Health Tips: ಬೊಜ್ಜು ಕರಗಿಸಲು ಬೆಳ್ಳಂಬೆಳಗ್ಗೆಯೇ ನಿಂಬೆ ರಸ ಬೆರೆಸಿ ನೀರು ಕುಡಿಯುತ್ತೀರಾ ?! ಸ್ವಲ್ಪ ಯಾಮಾರಿದ್ರೂ ಈ ಸಮಸ್ಯೆ ತಪ್ಪಿದ್ದಲ್ಲ

Health Tips Drinking lemon water regularly may cause several health issues

Health Tips: ನಿಂಬೆಯಲ್ಲಿರುವ ಔಷಧೀಯ ಗುಣಗಳು ಅನೇಕ ರೋಗಗಳಿಂದ ನಮ್ಮನ್ನು( Health Benefits)ರಕ್ಷಿಸುತ್ತದೆ. ಹೆಚ್ಚಿನ ಮಂದಿ ತೂಕವನ್ನು(Weight Loss)ಇಳಿಸಲು ಪ್ರತಿದಿನ ಬೆಳಿಗ್ಗೆ ನಿಂಬೆ(Lemon)ರಸದೊಂದಿಗೆ ಬೆಚ್ಚಗಿನ ನೀರನ್ನು ಕುಡಿಯುತ್ತಾರೆ. ಈ ನಿಂಬೆಯ ನೀರಿನ(Lemon water) ಸೇವನೆ ದೇಹದಲ್ಲಿರುವ ನೀರಿನ ಕೊರತೆಯನ್ನು ನೀಗಿಸುತ್ತದೆ. ನಿಂಬೆರಸದಿಂದ ಆರೋಗ್ಯ ಪ್ರಯೋಜನವಿದ್ದರು ಕೂಡ ಅತಿಯಾಗಿ ಕುಡಿದರೆ ಹಲವಾರು ಆರೋಗ್ಯ ಸಮಸ್ಯೆ(Health Issues)ಎದುರಾಗುತ್ತದೆ.

ನಿಂಬೆ ನೀರುLemon water , ಹೆಚ್ಚಿನ ಪ್ರಮಾಣದ ಆಮ್ಲವನ್ನು ಹೊಂದಿರುತ್ತದೆ. ಹೀಗಾಗಿಯೇ ಪ್ರತಿದಿನ ನಿಂಬೆ ಬೆರೆಸಿದ ನೀರನ್ನು ಕುಡಿಯುವ ಅಭ್ಯಾಸದಿಂದ ಆರೋಗ್ಯದಲ್ಲಿ (Health Tips) ಕೆಲವೊಂದು ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ.

* ಎದೆಯುರಿ
ಪ್ರತಿದಿನ ಅಗತ್ಯಕ್ಕಿಂತ ಹೆಚ್ಚು ನಿಂಬೆ ರಸ ಕುಡಿದರೆ ಎದೆಯುರಿ ಇಲ್ಲವೇ ಆಸಿಡ್ ರಿಫ್ಲಕ್ಸ್ ಸಮಸ್ಯೆ ಉಂಟಾಗುವ ಸಂಭವವಿದೆ. ನಿಮಗೇನಾದರೂ ಆಸಿಡ್ ರಿಫ್ಲಕ್ಸ್ ಸಮಸ್ಯೆ ಇದ್ದಲ್ಲಿ ನಿಂಬೆ ರಸವನ್ನು ಕುಡಿಯದಿರುವುದು ಉತ್ತಮ.

* ಹಲ್ಲುಗಳಿಗೆ ಹಾನಿಕಾರಕ
ನಿಂಬೆ ರಸವು ಆಮ್ಲೀಯ ಗುಣಗಳಿಂದ ಸಮೃದ್ಧವಾಗಿರುವ ಹಿನ್ನೆಲೆ ಹೆಚ್ಚು ನಿಂಬೆ ರಸವನ್ನು ಕುಡಿಯುವ ಅಭ್ಯಾಸದಿಂದ ಹಲ್ಲಿನ ಸಮಸ್ಯೆ ಉಂಟಾಗಿ, ನಿಂಬೆ ನೀರಿನ ನಿರಂತರ ಸೇವನೆಯಿಂದ ಹಲ್ಲುಗಳು ಹಾನಿಗೊಳಗಾಗಬಹುದು.
* ಜೀರ್ಣಕಾರಿ ಸಮಸ್ಯೆಗಳು
ನಿಂಬೆ ರಸವನ್ನು ಕುಡಿಯುವುದರಿಂದ ಆಹಾರವು (Food) ವೇಗವಾಗಿ ಜೀರ್ಣವಾಗುತ್ತದೆ ಎಂಬ ನಂಬಿಕೆ ಹೆಚ್ಚಿನವರಿಗಿದೆ. ಆದರೆ ಹೆಚ್ಚು ನಿಂಬೆ ರಸವನ್ನು ಕುಡಿಯುವುದರಿಂದ ವಾಂತಿ ವಾಯು ರೀತಿಯ ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
* ಚರ್ಮದ ಕಿರಿಕಿರಿ
ಹೆಚ್ಚಿನ ಮಂದಿ ಚರ್ಮದ ಪೋಷಣೆಗೆ ನಿಂಬೆಯನ್ನು ಬಳಸುತ್ತಾರೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ತ್ವಚೆಗೆ ನೇರವಾಗಿ ನಿಂಬೆಹಣ್ಣನ್ನು ಹಚ್ಚುವುದರಿಂದ ತ್ವಚೆಯಲ್ಲಿ ಕಿರಿಕಿರಿ ಉಂಟಾಗುವ ಸಂಭವವಿದೆ. ಇದನ್ನು ನೇರವಾಗಿ ತ್ವಚೆಗೆ ಹಚ್ಚುವ ಮೊದಲು ನಿಂಬೆ ರಸವನ್ನು ನೀರಿಗೆ ಬೆರೆಸಿ ಚರ್ಮಕ್ಕೆ ಹಚ್ಚಿಕೊಂಡು ಬಿಸಿಲಿಗೆ ಮೈಯೊಡ್ಡುವುದನ್ನು ತಪ್ಪಿಸಿ.

* ದೇಹದಲ್ಲಿ ನೀರಿನ ಕೊರತೆ
ನಿಂಬೆ ರಸವು ದೇಹ (Body)ವನ್ನು ಅಗತ್ಯಕ್ಕಿಂತ ಹೆಚ್ಚು ಸೇವನೆ ಮಾಡಿದರೆ ಆಗಾಗ ಮೂತ್ರ (Urine) ವಿಸರ್ಜನೆಯಾಗುವ ಜೊತೆಗೆ ದೇಹದಲ್ಲಿ ನೀರಿನ ಕೊರತೆ ಕಾಣಿಸಿಕೊಳ್ಳಬಹುದು.

 

ಇದನ್ನು ಓದಿ: Refrigerator: ಕೆಲವು ದಿನ ಮನೆಯಲ್ಲಿರೋಲ್ಲ ಅಂದ್ರೆ ಫ್ರಿಜ್ ಆಫ್ ಮಾಡ್ತೀರಾ ?! ಬಂದ್ ಮಾಡ್ಬೇಕಾ, ಬೇಡ್ವಾ ? ಇಲ್ಲಿದೆ ನೋಡಿ ಕೆಲವು ಟ್ರಿಕ್ಸ್ ಗಳು

Leave A Reply

Your email address will not be published.