Loan Waiver: ಸಾಲಮನ್ನಾ ನಿರೀಕ್ಷೆಯಲ್ಲಿರೋ ರೈತರಿಗೆ ಸರ್ಕಾರದಿಂದ ಬಂತು ಬಿಗ್ ಅಪ್ಡೇಟ್ !!

Update from Govt for Farmers Awaiting Loan Waiver

Loan Waiver: ರೈತರಿಗೆ ಬೆಳೆ ಬೆಳೆಯಲು ಮಳೆ ಬೇಕು. ಮಳೆ ಇಲ್ಲ ಅಂದ್ರೆ ಬೆಳೆ ಚೆನ್ನಾಗಿ ಬರೋದಿಲ್ಲ. ರೈತರು ಅದೆಷ್ಟೋ ಲಕ್ಷಾಂತರ ರೂಪಾಯಿ ಹಾಕಿ ಖರ್ಚು ಮಾಡಿ ಬೆಳೆದಂತಹ ಬೆಳೆಗಳಿಗೆ ಸರಿಯಾದ ಫಲ ಸಿಗದೇ ಇದ್ದಾಗ ಚಿಂತೆಗೀಡಾಗುತ್ತಾರೆ. ಇತ್ತೀಚೆಗಂತೂ ಮಳೆ ಕಡಿಮೆಯಾಗಿದೆ. ಇದರಿಂದ ರೈತರು ನಷ್ಟದಲ್ಲಿದ್ದಾರೆ. ಸದ್ಯ ಸರ್ಕಾರದಿಂದ ರೈತರಿಗೆ ಸಿಹಿಸುದ್ದಿ ಸಿಕ್ಕಿದೆ.

ಸಾಲಾಮನ್ನಾ ನಿರೀಕ್ಷೆಯಲ್ಲಿರೋ ರೈತರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್ ಬಂದಿದೆ. ರಾಜ್ಯ ಸರ್ಕಾರ ಇದೀಗ ರೈತರಿಗಾಗಿ ಸಾಲ ಮರುಪಾವತಿ (Loan Waiver) ಪರಿಹಾರ ನೀಡಿದೆ. ರೈತರು ಕೃಷಿ ಸಾಲಗಳನ್ನು ಪಡೆದಿದ್ದರೆ ಈ ಸಮಯದಲ್ಲಿ ಸಾಲ ಮರುಪಾವತಿ ಪಡೆಯದಂತೆ ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಬೆಳೆ ಸಾಲ ಪಡೆದ ರೈತರು ಈ ವರ್ಷದ ವೇಳೆಗೆ ಸಾಲವನ್ನು ಮರುಪಾವತಿ ಮಾಡುವ ಅಗತ್ಯವಿಲ್ಲ. ಸಾಲ ಕಟ್ಟಲು 3 ರಿಂದ 5 ವರ್ಷಗಳವರೆಗೆ ಹೆಚ್ಚು ಅವಧಿಯಲ್ಲಿ ಮರುಪಾವತಿ ಮಾಡಲು ಅವಕಾಶ ಇದೆ ಎನ್ನಲಾಗಿದೆ.

ಬರಗಾಲದ ಸಮಸ್ಯೆ ಇಂದ ಕೃಷಿಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಇಲ್ಲ. ಹಾಗಾಗಿ ರೈತರಿಗೆ ಬಹಳಷ್ಟು ನಷ್ಟವಾಗಿದೆ. ಸಾಲದ ಒತ್ತಡದಿಂದಾಗಿ ರೈತರು ಬಹಳಷ್ಟು ಕಷ್ಟ ಅನುಭವಿಸ್ತಾ ಇದ್ದಾರೆ. ಹಾಗಾಗಿ ಸರ್ಕಾರ ಸಾಲ ಮರುಪಾವತಿ ಪರಿಹಾರ ಒದಗಿಸಿದೆ. ಜೊತೆಗೆ ನೀರಿನ ಅಭಾವದಿಂದ ಕೃಷಿ ಮಾಡಲು ಕಷ್ಟ ಇದೆ. ವಿದ್ಯುತ್ ಅಭಾವದ ಸಮಸ್ಯೆಯು ಉಂಟಾಗಿದೆ‌. ಇದಕ್ಕೆ ಪರಿಹಾರವಾಗಿ ರೈತರಿಗೆ ದಿನದಲ್ಲಿ ಐದು ಘಂಟೆ ವಿದ್ಯುತ್ ಪೂರೈಕೆ ಮಾಡುವುದು ಕಡ್ಡಾಯ ಎಂಬ ಮಾಹಿತಿಯನ್ನು ಸಹ ರಾಜ್ಯ ಸರಕಾರ ತಿಳಿಸಿದೆ.

ಇದನ್ನು ಓದಿ: Mangaluru: ನವರಾತ್ರಿ ದಾಂಡಿಯಾ ನೃತ್ಯಕ್ಕೆ ದುರ್ಗಾವಾಹಿನಿ ಗರಂ- ವಿರೋಧಕ್ಕೆ ಇದೇ ಕಾರಣ!!

 

Leave A Reply

Your email address will not be published.