Home Karnataka State Politics Updates Congress high command: ರಾಜ್ಯ ಕಾಂಗ್ರೆಸ್ಸಿನ ಈ ಶಾಸಕರಿಗೆಲ್ಲಾ ಬಿಗ್ ಶಾಕ್ – ಅರೆ ಹೀಗೆಕೆ...

Congress high command: ರಾಜ್ಯ ಕಾಂಗ್ರೆಸ್ಸಿನ ಈ ಶಾಸಕರಿಗೆಲ್ಲಾ ಬಿಗ್ ಶಾಕ್ – ಅರೆ ಹೀಗೆಕೆ ಮಾಡಿತು ಹೈಕಮಾಂಡ್ ?!

Congress high command

Hindu neighbor gifts plot of land

Hindu neighbour gifts land to Muslim journalist

Congress high command: ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಗಿರಿ ತಪ್ಪಿರುವಂತಹ ಹಲವಾರು ಶಾಸಕರು ಅತೃಪ್ತಿಯನ್ನು ಹೊಂದಿದ್ದಾರೆ. ಇವರೆಲ್ಲರನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಅವರೆಲ್ಲರಿಗೂ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ನೀಡುವ ಕುರಿತು ಭರವಸೆಯನ್ನು ನೀಡಿತ್ತು. ಈ ವಿಚಾರವಾಗಿ ಪಟ್ಟಿ ಸಿದ್ಧಪಡಿಸಿಕೊಂಡು ಹೈಕಮಾಂಡ್(Congress high command) ಭೇಟಿ ಮಾಡಲು ದೆಹಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯನವರಿಗೆ ನಿರಾಸೆಯಾಗಿದ್ದು, ಸರ್ಕಾರಕ್ಕೆ ಬಿಗ್ ಶಾಕ್ ಎದುರಾಗಿದೆ.

ಹೌದು, ದೆಹಲಿಯಿಂದ ಬರಬಹುದಾದಂತಹ ಆ ಒಂದು ಸಿಹಿ ಸುದ್ದಿಗೆ ಕಾದಿದ್ದ ಕಾಂಗ್ರೆಸ್‌(Congress) ಶಾಸಕರು, ಮುಖಂಡರಿಗೆ ನಿರಾಸೆ ಉಂಟಾಗಿದೆ. ಅಂದರೆ ನಿಗಮ ಮಂಡಳಿ ಅಧ್ಯಕ್ಷಗಿರಿಗೆ ಕಾಯ್ತಿದ್ದವರಿಗೆ ಭಾರೀ ಕಾಂಗ್ರೆಸ್ ಹೈಕಮಾಂಡ್ ಭಾರೀ ನಿರಾಸೆ ಉಂಟುಮಾಡಿದೆ.

ಅಂದಹಾಗೆ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿಯೊಂದಿಗೆ ಸಿಎಂ ಸಿದ್ದರಾಮಯ್ಯ(Siddaramaiah) ದೆಹಲಿಗೆ(Delhi) ಹೋಗಿದ್ದರು. ಹೈಕಮಾಂಡ್ ಅನುಮತಿ ಸಿಗದೇ ನಿರಾಸೆಯಿಂದ ಸಿಎಂ ವಾಪಸ್ ಆಗಿದ್ದಾರೆ. ಅಂದರೆ ನಿಗಮ ನೇಮಕಕ್ಕೆ ಸ್ಪಷ್ಟ ಸಂದೇಶವನ್ನು ಕಾಂಗ್ರೆಸ್ ಹೈಕಮಾಂಡ್ ನೀಡಿಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ(Randeep Surjewala) ಜೊತೆಗೆ ಸಿಎಂ ಚರ್ಚೆ ನಡೆಸಿದ್ದು, ಮಾತುಕತೆ ವೇಳೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸುರ್ಜೇವಾಲ ನೀಡಿಲ್ಲ ಎನ್ನಲಾಗ್ತಿದೆ.

ಅಲ್ಲದೆ ಪಂಚ ರಾಜ್ಯಗಳ ಚುನಾವಣೆ ಬಳಿಕ ನಿಗಮ ನೇಮಕಕ್ಕೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದ್ದು ಸದ್ಯ ದೆಹಲಿಗೆ ಹೋದ ಸಿಎಂ ಸಿದ್ದರಾಮಯ್ಯನವರು ಬರಿಗೈಯಲ್ಲಿ ಮರಳಿಬಂದಿದ್ದಾರೆ ಎನ್ನಲಾಗಿದೆ. ಅಲ್ಲದೆ ಮಂತ್ರಿಗಿರಿಯಾದರೂ ತಪ್ಪಿತು, ಇನ್ಮುಂದೆ ನಿಗಮಗಳ ಅಧ್ಯಕ್ಷರಾದರೂ ಆಗಬಹುದು ಅಂದುಕೊಂಡವರ ಆಸೆಗೆ ತಣ್ಣೀರೆರಚಿದಂತಾಗಿದೆ.

 

ಇದನ್ನು ಓದಿ: Viral news: ಬೈಕ್ ಏರಿದ ಕೂಡಲೇ ಸರಸದಲ್ಲಿ ಮೈಮರೆತ ಹುಡುಗ- ಹುಡುಗಿ !! ಮುಂದೆ ಕಾದಿತ್ತು ಊಹಿಸದ ಶಾಕ್