Home News RBI Big Action: ಈ ಬ್ಯಾಂಕ್ ವಿರುದ್ದ ರಿಸರ್ವ್ ಬ್ಯಾಂಕ್ ತುರ್ತು ಕ್ರಮ: ಗ್ರಾಹಕರ...

RBI Big Action: ಈ ಬ್ಯಾಂಕ್ ವಿರುದ್ದ ರಿಸರ್ವ್ ಬ್ಯಾಂಕ್ ತುರ್ತು ಕ್ರಮ: ಗ್ರಾಹಕರ ಮೇಲೆ ಏನು ಪರಿಣಾಮ ಬೀರಲಿದೆ?

RBI Big Action

Hindu neighbor gifts plot of land

Hindu neighbour gifts land to Muslim journalist

Bank Of Baroda: ಬ್ಯಾಂಕ್ ಆಫ್ ಬರೋಡಾದಲ್ಲಿ (BOB) ಉಳಿತಾಯ ಅಥವಾ ಚಾಲ್ತಿ ಖಾತೆಯನ್ನು ಹೊಂದಿದ್ದರೆ, ಈ ವಿಚಾರ ಮೊದಲು ತಿಳಿದುಕೊಳ್ಳಿ. ಬ್ಯಾಂಕ್ ಆಫ್ ಬರೋಡಾ (BOB) ತನ್ನ ಮೊಬೈಲ್ ಅಪ್ಲಿಕೇಶನ್ ‘ಬಾಬ್ ವರ್ಲ್ಡ್’ ನಲ್ಲಿ ಹೊಸ ಗ್ರಾಹಕರನ್ನು ಸೇರಿಸುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ಬಂಧ ಹೇರಿದೆ.

ರಿಸರ್ವ್ ಬ್ಯಾಂಕ್ ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಿದ್ದು, ಹೀಗಾಗಿ, ಹೊಸ ಗ್ರಾಹಕರು ಅಪ್ಲಿಕೇಶನ್ ಮೂಲಕ ಸೇರಲು ಸಾಧ್ಯವಾಗದು.ಮೊಬೈಲ್ ಅಪ್ಲಿಕೇಶನ್ ಮೂಲಕ ಗ್ರಾಹಕರನ್ನು ಸೇರಿಸಿದ್ದರಿಂದ ಕೆಲವೊಂದು ಗೊಂದಲ ಉಂಟಾಗಿದ್ದು, ಹೀಗಾಗಿ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ. ಆದರೆ ಹಳೆಯ ಗ್ರಾಹಕರು ಮೊದಲಿನಂತೆ ಆಪ್ ಮೂಲಕ ವಹಿವಾಟು ನಡೆಸಲು ಸಾಧ್ಯವಾಗುತ್ತದೆ.

ಆರ್ ಬಿಐ ಬಾಬ್ ವರ್ಲ್ಡ್’ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಹೊಸ ಗ್ರಾಹಕರನ್ನು ಸೇರಿಸುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸುವಂತೆ ಬ್ಯಾಂಕ್ ಆಫ್ ಬರೋಡಾಗೆ ಸೂಚನೆ ನೀಡಿದೆ. ಬ್ಯಾಂಕ್ ಕಂಡುಕೊಂಡ ನ್ಯೂನತೆಗಳನ್ನು ತಕ್ಷಣವೇ ಪರಿಹರಿಸಲು ಸೂಚನೆ ನೀಡಿದೆ. ಈ ಪ್ರಕ್ರಿಯೆಗಳಿಂದ ತೃಪ್ತಿಗೊಂಡ ಬಳಿಕವೇ ‘ಬಾಬ್ ವರ್ಲ್ಡ್’ ಆ್ಯಪ್‌ನಲ್ಲಿ ಗ್ರಾಹಕರನ್ನು ಸೇರಿಸುವ ಪ್ರಕ್ರಿಯೆಯನ್ನು ಮಾಡಲಾಗುತ್ತದೆ ಎಂದು ಕೇಂದ್ರ ಬ್ಯಾಂಕ್ ಸೂಚನೆ ನೀಡಿದೆ. ಆದರೆ ಆರ್ ಬಿಐ ಕೈಗೊಂಡ ಕ್ರಮದಿಂದ ಅಸ್ತಿತ್ವದಲ್ಲಿರುವ ‘ಬಾಬ್ ವರ್ಲ್ಡ್’ ಗ್ರಾಹಕರು ಯಾವುದೇ ಸಮಸ್ಯೆಯನ್ನು ಎದುರಿಸಬಾರದು ಎನ್ನುವುದನ್ನು ಕೂಡಾ ಬ್ಯಾಂಕ್ ಖಚಿತಪಡಿಸಿಕೊಳ್ಳಬೇಕು ಎಂದು ಆರ್‌ಬಿಐ ಬ್ಯಾಂಕ್‌ಗೆ ಆದೇಶ ನೀಡಿದೆ.
ಬ್ಯಾಂಕ್ ಆಫ್ ಬರೋಡಾ ಹೊರಡಿಸಿದ ಹೇಳಿಕೆ ಮೂಲಕ ಆರ್‌ಬಿಐ ಕಳವಳಗಳನ್ನು ನಿವಾರಿಸಲು ಸುಧಾರಣೆಗೆ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದೆ. ಗ್ರಾಹಕರು ಯಾವುದೇ ಸಮಸ್ಯೆ ಎದುರಿಸಬೇಕಾಗಿಲ್ಲ ಎಂದು ಬ್ಯಾಂಕ್‌ ಭರವಸೆ ನೀಡಿದ್ದು, BoB ವರ್ಲ್ಡ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಯಾವುದೇ ಅಡಚಣೆಯಿಲ್ಲದೆ ಸೇವೆಯನ್ನು ಬಳಸುವುದನ್ನು ಮುಂದುವರಿಸಲಾಗುತ್ತದೆ.

 

ಇದನ್ನು ಓದಿ: Alert message: ನಿಮಗೂ ಬಂತಾ ಸರ್ಕಾರದ ಈ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ?! ಹಾಗಿದ್ರೆ ಈ ಕೂಡಲೇ ಅಲರ್ಟ್ ಆಗಿ, ಚೆಕ್ ಮಾಡಿ.