Home News Rare Sanke Video: ಭೂಮಿಯಲ್ಲಿ ಕಂಡು ಬಂದ ಅಪರೂಪದ ಹಾವು! ಹುಲ್ಲಿಗೂ ಇದಕ್ಕೂ ವ್ಯತ್ಯಾಸನೇ ಇಲ್ಲ...

Rare Sanke Video: ಭೂಮಿಯಲ್ಲಿ ಕಂಡು ಬಂದ ಅಪರೂಪದ ಹಾವು! ಹುಲ್ಲಿಗೂ ಇದಕ್ಕೂ ವ್ಯತ್ಯಾಸನೇ ಇಲ್ಲ ಗುರೂ…

Rare Sanke Video

Hindu neighbor gifts plot of land

Hindu neighbour gifts land to Muslim journalist

Rare Sanke Video: ನೀವು ಈ ಜಗತ್ತಿನಲ್ಲಿ ಹಲವಾರು ವಿಧದ ಹಾವುಗಳನ್ನು ಕಂಡಿರಬಹುದು. ಅವುಗಳಲ್ಲಿ ಕೆಲವು ವಿಷಕಾರಿ, ಇನ್ನು ಕೆಲವು ಅಪಾಯಕಾರಿ ಆಗಿರಬಹುದು. ಕೆಲವೊಂದು ಹಾವುಗಳನ್ನು ನಾವು ಪುಸ್ತಕಗಳಲ್ಲಿ ನೋಡಿರಬಹುದು. ಆದರೆ ಅಂತಹ ಹಾವುಗಳು ನಮ್ಮ ಮುಂದೆ ಬಂದಾಗ ಹೇಗಾಗಬೇಡ? ಇಂತಹ ನಿಗೂಢ ಹಾವಿನ ವೀಡಿಯೋವೊಂದು ಸಖತ್‌ ವೈರಲ್‌ ಆಗುತ್ತಿದೆ.

ಮಾಧ್ಯಮ ವರದಿಗಳ ಪ್ರಕಾರ, ಈ ಹಾವು ಥೈಲ್ಯಾಂಡ್‌ನಲ್ಲಿ ಪತ್ತೆಯಾಗಿದೆ. ಅದರ ಬಣ್ಣ, ರೂಪ ನೋಡಿದಾಗ ಏನಿದು ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡಬಹುದು. ಇದನ್ನು ನೋಡಿದ ಕೂಡಲೇ ಹಸಿರು ಹುಲ್ಲನ್ನು ನೋಡುತ್ತಿರುವಂತೆ ಭಾಸವಾಗುತ್ತದೆ. ಆದರೆ ಇದು ಹಾವು. ಹೌದು, ಹುಲ್ಲಿನಂತೆ ಕಾಣುವ ಹಾವು.

ಕೇವಲ ರೋಮದಿಂದಲೇ ತುಂಬಿಕೊಂಡಿರುವ ಹಾವು ಇದು. ಇವು ಹೆಚ್ಚಾಗಿ ನೀರು ಇರುವ ಸ್ಥಳಗಳಲ್ಲಿ ಕಂಡು ಬರುತ್ತದೆ. ತನ್ನ ಆಕಾರದಿಂದಾಗಿ ಇವುಗಳನ್ನು ಬೇಗನೇ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ. ಅಲ್ಲದೇ ಇವುಗಳನ್ನು ಪಫ್‌-ಫೇಸ್ಡ್‌ ಹಾವುಗಳು ಎಂದು ಕರೆಯಲಾಗುತ್ತದೆ. ಇತರ ಹಾವುಗಳಿಗೆ ಹೋಲಿಸಿದರೆ ಇವುಗಳು ಕಡಿಮೆ ವಿಷಕಾರಿ. ಆದರೆ ಇವು ಮನುಷ್ಯರಿಗೆ ಅಪಾಯ ಉಂಟುಮಾಡಬಲ್ಲದು.

ಈ ವೀಡಿಯೊವನ್ನು X ಬಳಕೆದಾರ @Humanbydesign3 ಅವರು ಹಂಚಿಕೊಂಡಿದ್ದಾರೆ. ವೀಡಿಯೋ ಇಲ್ಲಿದೆ.

ಇದನ್ನು ಓದಿ: Own Flat Purchase : ಸ್ವಂತ ಮನೆ ಕಟ್ಟಬೇಕೆಂದು ಆಸೆಯಲ್ಲಿದ್ದೀರಾ ?! ಹಾಗಿದ್ರೆ ಕೇಂದ್ರದಿಂದ ಬಂತು ನೋಡಿ ಗುಡ್ ನ್ಯೂಸ್ !