Home latest Indonesia Hindu Temple: ದೇವಾಲಯದಲ್ಲಿ ವಿದೇಶಿಗನಿಂದ ಬೆತ್ತಲೆ ಧ್ಯಾನ – ಸರ್ಕಾರ ಮಾಡಿದ್ದೇನು ?!

Indonesia Hindu Temple: ದೇವಾಲಯದಲ್ಲಿ ವಿದೇಶಿಗನಿಂದ ಬೆತ್ತಲೆ ಧ್ಯಾನ – ಸರ್ಕಾರ ಮಾಡಿದ್ದೇನು ?!

Hindu neighbor gifts plot of land

Hindu neighbour gifts land to Muslim journalist

Indonesia Hindu Temple: ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಇಂಡೋನೇಷ್ಯಾದ ಬಾಲಿ ದೇವಸ್ಥಾನದಲ್ಲಿ ಬೆತ್ತಲೆಯಾಗಿ ಓಡಾಡಿರುವುದು ಇದೇ ಮೊದಲಲ್ಲ. ಇದೀಗ ಮತ್ತೊಬ್ಬ ವಿದೇಶಿಗ ಬೆತ್ತಲೆಯಾಗಿ ಧ್ಯಾನ ಮಾಡಿರುವುದಾಗಿ ಮಾಹಿತಿ ದೊರೆತಿದ್ದು, ಆತನಿಗಾಗಿ ಸರ್ಕಾರ ಹುಡುಕಾಟ ನಡೆಸುತ್ತಿದೆ.

ಹೌದು, ಇಂಡೋನೇಷ್ಯಾದ ಪ್ರವಾಸಿ ದ್ವೀಪ ಬಾಲಿಯ ಅಧಿಕಾರಿಗಳು ಮಂಗಳವಾರ ಹಿಂದೂ ದೇಗುಲದಲ್ಲಿ (Indonesia Hindu Temple) ಬೆತ್ತಲೆಯಾಗಿ ಧ್ಯಾನ ಮಾಡುತ್ತಿರುವ ವಿದೇಶಿ ಪ್ರಜೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದ್ದು, ಈ ಹಿನ್ನೆಲೆ ಇಂಡೋನೇಷ್ಯಾ ಸರ್ಕಾರ ಹುಡುಕಾಟ ನಡೆಸ್ತಿದೆ ಎಂದು ತಿಳಿದುಬಂದಿದೆ.

ಮುಖ್ಯವಾಗಿ ಇಂಡೋನೇಷ್ಯಾದಲ್ಲಿ ಅನೇಕ ಹಿಂದೂ ದೇಗುಲಗಳೂ ಇವೆ. ಈ ದೇವಾಲಯವೊಂದರಲ್ಲಿ ವಿದೇಶಿ ಪ್ರಜೆ ಬೆತ್ತಲೆಯಾಗಿ ಧ್ಯಾನ ಮಾಡಿದ್ದಾರೆ ಎಂಧು ತಿಳಿದುಬಂದಿದೆ. ಈ ಸಂಬಂಧದ ವಿಡಿಯೋವೊಂದು ವೈರಲ್‌ ಆಗಿದೆ.

ಪ್ರಧಾನವಾಗಿ ಹಿಂದೂ ದ್ವೀಪದ ಸಂಸ್ಕೃತಿಗೆ ಅಗೌರವದ ಕೃತ್ಯಗಳು ಸೇರಿದಂತೆ ಹಲವಾರು ಘಟನೆಗಳು ನಡೆಯುತ್ತಿರುವ ಹಿನ್ನೆಲೆ ಅನುಚಿತವಾಗಿ ವರ್ತಿಸುವ ಪ್ರವಾಸಿಗರ ಮೇಲೆ ಕ್ರಮ ತೆಗೆದುಕೊಳ್ಳೋದಾಗಿ ಪಾಮ್ ಫ್ರಿಂಜ್ಡ್ ಹಾಟ್‌ಸ್ಪಾಟ್ ಪ್ರತಿಜ್ಞೆ ಮಾಡಿದೆ. ಬಲಿನೀಸ್ ಇನ್ಫ್ಲ್ಯುಯೆನ್ಸರ್‌ ನಿ ಲುಹ್ ಡಿಜೆಲಾಂಟಿಕ್ ಶನಿವಾರ ಮತ್ತು ಭಾನುವಾರದ ನಡುವೆ ಹಲವಾರು ಬಾರಿ ವಿಡಿಯೋವನ್ನು ರೀಪೋಸ್ಟ್ ಮಾಡಿದ ನಂತರ ಹಿಂದೂ ದ್ವೀಪದಲ್ಲಿ ಈ ಪ್ರಕರಣವು ವ್ಯಾಪಕ ಗಮನವನ್ನು ಗಳಿಸಿದೆ.

ಈ ಘಟನೆಗೆ ಸಂಬಂಧಿಸಿದಂತೆ ನಾವು ಇನ್ನೂ ತನಿಖೆ ನಡೆಸುತ್ತಿದ್ದೇವೆ ಎಂದು ವಲಸೆ ಕಚೇರಿ ಮುಖ್ಯಸ್ಥ ಟೆಡಿ ರಿಯಾಂಡಿ ಮಂಗಳವಾರ ಎಎಫ್‌ಪಿಗೆ ಕಳುಹಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ವಿದೇಶಿ ಪ್ರಜೆಯನ್ನು ಅಧಿಕಾರಿಗಳು ಗುರುತಿಸಿದ್ದಾರೆ, ಆದರೆ ಹುಡುಕಾಟ ನಡೆಯುತ್ತಿರುವುದರಿಂದ ಅವರ ಹೆಸರು ಮತ್ತು ರಾಷ್ಟ್ರೀಯತೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿಲ್ಲ. “ಪ್ರಸ್ತುತ ವಲಸೆ ಕಚೇರಿಯು ವಿದೇಶಿ ಪ್ರಜೆಯ ಸಾಮಾಜಿಕ ಮಾಧ್ಯಮ ಖಾತೆಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ” ಎಂದು ರಿಯಾಂಡಿ ತಿಳಿಸಿದ್ದಾರೆ.

https://www.instagram.com/reel/Cx0WwzPyyfx/?utm_source=ig_web_copy_link

ಇದನ್ನೂ ಓದಿ: Petrol-Diesel Price Today: ವಾಹನ ಚಾಲಕರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ : ಏಕಾಏಕಿ ಕುಸಿದ ಪೆಟ್ರೋಲ್ ಬೆಲೆ