Love Failure: ಮೋಸ ಮಾಡಲೆಂದೇ ನೀ ಬಂದೆಯಾ….ಪ್ರೀತಿ ಬಯಸಿದ ಹುಡುಗ, ಯುವತಿಯಿಂದ ಮೋಸ! ಮುಂದಾಯ್ತು ದುರಂತ!!!

Share the Article

ಪ್ರೀತಿ ಮಾಡುತ್ತಿದ್ದ ಆ ಎರಡು ಜೀವಗಳು ಅದು. ಆದರೆ ಯಾರ ದೃಷ್ಟಿ ಬಿತ್ತೋ ಹುಡುಗಿ ಹುಡುಗನಿಗೆ ಕೈ ಕೊಟ್ಟು ಮೋಸ ಮಾಡಿ ಹೋಗಿದ್ದಾಳೆ. ಹುಡುಗಿ ತನಗೆ ಕೈ ಕೊಟ್ಟು ಹೋಗಿದ್ದಕ್ಕೆ ಬೇಸರಗೊಂಡು ಯುವಕ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿರುವ ಘಟನೆಯೊಂದು ಬೆಂಗಳೂರಿನ ಕುರುಬರಹಳ್ಳಿಯಲ್ಲಿ ನಡೆದಿದೆ.

ಪ್ರೇಮ ವೈಫಲ್ಯದಿಂದ ತೀರ ನೊಂದ ಯುವಕ ಇದೀಗ ಆತ್ಮಹತ್ಯೆಯ ದಾರಿ ಹಿಡಿದಿದ್ದಾನೆ. ಯೋಗೇಶ್‌ (25) ಎಂಬಾತನೇ ಮೃತ ಯುವಕ. ಕಳೆದ ಕೆಲವು ವರ್ಷಗಳಿಂದ ಜೆಸಿ ನಗರದಲ್ಲಿ ವಾಸವಾಗಿದ್ದ ಈತ, ಆಟೋ ಓಡಿಸಿ ಜೀವನ ನಡೆಸುತ್ತಿದ್ದ. ಈತ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದು, ಇವರ ಪ್ರೀತಿ ನಾಲ್ಕು ವರ್ಷದಿಂದ ಇತ್ತು. ಆದರೆ ಇತ್ತೀಚೆಗೆ ಯುವತಿ ಯೋಗೇಶ್‌ನಿಂದ ದೂರವಾಗಿದ್ದಾಳೆ. ಹಾಗಾಗಿ ಪ್ರೇಮವೈಫಲ್ಯದ ನೋವಿನಿಂದ ಯುವಕ ಆತ್ಮಹತ್ಯೆಯ ದಾರಿ ಹಿಡಿದು ಬಿಟ್ಟಿದ್ದಾನೆ.

ಒಟ್ಟು ಐದು ಪುಟಗಳ ಡೆತ್‌ನೋಟ್‌ ಬರೆದಿಟ್ಟ ಯುವಕ ತನ್ನ ಪ್ರೀತಿಯ ಬಗ್ಗೆ ಬರೆದುಕೊಂಡಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ವಿಷ ಸೇವಿಸದ ಯುವಕನನ್ನು ಆತನ ಪೋಷಕರು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದರು. ಆದರೆ ವಿಷ ತನ್ನ ಕೆಲಸ ಮಾಡಿತ್ತು. ಹೀಗಾಗಿ ಚಿಕಿತ್ಸೆ ಫಲ ನೀಡಲಿಲ್ಲ. ಭಾನುವಾರ ಬೆಳಗ್ಗೆ ಸಾವಿಗೀಡಾಗಿದ್ದಾನೆ.

ಯಾವುದೇ ಕಾರಣ ಹೇಳದೇ ಬೇರೆ ಮದುವೆಯಾಗಲು ಹುಡುಗಿ ಒಪ್ಪಿದ್ದಾಳೆ. ಮದುವೆ ನಾನು ಆಗುತ್ತೀನಿ ಎಂದರೂ ಕೇಳದೆ, ಫೋನ್‌ ನಂಬರ್‌ ಬ್ಲಾಕ್‌ ಮಾಡಿದ್ದು, ಭೇಟಿಗೂ ಸಿಗದೇ ದೂರ ಆಗಿದ್ದು, ಇದೀಗ ನಾನೇ ದೂರ ಹೋಗುತ್ತಿದ್ದೇನೆ ಎಂದು ಡೆತ್‌ನೋಟಲ್ಲಿ ಯುವಕ ಬರೆದಿದ್ದಾನೆ. ನನ್ನ ಸಾವಿಗೆ ಅವಳೇ ಕಾರಣ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿದ್ದಾನೆ.

Leave A Reply