Instagram: ಇನ್‌ಸ್ಟಾಗ್ರಾಂ ಬಳಕೆದಾರರಿಗೆ ರಾತ್ರೋ ರಾತ್ರಿ ಭರ್ಜರಿ ಗುಡ್ ನ್ಯೂಸ್ !
Technology news instagram update good news for Instagram users latest news
Instagram: ಇನ್‌ಸ್ಟಾಗ್ರಾಂ (Instagram) ಬಳಕೆದಾರರಿಗೆ ರಾತ್ರೋ ರಾತ್ರಿ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಂ ಇದೀಗ ಬಳಕೆದಾರರಿಗೆ ಹೊಸ ಫೀಚರ್ ನೀಡುತ್ತಿದೆ. ಇದೀಗ ಇನ್‌ಸ್ಟಾಗ್ರಾಂ ಬಳಕೆದಾರರು ತಾವು ಪೋಸ್ಟ್ ಮಾಡುವಾಗ, ಸಂದೇಶ ಕಳುಹಿಸವಾಗ, ಪ್ರತಿಕ್ರಿಯೆ ನೀಡುವಾಗ ಇನ್‌ಸ್ಟಾ ಫೀಡ್‌ನಲ್ಲಿರುವ ಸ್ಟಿಕ್ಕರ್ ಮಾತ್ರ ಬಳಕೆ ಮಾಡಬೇಕಾಗಿಲ್ಲ. ಇನ್‌ಸ್ಟಾಗ್ರಾಂ ಹೊಸ ಹೊಸ ಸ್ಟಿಕ್ಕರ್ ಕ್ರಿಯೇಟ್ ಮಾಡಲು ಅವಕಾಶ ನೀಡಿದೆ. ನಿಮ್ಮ ಫೋಟೋವನ್ನೂ ಸ್ಟಿಕ್ಕರ್ ಆಗಿ ಪರಿವರ್ತಿಸುವ ಟೂಲ್ ಇನ್‌ಸ್ಟಾ ನೀಡುತ್ತಿದೆ.
ನಿಮ್ಮ ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ತೆಗೆದ ಫೋಟೋಗಳನ್ನು ಈ ಟೂಲ್ ಮೂಲಕ ಸ್ಟಿಕ್ಕರ್ ಆಗಿ ಪರಿವರ್ತನೆ ಮಾಡಬಹುದು.
ಫೋಟೋದ ಬ್ಯಾಕ್‌ಗ್ರೌಂಡ್ ತೆಗೆದು ಹಾಕಲಿದೆ. ಮುಖ್ಯ ಫೋಟೋವನ್ನು ಸ್ಟಿಕ್ಕರ್ ಆಗಿ ಪರಿವರ್ತನೆ ಮಾಡಲಿದೆ.
ಸದ್ಯ ಈ ಫೀಚರ್ ಟೆಸ್ಟಿಂಗ್ ಹಂತದಲ್ಲಿದೆ. ಪರೀಕ್ಷೆ ಸಂಪೂರ್ಣ ಯಶಸ್ವಿಗೊಂಡ ಬಳಿಕ ಹೊಸ ಫೀಚರ್ ಎಲ್ಲಾ ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಮುಕ್ತವಾಗಲಿದೆ ಎಂದು ಇನ್‌ಸ್ಟಾಗ್ರಾಂ ಮುಖ್ಯಸ್ಥ ಆ್ಯಡಮ್ ಮೂಸೆರಿ ಈ ಕುರಿತು ಅಪ್‌ಡೇಟ್ ನೀಡಿದ್ದಾರೆ. ಜೊತೆಗೆ ಇನ್‌ಸ್ಟಾಗ್ರಾಂ ಮೂಲಕ ಇದೀಗ ಪ್ರತಿಕ್ರಿಯೆ ಸಂವಹನ ಮತ್ತಷ್ಟು ಆತ್ಮೀಯತೆ ಪಡೆದುಕೊಳ್ಳಲಿದೆ. ಸ್ಟಿಕ್ಕರ್ ಇದೀಗ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಮೂಸೆರಿ ಹೇಳಿದ್ದಾರೆ.
ಇದನ್ನೂ ಓದಿ: HSRP: ವಾಹನ ಮಾಲಿಕರೇ ಗಮನಿಸಿ, ನಂಬರ್ ಪ್ಲೇಟ್ ಬಗ್ಗೆ ರಾಜ್ಯ ಸರ್ಕಾರದಿಂದ ಬಂತೊಂದು ಮಹತ್ವದ ಸೂಚನೆ !!