Home ದಕ್ಷಿಣ ಕನ್ನಡ Soujanya case: ಸೌಜನ್ಯಾ ನ್ಯಾಯ ಹೋರಾಟಕ್ಕೆ ಭಾರೀ ಹಿನ್ನಡೆ: ಸಿಎಂ ಸಿದ್ದರಾಮಯ್ಯ ಕೊಟ್ರು ಶಾಕ್ ಶಾಕಿಂಗ್...

Soujanya case: ಸೌಜನ್ಯಾ ನ್ಯಾಯ ಹೋರಾಟಕ್ಕೆ ಭಾರೀ ಹಿನ್ನಡೆ: ಸಿಎಂ ಸಿದ್ದರಾಮಯ್ಯ ಕೊಟ್ರು ಶಾಕ್ ಶಾಕಿಂಗ್ ಹೇಳಿಕೆ !

Hindu neighbor gifts plot of land

Hindu neighbour gifts land to Muslim journalist

Soujanya case: ಸೌಜನ್ಯ ಪ್ರಕರಣದ ಬಗ್ಗೆ ಮೇಜರ್ ಅಪ್ಡೇಟ್ ಬಂದಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೌಜನ್ಯ ಪ್ರಕರಣದ (Soujanya case) ತನಿಖೆಯ ಬಗ್ಗೆ ಮಾತನಾಡಿದ್ದಾರೆ. ಸುದ್ದಿಗಾರರು ಕೇಳಿದ ಸೌಜನ್ಯ ಮರು ತನಿಖೆಯ ಬಗೆಗಿನ ಪ್ರಶ್ನೆಗೆ ಉತ್ತರಿಸಿ ಸಿದ್ದರಾಮಯ್ಯನವರು ನೀಡಿದ ಹೇಳಿಕೆ ಇದೀಗ ಸೌಜನ್ಯಾ ಪರ ಹೋರಾಟಗಾರರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಇಂದು ತಮ್ಮ ಮಂಗಳೂರು ಭೇಟಿಯ ಸಂದರ್ಭ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯನವರು ಸೌಜನ್ಯ ಪ್ರಕರಣದ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇವತ್ತು, ಬಂಟರ ಸಮಾರಂಭ ಒಂದಕ್ಕೆ ಆಗಮಿಸುವ ವೇಳೆ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಆಗ ಈ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
“ಮರು ತನಿಖೆ ಕೆಲಸ ನಮ್ಮದಲ್ಲ, ಅದು ಕೇಂದ್ರ ಸರ್ಕಾರದ್ದು ಎಂದು ಜಾರಿಕೊಂಡ ಸಿದ್ದರಾಮಯ್ಯ. “ಅದು ಸಿಬಿಐನವರು ಮಾಡಿದ್ದು, ಕೇಂದ್ರ ಸರಕಾರದವರು ಈಗ ಮಾಡಬೇಕು, ನಾವು ಏನು ಮಾಡಲು ಬರುವುದಿಲ್ಲ” ಎಂದು ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ. ಈ ಹಿಂದೆ ಕೂಡಾ, ಸುಮಾರು ಮೂರು ತಿಂಗಳ ಕೆಳಗೆ ಗೃಹಮಂತ್ರಿ ಜಿ. ಪರಮೇಶ್ವರ್ ರವರು, ”ಸೌಜನ್ಯ ಪ್ರಕರಣ ಮುಗಿದ ಅಧ್ಯಾಯ” ಎಂದಿದ್ದರು. ಅವರ ಮಾತು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಸಿಬಿಐ ತನಿಖೆ ಮಾಡಿದವರು ಅವರು. ನಾವು ಏನು ಕೂಡಾ ಮಾಡಲು ಬರುವುದಿಲ್ಲ. ಮರುತನಿಖೆಗೆ ಕೇಂದ್ರ ಸರ್ಕಾರವೇ ಆದೇಶ ಕೊಡಬೇಕು. ಸಿಬಿಐ ಕೇಂದ್ರದ ಅಧೀನದಲ್ಲಿದೆ, ನಮ್ಮ ಕೆಳಗೆ ಇಲ್ಲ. ಅವರು ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವಾಗಲೇ ಸಿಬಿಐ ತನಿಖೆ ನಡೆದು ಆರೋಪಿ ಅಕ್ವಿಟ್ ಆದದ್ದು. ಮತ್ತೆ ಅಪೀಲು ಮಾಡಬೇಕಾ ಅಥವಾ ರೀ ಇನ್ವೆಸ್ಟಿಗೇಷನ್ ಮಾಡಬೇಕಾ ಅನ್ನುವುದು ರಾಜ್ಯ ಸರ್ಕಾರದ್ದಲ್ಲ, ಅದು ಕೇಂದ್ರ ಸರ್ಕಾರದ ಕೈಯಲ್ಲಿ ಇದೆ ಎಂದು ಹೇಳಿ ಸಿದ್ದರಾಮಯ್ಯನವರು ಜಾರಿಕೊಂಡಿದ್ದಾರೆ.

ಮುಖ್ಯಮಂತ್ರಿ ಅವರ ಈ ಹೇಳಿಕೆಯಿಂದ ಸೌಜನ್ಯ ಕುಟುಂಬಕ್ಕೆ ಮತ್ತು ಮನೆಯವರಿಗೆ ತೀವ್ರ ನಿರಾಸೆ ಉಂಟಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿತ್ತು ಕುಟುಂಬ. ತಾನು ದೀನರ ದಲಿತರ ಸಮಾಜವಾದಿ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು ಕೂಡ ತಮಗೆ ಸಹಾಯ ಮಾಡದೇ ಹೋದರೇ ಎನ್ನುವುದು ಹೋರಾಟಗಾರರ ನಿರಾಶಾದಾಯಕ ಮಾತು.

ಇದನ್ನೂ ಓದಿ: Koragajja: ಕೊರಗಜ್ಜ ಸಿನಿಮಾ ಶೂಟಿಂಗ್‌ ಸಂದರ್ಭ ಕಿಡಿಗೇಡಿಗಳಿಂದ ಅಡ್ಡಿ; ಚಿತ್ರೀಕರಣ ಸ್ಥಗಿತ, ನಟಿ ಶುಭ ಪೂಂಜಾ ಜೊತೆ ಅಸಭ್ಯ ವರ್ತನೆ!!!