Aadhaar Updation Limits: ಆಧಾರ್ ಅನ್ನು ಎಷ್ಟು ಸಲ ಅಪ್ಡೇಟ್ ಮಾಡಬಹುದು ? – ಇದೀಗ ಬಂತು ಹೊಸ ರೂಲ್ಸ್ !
Government news Aadhaar card updation limits and rules know the detail
Aadhaar updation limits : ಇದೀಗ ಸರ್ವಾಂತರ್ಯಾಮಿಯಂತೆ ಎಲ್ಲೆಲ್ಲೂ ಕೇಳಿ ಬರುವ ಒಂದು ಪ್ರಮುಖ ಹೆಸರು ಆಧಾರ್. ಕೆ ವೈ ಸಿ ಮಾಡಿಸಿ, ಬ್ಯಾಂಕಿಗೆ ಲಿಂಕ್ ಮಾಡಿಸಿ, ಆಧಾರ್ ಕೊಡಿ – ಹೀಗೆ ಎಲ್ಲೆಲ್ಲೂ ಆಧಾರ್ ಕಾರ್ಡ್ ಅನಿವಾರ್ಯ ಅನ್ನಿಸಿಬಿಟ್ಟಿದೆ. ಸರ್ಕಾರದ ಒಂದು ಸಣ್ಣ ಸವಲತ್ತನ್ನು ಪಡೆಯಲಂತೂ ಆಧಾರ್ ಇಲ್ಲದೆ ಒಂದು ಹೆಜ್ಜೆ ಮುಂದೆ ಇಡುವಂತಿಲ್ಲ. ಈಗಾಗಲೇ ಕರ್ನಾಟಕದ 92 ಪರ್ಸೆಂಟ್ ಜನರು ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಆದರೆ ಆಧಾರ್ ಕಾರ್ಡ್ ಮಾಡಿಸಿಕೊಂಡಾಗ ಹಲವಾರು ತಪ್ಪುಗಳಾಗಿವೆ. ಹಾಗಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಒಂದು ಅನಿವಾರ್ಯ ಪ್ರಕ್ರಿಯೆ. ಅಲ್ಲದೆ ಕೆಲಸದ ನಿಮಿತ್ತ ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣಿಸುವ ಮತ್ತು ಅಲ್ಲಿಯೇ ಬಹುಕಾಲ ವಾಸಿಸುವ ಜನರ ವಿಳಾಸ ಬದಲಾಗುತ್ತಾ ಇರುತ್ತದೆ ಆಧಾರ್ ಅಪ್ಡೇಟ್ ಮಾಡುವ ಪ್ರಕ್ರಿಯೆ ನಿರಂತರ ಅನ್ನಬಹುದು. ಆದರೆ ಆಧಾರ್ ಕಾರ್ಡ್ ಅನ್ನು ಒಬ್ಬರು ಎಷ್ಟು ಬಾರಿ ಅಪ್ಡೇಟ್( Aadhaar updation limits) ಮಾಡಬಹುದು ಎನ್ನುವ ಬಗ್ಗೆ ನಿಮಗೆ ನಿಖರ ಮಾಹಿತಿ ಇದೆಯೇ ? ಈ ಲೇಖನದ ಮೂಲಕ ನಾವಿಂದು ನಿಖರವಾಗಿ ಒಬ್ಬರು ಎಷ್ಟು ಬಾರಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬಹುದು ಎಂದು ನಾವು ತಿಳಿಸಿ ಕೊಡುತ್ತಿದ್ದೇವೆ.
ಆಧಾರ್ ಅಪ್ಡೇಟ್ ಎಷ್ಟು ಬಾರಿ ಮಾಡಿಕೊಳ್ಳಬಹುದು ?
1). ಓರ್ವ ವ್ಯಕ್ತಿ ಎಷ್ಟು ಸಲ ಬೇಕಿದ್ರೆ ಕೂಡಾ ಅಪ್ಡೇಟ್ ಮಾಡಬಹುದು. ವಿಳಾಸವನ್ನು ಆಧಾರ್ ಕಾರ್ಡಿನಲ್ಲಿ ಅಪ್ಡೇಟ್ ಮಾಡಲು ಮಿತಿಗಳಿಲ್ಲ. ಯಾವಾಗ, ಎಷ್ಟು ಸಲ ಬೇಕಾದರೂ ಅಪ್ಡೇಟ್ ಮಾಡಬಹುದು.
2) ವ್ಯಕ್ತಿಗಳ ಫೋನು ನಂಬರ್ ಆಗಾಗ ಬದಲಾಗುತ್ತಿರುತ್ತದೆ. ಫೋನ್ ಸಂಖ್ಯೆಯ ಬದಲಾವಣೆ ಆಗಿದ್ದರೆ, ಅಗತ್ಯಕ್ಕೆ ಅನುಗುಣವಾಗಿ ಎಷ್ಟು ಬಾರಿ ಕೂಡ ಆಧಾರ್ ಅಪ್ಡೇಟ್ ಮಾಡಬಹುದು.
3) ತನ್ನ ಹೆಸರಿನಲ್ಲಿ ಅಥವಾ ತಂದೆ ಹೆಸರಿನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದರೆ ಅದನ್ನು ಕೇವಲ 2 ಬಾರಿ ಮಾತ್ರ ಅಪ್ಡೇಟ್ ಮಾಡಿ ಬದಲಿಸಿಕೊಳ್ಳಬಹುದು
4) ತನ್ನ ಡೇಟ್ ಆಫ್ ಬರ್ತ್ ವಿಷಯದಲ್ಲಿ ಮಾತ್ರ ಕೇವಲ 2 ಸಲ ಅಪ್ಡೇಟ್ ಮಾಡಬೇಕು. ಅಂದ್ರೆ, 2 ಸಲ ಮಾತ್ರ, ಈಗ ಇರುವ ಆಧಾರ್ ನಲ್ಲಿ ತಪ್ಪಿದ್ದರೆ ಅದನ್ನು ಸರಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
5) ತಂದೆಯ ಹೆಸರು ಬದಲಿಸಲು ಕೇವಲ 2 ಬಾರಿ ಮಾತ್ರ ಅವಕಾಶವಿದೆ
ಸ್ವಂತ ಹೆಸರು, ತಂದೆ ಹೆಸರು ಮತ್ತು ಹುಟ್ಟಿದ ದಿನಾಂಕಗಳು ಪದೇಪದೇ ಬದಲಾಗುವುದಿಲ್ಲವಲ್ಲ ? ಹಾಗಾಗಿ ಈ ವಿಷಯದಲ್ಲಿ ಹಲವು ಬಾರಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಅವಕಾಶ ಇಲ್ಲ. ಕೇವಲ 2 ಬಾರಿ ಮಾತ್ರ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಲು ಅವಕಾಶ ನೀಡಲಾಗಿದೆ. ಅಲ್ಲಿ ಸರಿಯಾಗಿ ನೋಡಿಕೊಂಡು ಕರೆಕ್ಷನ್ ಮಾಡಿಬಿಟ್ಟರೆ ಆಯ್ತು, ಮುಂದೆ, ಈ ಕಾರಣಕ್ಕೆ ಆಧಾರ್ ಅಪ್ಡೇಟ್ ಮಾಡುವಂತೆಯೇ ಇಲ್ಲ. ಆದರೆ ಒಂದು ವೇಳೆ, ಅಪವಾದ ಎಂಬಂತೆ ಮೂರನೇಯ ಬಾರಿ ಹೆಸರಿನಲ್ಲಿ ಬದಲಾವಣೆ ಮಾಡಬೇಕು ಅನ್ನಿಸಿದಲ್ಲಿ ಕೂಡಾ ಸಣ್ಣ ಅವಕಾಶ ಒಂದಿದೆ. ಅದರ ಬಗ್ಗೆ ವಿವರವಾಗಿ ಮುಂದಿನ ಸಂಚಿಕೆಯಲ್ಲಿ ವಿವರಿಸುತ್ತೇವೆ.
ಇದನ್ನೂ ಓದಿ: ಶಾಲಾ ಕಾಲೇಜುಗಳಲ್ಲಿ ಉಚಿತ ಶಿಕ್ಷಣ, ರೈತರ ಸಾಲ ಮನ್ನ- ಕಾಂಗ್ರೆಸ್ ನಿಂದ ಮಹತ್ವದ ಘೋಷಣೆ