Putturu: KSRTC ಬಸ್‌ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ- ಆರೋಪಿ ಬಂಧನ!

Share the Article

Putturu: ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಕೆಎಸ್‌ಆರ್ಟಿಸಿ ಬಸ್‌ನಲ್ಲಿ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಯೊಂದು ನಡೆದಿದೆ. ಈ ಆರೋಪದ ಮೇಲೆಗೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಪುತ್ತೂರು ಮಹಿಳಾ ಠಾಣೆ ಪೊಲೀಸರು ಪೋಕ್ಸೋ ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ವ್ಯಕ್ತಿ ಕಿರುಕುಳ ನೀಡಿದ್ದನ್ನು ಬಾಲಕಿ ಬಸ್‌ನಲ್ಲಿದ್ದವರಲ್ಲಿ ಹೇಳಿದ್ದು, ಪ್ರಯಾಣಿಕರು ಆತನನ್ನು ಇಳಿಯಲು ಬಿಡದೆ ತಡೆ ಹಿಡಿದಿದ್ದರೆನ್ನಲಾಗಿದೆ. ನಂತರ ಬಸ್‌ನ್ನು ಪೊಲೀಸ್‌ ಠಾಣೆಯ ಬಳಿ ತರಲಾಯಿತು. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆಯ ಸುದ್ದಿ ಹರಡುತ್ತಿದ್ದಂತೆ ಯುವಕರು ಮಹಿಳಾ ಪೊಲೀಸ್‌ ಠಾಣೆಯ ಮುಂದೆ ಬಂದು ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.

 

ಇದನ್ನು ಓದಿ: ವೃದ್ಧೆ ತಾಯಿಗೆ ಅಮಾನುಷವಾಗಿ ಥಳಿಸಿದ ಲಾಯರ್‌ ಮಗ! ಆಕೆ ಕಿರುಚುತ್ತಿದ್ದರೂ ಕರುಣೆ ಬರಲಿಲ್ಲ- ವೀಡಿಯೋ ವೈರಲ್‌!!!

Leave A Reply