Home News Stuck In Elevator : ಒಂಟಿಯಾಗಿ ಲಿಫ್ಟ್ ನಲ್ಲಿ ಸಿಕ್ಕಿಕೊಂಡ್ರೆ ಈ ಸಿಂಪಲ್ ನ್ಯಾಕ್ ಬಳಸಿ,...

Stuck In Elevator : ಒಂಟಿಯಾಗಿ ಲಿಫ್ಟ್ ನಲ್ಲಿ ಸಿಕ್ಕಿಕೊಂಡ್ರೆ ಈ ಸಿಂಪಲ್ ನ್ಯಾಕ್ ಬಳಸಿ, ಕೂಡಲೇ ಬಚಾವ್ ಆಗಿ ಹೊರಬನ್ನಿ !

Stuck In Elevator
Image source: news 18

Hindu neighbor gifts plot of land

Hindu neighbour gifts land to Muslim journalist

Stuck In Elevator : ಇತ್ತೀಚಿನ ದಿನಗಳಲ್ಲಿ ಅಪಾರ್ಟ್ ಮೆಂಟ್ ಗಳಲ್ಲಿ ಜೀವನ ನಡೆಸುವುದರಿಂದ ಹತ್ತಾರು ಅಂತಸ್ತುಗಳಿಗೆ ಹೋಗಲು ಮೆಟ್ಟಿಲುಗಳನ್ನು ಹತ್ತಲು ಕಷ್ಟವಾಗುವುದರಿಂದ ಲಿಫ್ಟ್‌ ಬಳಸುವುದು ಅನಿವಾರ್ಯವಾಗಿರುತ್ತದೆ. ಆದರೆ ಕೆಲವೊಮ್ಮೆ ಲಿಫ್ಟ್‌ನ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಕೆಲವು ಗಂಟೆಗಳವರೆಗೆ ಲಿಫ್ಟ್ ನಲ್ಲಿ ಸಿಲುಕಿ (Stuck In Elevator) ತೊಂದರೆ ಅನುಭವಿಸಬೇಕಾಗುತ್ತದೆ. ನೀವು ಒಂಟಿಯಾಗಿ ಲಿಫ್ಟ್ ನಲ್ಲಿ ಸಿಕ್ಕಿಕೊಂಡ್ರೆ ಈ ಸಿಂಪಲ್ ನ್ಯಾಕ್ ಬಳಸಿ, ಕೂಡಲೇ ಬಚಾವ್ ಆಗಿ ಹೊರಬನ್ನಿ !

ಲಿಫ್ಟ್ ಇದ್ದಕ್ಕಿದ್ದಂತೆ ನಿಂತರೆ, ಗಾಬರಿಯಾಗಬೇಡಿ. ಮೊದಲು ನೀವು ಶಾಂತವಾಗಿರಲು ಪ್ರಯತ್ನಿಸಬೇಕು. ಚಿಂತಿಸುವ ಮತ್ತು ಭಯಭೀತರಾಗುವ ಬದಲು, ಕೂಲ್ ಆಗಿರಿ, ಆಗ ಮುಂದೆ ನಿಮಗೇನು ಮಾಡಬೇಕು ಎಂಬುವುದರ ಬಗ್ಗೆ ತಿಳಿಯುತ್ತದೆ.

ಲಿಫ್ಟ್ನಲ್ಲಿ ನೆಟ್ವರ್ಕ್ ಇದ್ದರೆ ನಿಮ್ಮ ಆತ್ಮೀಯರಿಗೆ ಅಥವಾ ಕಾವಲುಗಾರನಿಗೆ, ಯಾರಿಗಾದರೂ ಕರೆ ಮಾಡಿ. ಲಿಫ್ಟ್ ನಲ್ಲಿ ಸಿಲುಕಿಕೊಂಡಿರುವ ಬಗ್ಗೆ ತಿಳಿಸಿ. ಲಿಫ್ಟ್ಗಳು ಸಾಮಾನ್ಯವಾಗಿ ಇಂಟರ್ಕಾಮ್ ಅಥವಾ ತುರ್ತು ಬಟನ್ ಅನ್ನು ಹೊಂದಿರುತ್ತವೆ. ಮೊಬೈಲ್ ಕೆಲಸ ಮಾಡದಿದ್ದರೆ ಬಟನ್ ಒತ್ತಿ ಅಥವಾ ಇಂಟರ್ಕಾಮ್ ಗಾರ್ಡ್ ಅನ್ನು ಸಂಪರ್ಕಿಸಲು ಪ್ರಯತ್ನಿಸಿ.

ಇತ್ತೀಚಿನ ದಿನಗಳಲ್ಲಿ, ಓವರ್ಹೆಡ್ ಫ್ಯಾನ್ಗಳನ್ನು ಲಿಫ್ಟ್ಗಳಲ್ಲಿ ಅಳವಡಿಸಲಾಗಿದೆ. ಇದನ್ನು ಆನ್ ಮಾಡಿದರೆ ಗಾಳಿ ಬರುತ್ತಲೇ ಇರುತ್ತದೆ ಮತ್ತು ಉಸಿರಾಟಕ್ಕೆ ತೊಂದರೆ ಆಗುವುದಿಲ್ಲ. ಲಿಫ್ಟ್ ತಾಂತ್ರಿಕ ಅಸಮರ್ಪಕ ಕಾರ್ಯಗಳನ್ನು ಸಾಮಾನ್ಯವಾಗಿ ಕಡಿಮೆ ಸಮಯದಲ್ಲಿ ಸರಿಪಡಿಸಲಾಗುತ್ತದೆ. ಹಾಗಾಗಿ ತಾಳ್ಮೆಯಿಂದ ಕಾಯಿರಿ.

ಇದನ್ನೂ ಓದಿ:  Navaratri: ನವರಾತ್ರಿಯಲ್ಲಿ ಉಪವಾಸ ಮಾಡೋ ಪ್ಲಾನ್ ಏನಾದ್ರೂ ಉಂಟಾ ?! ಹಾಗಿದ್ರೆ ತಪ್ಪದೇ ಇವನ್ನು ಫಾಲೋ ಮಾಡಿ !