Assistant Professor Recruitment: 1,242 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಕುರಿತು ಸಚಿವರಿಂದ ಮಹತ್ವದ ಸೂಚನೆ! ಗ್ರೀನ್‌ ಸಿಗ್ನಲ್‌ ಶೀಘ್ರದಲ್ಲೇ?!

job news 1242 assistant professor recruitment news minister sudhakar direction

1242 assistant professor recruitment: 1,242 ಸಹಾಯಕ ಪ್ರಾಧ್ಯಾಪಕ ನೇಮಕಾತಿ ವಿಳಂಬದ ಕುರಿತು ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. 2021 ರಲ್ಲಿ ಆರಂಭವಾದ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದ ಕಾರಣ ಯಾವುದೇ ಅಭ್ಯರ್ಥಿಯ ಕೈಗೆ ಆದೇಶ ಪ್ರತಿ ಇನ್ನೂ ದೊರಕಿಲ್ಲ. ಈ ಕುರಿತು ಉನ್ನತ ಶಿಕ್ಷಣ ಖಾತೆ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರು ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಟಿಪ್ಪಣಿಯೊಂದನ್ನು ಕಳುಹಿಸಿದ್ದಾರೆ. ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಕುರಿತು ಮಹತ್ವದ ಸೂಚನೆಯೊಂದನ್ನು ನೀಡಿದ್ದಾರೆ.

ಟಿಪ್ಪಣಿ ವಿವರ: ಹೈದರಾಬಾದ್‌-ಕರ್ನಾಟಕ ಮೀಸಲಾತಿ ಸಂಬಂಧಪಟ್ಟ ಪ್ರಕರಣ ನ್ಯಾಯಾಲಯದಲ್ಲಿ ಇತ್ತೀಚೆಗೆ ಇತ್ಯರ್ಥವಾಗಿದ್ದು, ನೇಮಕಾತಿಗೆ ಸಂಬಂಧ ಪಟ್ಟಂತೆ ಬೇರೆ ಯಾವುದೇ ಪ್ರಕರಣ ತನಿಖಾಧಿಕಾರಿಗಳ ಮುಂದೆ ಇಲ್ಲದಿರುವುದರಿಂದ, ಈ ಸಂಬಂಧ ಆಯ್ಕೆಗೊಂಡ ಅಭ್ಯರ್ಥಿಗಳು ಮನವಿ ಸಲ್ಲಿಸಿರುವುದರಿಂದ, ಕೂಡಲೇ ನೇಮಕಾತಿ ಹೊರಡಿಸುವಂತೆ ಕೋರಿರುತ್ತಾರೆ. ಈ ನೇಮಕಾತಿ ಪ್ರಕ್ರಿಯೆಗೆ ಮೂರು ವರ್ಷಗಳು ಕಳೆಯುತ್ತಾ ಬಂದಿದ್ದು, ಇನ್ನು ವಿಳಂಬಕ್ಕೆ ಅವಕಾಶ ನೀಡದೆ, ಅಭ್ಯರ್ಥಿಗಳಿಗೆ ಆದೇಶ ಹೊರಡಿಸಲು ನಿಯಮಾನುಸಾರ ಕೈಗೊಳ್ಳಬೇಕಾದ ಪೂರ್ವಭಾವಿ ಅಗತ್ಯ ಕ್ರಮವನ್ನು ತ್ವರಿತವಾಗಿ ಕೈಗೊಳ್ಳುವಂತೆ ಸಚಿವರು ಸೂಚಿಸಿದ್ದಾರೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.

 

ಇದನ್ನು ಓದಿ: ಮಗು ನನ್ನದಲ್ಲ ಎಂದು ತಂದೆಗೆ ಹೇಳಿತು 6th ಸೆನ್ಸ್ – DNA ರಿಪೋರ್ಟ್ ನೋಡಿ ಹೌಹಾರಿಹೋದ !!

Leave A Reply

Your email address will not be published.