Mangaluru: ನವರಾತ್ರಿ ದಾಂಡಿಯಾ ನೃತ್ಯಕ್ಕೆ ದುರ್ಗಾವಾಹಿನಿ ಗರಂ- ವಿರೋಧಕ್ಕೆ ಇದೇ ಕಾರಣ!!

dakshina kannada mangalore dasara news durga vahini organization opposed to dandiya dance

Mangaluru: ಮಂಗಳೂರು ದಸರಾ (Mangaluru Dasara) ಎಷ್ಟೊಂದು ಸುಂದರ ಎನ್ನುವ ಹಾಗೆ ಎಲ್ಲರ ಮನಸ್ಸಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಇದರ ಅಂಗವಾಗಿ ಎಲ್ಲಾ ದೇವಸ್ಥಾನಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಇದು ಜೊತೆಗೆ ಮಂಗಳೂರಿನಲ್ಲಿ ನವರಾತ್ರಿ ಅಂಗವಾಗಿ ದಾಂಡಿಯಾ ನೃತ್ಯ (Dandiya Dance) ಕಾರ್ಯಕ್ರಮವೊಂದು ಆಯೋಜನೆ ಮಾಡಲಾಗಿದ್ದು, ಇದಕ್ಕೆ ದುರ್ಗಾವಾಹಿನಿ ಸಂಘಟನೆ, ವಿಶ್ವಹಿಂದೂ ಪರಿಷತ್‌ ವಿರೋಧ ವ್ಯಕ್ತಪಡಿಸಿದೆ.

ʼನವರಾತ್ರಿಯ ಸಂದರ್ಭದಲ್ಲಿ ಉತ್ತರ ಭಾರತದಲ್ಲಿ ನಡೆಯುವಂತಹ ದಾಂಡಿಯಾ ನೃತ್ಯ ಹೆಸರಿನಲ್ಲಿ ಮಂಗಳೂರಿನಲ್ಲಿ ಕೆಲವೊಂದು ಕಡೆ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಮತ್ತು ಅದಕ್ಕೆ ಎಲ್ಲಾ ಯುವಕ ಯುವತಿಯರು ಇದರಲ್ಲಿ ಭಾಗವಹಿಸುವಂತೆ ಮುಕ್ತವಾಗಿ ಆಮಂತ್ರಣ ಹಂಚಿರುತ್ತಾರೆ. ದಾಂಡಿಯಾ ನೃತ್ಯ ಜಗನ್ಮಾತೆ ದುರ್ಗಾದೇವಿಯ ಹೆಸರಿನಲ್ಲಿ ನವರಾತ್ರಿಯ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಕಳೆದ ವರ್ಷಗಳಲ್ಲಿ ನಡೆದ ಇಂತಹ ಕಾರ್ಯಕ್ರಮದಲ್ಲಿ ಡ್ರಗ್ಸ್, ಮಾದಕ ದೃವ್ಯ ಸೇವನೆ ಮತ್ತು ಅಸಭ್ಯ ನೃತ್ಯಗಳ ಬಗ್ಗೆ ದೂರುಗಳು ಬಂದಿದ್ದು, ಅಲ್ಲದೆ ಧಾರ್ಮಿಕ ಕಾರ್ಯಕ್ರಮ ಈ ರೀತಿಯಲ್ಲಿ ನಡೆಸಿದರೆ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ ಹಾಗಾಗಿ ತಾವುಗಳು ಯಾವುದೇ ಕಾರಣಕ್ಕೂ ಇಂತಹ ಕಾರ್ಯಕ್ರಮಕ್ಕೆ ಅವನುತಿ ನೀಡಬಾರದಾಗಿ ವಿನಂತಿʼ ಎಂದು ದುರ್ಗಾವಾಹಿನಿ ಸಂಘಟನೆ ಆರೋಪ ಮಾಡಿದೆ.

 

ಇದನ್ನು ಓದಿ: Health Tips: ಅಪ್ಪಿ ತಪ್ಪಿ ಕೂಡ ಫ್ರಿಜ್ಜಿನಲ್ಲಿ ಈ ಹಣ್ಣನ್ನು ಇಡಬೇಡಿ – ಇಟ್ಟರೆ ಏನಾಗುತ್ತೆ ಗೊತ್ತಾ?

Leave A Reply

Your email address will not be published.