heart Attack Symptoms: ಯುವಕರೇ, ಹೃದಯಾಘಾತದ ಬಗ್ಗೆ ಆತಂಕ ಬೇಡ, ತಡೆಗಟ್ಟಲು ಇಂದಿನಿಂದಲೇ ಈ 4 ಅಭ್ಯಾಸಗಳನ್ನು ಶುರುಮಾಡಿ

Lifestyle health news heart attack precautions these four habits to prevent heart disease

Heart Attack Symptoms: ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಜನರಲ್ಲಿ ದಿನೇ ದಿನೇ ಹೆಚ್ಚುತ್ತಾ ಹೋಗುತ್ತಿವೆ. ಇತ್ತೀಚಿಗೆ ಹೃದಯಾಘಾತಕ್ಕೆ ಸಣ್ಣ ವಯಸ್ಸಿನವರೇ ಬಲಿಯಾಗುತ್ತಿರುವುದು ಕಂಡುಬರುತ್ತಿದೆ. ಇದಕ್ಕೆ ಕಾರಣ ಅನುಸರಿಸುವ ಒತ್ತಡದ ಜೀವನ ಶೈಲಿ, ಬದಲಾದ ಆಹಾರ ಪದ್ಧತಿ , ಹವಾಮಾನ, ಆಲಸ್ಯತನ, ಮೋಜು ಮಸ್ತಿ, ಹೀಗೆ ಹಲವು ಉತ್ತರಗಳನ್ನು ಕಂಡು ಕೊಳ್ಳಬಹುದು. ಈ ಬಗ್ಗೆ ಅನೇಕ ಆರೋಗ್ಯ ತಜ್ಞರು ಸಂಶೋಧನೆ ಮೂಲಕ ಕೆಲವು ಸಂಗತಿಗಳನ್ನು ಕಂಡುಕೊಂಡಿದ್ದಾರೆ.
ಹೌದು, ಆರೋಗ್ಯ ತಜ್ಞರ ಪ್ರಕಾರ ಹೃದಯಾಘಾತ(Heart Attack Symptoms )ತಪ್ಪಿಸಲು, ನಿಮ್ಮ ಕೆಲವು ಅಭ್ಯಾಸಗಳನ್ನು ಬದಲಾಯಿಸಬೇಕು.

ಇಂದಿನ ದಿನಗಳಲ್ಲಿ ಯುವಕರು ಹೆಚ್ಚಾಗಿ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಶೇಖರಣೆಯಾಗುವುದರಿಂದ, ಅಪಧಮನಿಗಳು ಕಿರಿದಾಗುತ್ತವೆ. ಅಂತಹ ಸ್ಥಿತಿಯಲ್ಲಿ, ಹೃದಯವನ್ನು ತಲುಪಲು ರಕ್ತವು ಬಹಳಷ್ಟು ಕಷ್ಟ ಪಡಬೇಕಾಗುತ್ತದೆ. ಇದು ಅಧಿಕ ರಕ್ತದೊತ್ತಡ ಉಂಟುಮಾಡುತ್ತದೆ. ನಂತರ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ನಿಮ್ಮ ಕೆಲವು ಅಭ್ಯಾಸಗಳನ್ನು ನೀವು ಬದಲಾಯಿಸಿಕೊಳ್ಳಬೇಕು.

ಆರೋಗ್ಯಕರ ಆಹಾರವನ್ನು ಸೇವಿಸಿ: ಆಹಾರ ನಮ್ಮ ಹೃದಯದ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮ ಬಿರುತ್ತದೆ. ನೀವು ಹೃದಯಾಘಾತದಿಂದ ದೂರ ಇರಬೇಕಾದರೆ ಪ್ಯಾಕೆಟ್‌ನಲ್ಲಿ ಶೇಖರಿಸಿದ ಆಹಾರ, ಸಂಸ್ಕರಿಸಿದ ಆಹಾರ, ಸಕ್ಕರೆ, ಕೆಂಪು ಮಾಂಸ ಮತ್ತು ಕರಿದ ಆಹಾರವನ್ನು ತಪ್ಪಿಸಿ. ಬದಲಾಗಿ, ಧಾನ್ಯಗಳು, ತಾಜಾ ಹಣ್ಣುಗಳು ಮತ್ತು ತರಕಾರಿಗಳು ಹಾಗೂ ಮೀನುಗಳಂತಹ ಆರೋಗ್ಯಕರ ಆಹಾರವನ್ನು ಸೇವಿಸಿ.

ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿ: ನಾವು ಎಷ್ಟೇ ಕಾರ್ಯನಿರತರಾಗಿದ್ದರೂ ವ್ಯಾಯಾಮ ಮಾಡಲು ಒಂದು ಗಂಟೆ ತೆಗೆದುಕೊಳ್ಳಬೇಕು. ದಿನನಿತ್ಯ ವಾಕಿಂಗ್‌ ಸೇರಿದಂತೆ ಇತರ ವ್ಯಾಯಾಮಗಳನ್ನು ಮಾಡಿ. ಹೆಚ್ಚು ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿದರೆ, ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ.

ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಿ:
ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಿದಷ್ಟು ಒಳ್ಳೆಯದು. ಇಲ್ಲದಿದ್ದರೆ, ನಿಮಗೆ ಹೃದಯಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬೇಗನೆ ಉಂಟಾಗಬಹುದು.

ಅನಗತ್ಯ ಚಿಂತೆ ಬೇಡ:
ಕೆಲಸದ ಒತ್ತಡದ ಚಿಂತೆ, ಹಣ, ಸಂಸಾರ, ಕೆಲವೊಮ್ಮೆ ಸಂಬಂಧದ ವೈಫಲ್ಯವೂ ಮನುಷ್ಯನನ್ನು ಚಿಂತೆಗೆ ದೂಡುತ್ತದೆ. ಆದ್ದರಿಂದ ಅನಗತ್ಯವಾಗಿ ಚಿಂತಿಸುವುದನ್ನು ನಿಲ್ಲಿಸಿ ಮತ್ತು ಸಂತೋಷವಾಗಿರುವುದನ್ನು ಅಭ್ಯಾಸ ಮಾಡಿ. ಇದರಿಂದ ಆರೋಗ್ಯ ಮತ್ತು ಸಮಸ್ಯೆಗಳೂ ಸಹ ದೂರವಾಗುತ್ತವೆ.

ಇವುಗಳ ಹೊರತು ನಿದ್ರಾಹೀನತೆ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಸಾಮಾನ್ಯ ನಿದ್ರೆಯನ್ನು ಪಡೆಯುವ ಜನರು ಬೊಜ್ಜು, ರೋಗ, ಹೃದ್ರೋಗ, ಮಧುಮೇಹ ಮತ್ತು ಖಿನ್ನತೆಗೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಹೆಚ್ಚಿನ ವಯಸ್ಕರಿಗೆ ಪ್ರತಿ ರಾತ್ರಿ 7 ರಿಂದ 9 ಗಂಟೆಗಳ ನಿದ್ದೆ ಬೇಕು. ಆದ್ದರಿಂದ ನಿಮ್ಮ ಜೀವನದಲ್ಲಿ ನಿದ್ರೆಗೆ ಆದ್ಯತೆ ನೀಡಿ.

ಇದನ್ನೂ ಓದಿ: Beauty Tips: ಮುಖದ ಸೌಂದರ್ಯ ಹೆಚ್ಚಿಸಲು ಇದೊಂದು ವಸ್ತುವಿದ್ರೆ ಸಾಕು – ಒಮ್ಮೆ ಹಚ್ಚಿ ಆಗೋ ಚಮತ್ಕಾರ ನೋಡಿ

Leave A Reply

Your email address will not be published.