Home News ಉಡುಪಿ Karkala Parasurama theme park: ನಾಳೆಯಿಂದ (ಅ 09) ಪರಶುರಾಮ ಥೀಮ್ ಪಾರ್ಕ್ ಗೆ ಸಾರ್ವಜನಿಕ...

Karkala Parasurama theme park: ನಾಳೆಯಿಂದ (ಅ 09) ಪರಶುರಾಮ ಥೀಮ್ ಪಾರ್ಕ್ ಗೆ ಸಾರ್ವಜನಿಕ ಪ್ರವೇಶ ನಿಷೇಧ!!

Karkala Parasurama theme park

Hindu neighbor gifts plot of land

Hindu neighbour gifts land to Muslim journalist

karkala Parasurama theme park : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಯರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಜನವರಿ 27 ರಂದು ಲೋಕಾರ್ಪಣೆಗೊಂಡ ಪರಶುರಾಮ ಥೀಮ್ ಪಾರ್ಕ್(karkala Parasurama theme park)ಗೆ ನಾಳೆಯಿಂದ ಅ(09) ಪ್ರವಾಸಿಗರ, ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಿ ತಹಶೀಲ್ದಾರ್ ಆದೇಶಿಸಿದ್ದಾರೆ.

ಅಂದಿನ ಶಾಸಕ ಸುನಿಲ್ ಕುಮಾರ್ ಮುತುವರ್ಜಿಯಲ್ಲಿ, ತರಾತುರಿಯಲ್ಲಿ ಕಾಮಗಾರಿ ಪೂರ್ಣಗೊಂಡ ಪಾರ್ಕ್ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಂದ ಲೋಕಾರ್ಪಣೆಗೊಂಡಿತ್ತು. ಥೀಮ್ ಪಾರ್ಕ್ ನಲ್ಲಿ ಸುಮಾರು 33 ಅಡಿ ಎತ್ತರದ ಪರಶುರಾಮನ ಮೂರ್ತಿ ಪ್ರವಾಸಿಗರ ಆಕರ್ಷಣೆಯಾಗಿತ್ತು.

ಲೋಕಾರ್ಪಣೆ ಬಳಿಕ ಸಾರ್ವಜನಿಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ದಂಡೇ ಥೀಮ್ ಪಾರ್ಕ್ ಗೆ ಆಗಮಿಸಿತ್ತು.ಬಳಿಕ ಕಳೆದ ಕೆಲ ದಿನಗಳ ಹಿಂದೆ ಪರಶುರಾಮನ ಮೂರ್ತಿಯಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿಯಾಗಿದ್ದು, ಕಳಪೆ ಗುಣಮಟ್ಟದ ಮೂರ್ತಿ ಲೋಕಾರ್ಪಣೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪದೊಂದಿಗೆ ರಾಜ್ಯಾದ್ಯಂತ ಸುದ್ದಿ ಹಬ್ಬಿದ ಬೆನ್ನಲ್ಲೇ ಮೂರ್ತಿಗೆ ಸಿಡಿಲು ನಿರೋಧಕ, ತುಕ್ಕು ಹಿಡಿಯದ ಲೇಪನಕ್ಕಾಗಿ ಪ್ರವೇಶಕ್ಕೆ ಕಡಿವಾಣ ಬಿದ್ದಿತ್ತು.

ಸದ್ಯ ಪಾರ್ಕ್ ನ ಉಳಿದ ಕಾಮಗಾರಿ ಬಾಕಿ ಇರುವ ಕಾರಣ ನಿರ್ಮಿತಿ ಕೇಂದ್ರದವರ ಕೋರಿಕೆ ಮೇರೆಗೆ ನಾಳೆಯಿಂದ (ಅಕ್ಟೋಬರ್ 09 ರಿಂದ), ನವೆಂಬರ್ ತಿಂಗಳ ಅಂತ್ಯದ ವರೆಗೆ ಸಾರ್ವಜನಿಕರ ಸಹಿತ ಪ್ರವಾಸಿಗರ ಭೇಟಿಯನ್ನು ನಿಷೇಧಿಸಿ ತಹಶೀಲ್ದಾರ್ ಆದ್ದೇಶಿಸಿದ್ದಾರೆ.

ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ ತಂದೆ ಮಗನ ನಡುವೆ ಜಗಳ : ತಂದೆಯ ಕೊಲೆಯೊಂದಿಗೆ ದುರಂತ ಅಂತ್ಯ !