Visakhapatnam: ಮತ್ತೊಂದು ರೈಲು ದುರಂತ: ಎರಡು ಪ್ಯಾಸೆಂಜರ್ ರೈಲು ಡಿಕ್ಕಿ – 3 ಸಾವು, 40 ಮಂದಿಗೆ ಗಂಭೀರ ಗಾಯ !

Visakhapatnam train accident Two passenger trains collided 3 dead and 40 injured

Share the Article

ವಿಶಾಖಪಟ್ಟಣಂ : ಆಂಧ್ರ ಪ್ರದೇಶದಲ್ಲಿ, ಇಂದು ಭಾನುವಾರ ಸಂಜೆ ಮತ್ತೊಂದು ರೈಲು ಅವಘಡ ಸಂಭವಿಸಿದೆ. ವಿಶಾಖಪಟ್ಟಣಂ-ಪಲಾಸ ಪ್ಯಾಸೆಂಜರ್ ರೈಲು ಮತ್ತು ವಿಶಾಖಪಟ್ಟಣಂ- ರಗಡ ಪ್ಯಾಸೆಂಜರ್ ರೈಲಿನ ನಡುವೆ ಹಿಂಬದಿ ಢಿಕ್ಕಿ ಸಂಭವಿಸಿದ್ದು ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಈಗಿನ ಮಾಹಿತಿಗಳು ಬಂದಾಗ, 40 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ಬ್ರೇಕಿಂಗ್ ಸುದ್ದಿ ಬಂದಿದೆ.

ಈ ಹಾಲಿ ತಪ್ಪಿದ ನಂತರದ ಮುಖಾಮುಖಿ ಅಪಘಾತದಲ್ಲಿ 3 ಕೋಚ್ಗಳು ಹಳಿ ತಪ್ಪಿದ್ದು, ಸಹಾಯ ಮತ್ತು ಅಂಬ್ಯುಲೆನ್ಸ್ಗಾಗಿ ಸ್ಥಳೀಯ ಆಡಳಿತ ಮತ್ತು ಎನ್ಡಿಆರ್ಎಫ್ಗೆ ತಿಳಿಸಲಾಗಿದೆ. ಅಪಘಾತ ಪರಿಹಾರಕ್ಕಾಗಿ ತಂಡಗಳು ರೈಲುಗಳ ಸ್ಥಳಕ್ಕೆ ತಲುಪಿದೆ ಎಂದು ಅಲ್ಲಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ತಕ್ಷಣಕ್ಕೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ಮತ್ತು ವಿಜಯನಗರದ ಹತ್ತಿರದ ಜಿಲ್ಲೆಗಳಾದ ವಿಶಾಖಪಟ್ಟಣಂ ಮತ್ತು ಅನಕಾಪಲ್ಲಿಯಿಂದ ಆಂಬ್ಯುಲೆನ್ಸ್ ಗಳನ್ನು ಕಳಿಸಲು ಮತ್ತು ಉತ್ತಮ ವೈದ್ಯಕೀಯ ಸೇವೆಯನ್ನು ಒದಗಿಸಲು ಆದೇಶಿಸಿದ್ದಾರೆ. ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

Leave A Reply