್ಷೇತ್ರ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: PM Modi: ಪ್ರಧಾನಿ ಮೋದಿಯಿಂದ ಮಸೀದಿ ನಿರ್ಮಾಣಕ್ಕೆ ಸಂಕುಸ್ಥಾಪನೆ !!

Leave A Reply

Your email address will not be published.