B S Yadiyurappa: ಯಡಿಯೂರಪ್ಪರಿಗೆ ಬಂತು ಹೊಸ ಟಾಸ್ಕ್ – ಗೆದ್ದರೆ ಮಾತ್ರ ವಿಜಯೇಂದ್ರನಿಗೆ ಬಿಜೆಪಿ ಅಧ್ಯಕ್ಷ ಪಟ್ಟ !!
Latest news political news If B S Yeddyurappa completes this task,his son B Y Vijayendra will become the state president
B S Yadiyurappa: ರಾಜ್ಯ ರಾಜಕೀಯದಲ್ಲಿ ಬಿಜೆಪಿ ಸ್ಥಿತಿ ಅತಂತ್ರವಾಗಿದೆ. ಹೊಸ ರಾಜ್ಯಾಧ್ಯಕ್ಷರ ನೇಮಕವಿಲ್ಲದೆ ಪಕ್ಷವು ಸೊರಗುತ್ತಿವೆ. ಇದರ ನಡುವೆಯೂ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಲು ಶುರುವಾಗಿದೆ. ಆದರೀಗ ಮತ್ತೆ ರಾಜ್ಯಾಧ್ಯಕ್ಷರ ನೇಮಕ ವಿಚಾರ ಮುನ್ನಲೆಗೆ ಬಂದಿದೆ. ಅದೂ ಕೂಡ ವಿಶೇಷವಾಗಿ ಇದರ ಉರುಳು ಬಿಜೆಪಿ ಮಾಸ್ ಲೀಡರ್ ಯಡಿಯೂರಪ್ಪನವರ(B S Yadiyurappa)ಕುತ್ತಿಗೆಗೇ ಬಂದು ಬಿದ್ದಿದ್ದು ಹೈಕಮಾಂಡ್ ಟಾಸ್ಕ್ ಒಂದನ್ನು ನೀಡಿದೆ. ಯಡಿಯೂರಪ್ಪನವರು ಹೇಗಾದರು ಮಾಡಿ ಈ ಟಾಸ್ಕ್ ಕಂಪ್ಲೀಟ್ ಮಾಡಿದ್ರೆ ಅವರಂದುಕೊಂಡಂತೆ ಅವರ ಮಗ ಬಿ ವೈ ವಿಜಯೇಂದ್ರನಿಗೆ ರಾಜ್ಯಾಧ್ಯಕ್ಷ ಪಟ್ಟ ಪಕ್ಕಾ ಆಗಲಿದೆ.
ಹೌದು, ತಮ್ಮ ಪುತ್ರ ಬಿ ವೈ ವಿಜಯೇಂದ್ರನಿಗೆ(B Y Vijayendra) ರಾಜ್ಯದ ಬಿಜೆಪಿ ಉಸ್ತುವಾರಿ ಹೋಗಬೇಕೆಂಬುದು ಮಾಜಿ ಸಿಎಂ ಯಡಿಯೂರಪ್ಪನವರ ಕನಸು. ಇದಕ್ಕಾಗಿಯೇ ಅವರು ಈ ಸಲ ಚುನಾವಣೆಗೂ ನಿಲ್ಲಿಲ್ಲ ಎಂಬ ಮಾತು ಎಲ್ಲೆಡೆ ಹಬ್ಬಿತ್ತು. ಅಲ್ಲದೆ ಈ ನಿಟ್ಟಿನಲ್ಲಿ ಯಡಿಯೂರಪ್ಪರು ಸಾಕಷ್ಟು ಶ್ರಮವಹಿಸಿದ್ದರು. ಆದರೆ ಯಾರ ಮಾತಿಗೂ ಜಗ್ಗದ ಹೈಕಮಾಂಡ್ ಇದಾವುದಕ್ಕೂ ಸೊಪ್ಪು ಹಾಕದೆ ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸುತ್ತಿದೆ. ಅಲ್ಲದೆ ಇದೀಗ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವದರಿಂದ ಕರ್ನಾಟಕದಲ್ಲಿ ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯಬಹುದೆಂದು ಯೋಚಿಸಿ ಯಡಿಯೂರಪ್ಪನವರಿಗೆ ಹೊಸ ಟಾಸ್ಕ್ ನೀಡಿದೆ. ಇದರಲ್ಲೇನಾದರು ಯಡಿಯೂರಪ್ಪ ಗೆದ್ದರೆ ಅವರ ಮಗ ವಿಜಯೇಂದ್ರ ರಾಜ್ಯ ಬಿಜೆಪಿಗೆ ಸಾರಥಾಯಾಗೋದು ಪಕ್ಕಾ ಆಗಿದೆ.
ಏನದು ಟಾಸ್ಕ್?
ಎಲ್ಲರಿಗೂ ತಿಳಿದಂತೆ, ರಾಜ್ಯದ ಜನ ಊಹಿಸಿದಂತೆ 2024ರ ಲೋಕಸಭಾ ಚುನಾವಣೆಗೆ (Parliament Election 2024) ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕೇಂದ್ರ ನಾಯಕರು ಬಿಜೆಪಿ-ಜೆಡಿಎಸ್ ಮೈತ್ರಿಯನ್ನು (BJP-JDS Alliance) ರಾಜ್ಯದಲ್ಲಿ ಯಶಸ್ವಿಗೊಳಿಸುವ ಮಹತ್ತರ ಹೊಣೆಗಾರಿಕೆಯನ್ನು ಬಿಜೆಪಿ ಹೈಕಮಾಂಡ್ (BJP High command) ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರಿಗೆ ನೀಡಿದೆ. ಇನ್ನೂ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೇಂದ್ರ ನಾಯಕರು ಮೈತ್ರಿಯ ಕುರಿತಂತೆ ಸಂಪೂರ್ಣ ವಿವರನ್ನು ಹಂಚಿಕೊಂಡಿದ್ದು, ಈ ಮೈತ್ರಿಯನ್ನು ಯಶಸ್ವಿಗೊಳಿಸುವ ಜವಾಬ್ದಾರಿಯನ್ನು ಅವರ ಹೆಗಲಿಗೆ ಹೊರಿಸಿದ್ದಾರೆ ಎಂಬ ಮಾಹಿತಿ ಇದೆ.
ಅಲ್ಲದೆ ಬಿಜೆಪಿ-ಜೆಡಿಎಸ್ ಮೈತ್ರಿಯಾದರೂ ಕೂಟದ ಸಾರಥಿ ನೀವೇ ಆಗಿರುತ್ತೀರಿ. ನೀವು ಎರಡೂ ಪಕ್ಷಗಳ ಮೈತ್ರಿಯನ್ನು ಯಶಸ್ವಗೊಳಿಸಬೇಕು. ನಾಯಕರಿಗೆ ವಿಚಾರಗಳನ್ನು ಮನವರಿಕೆ ಮಾಡಿಕೊಡಬೇಕು, ಜಂಟಿ ಹೋರಾಟಗಳನ್ನು ಸಂಘಟಿಸಬೇಕು ಎಂಬಿತ್ಯಾದಿ ಸಲಹೆಗಳನ್ನು ಹೈಕಮಾಂಡ್ ನೀಡಿದೆ. ಅದಕ್ಕಿಂತಲೂ ಮುಖ್ಯವಾಗಿ ಜಂಟಿ ಸಾರಥಿಯಾಗಿ 2024ರ ಚುನಾವಣೆಯಲ್ಲೂ ಬಿಜೆಪಿಗೆ 25 ಸ್ಥಾನಗಳನ್ನು (Target to reach 25 Seats) ಗೆದ್ದುಕೊಡಬೇಕು ಎಂಬ ಟಾರ್ಗೆಟ್ ಅನ್ನು ಬಿ.ಎಸ್‌ವೈ ಅವರಿಗೆ ನೀಡಲಾಗಿದೆ. ಬಿಎಸ್‌ವೈ ಅವರಿಗೆ 25 ಸ್ಥಾನ ಗೆಲ್ಲುವ ಟಾಸ್ಕ್ ನೀಡಿದ್ದಾರೆ ಎಂದರೆ ಅವರೊಂದಿಗೆ ಮಗ ವಿಜಯೇಂದ್ರ ಅವರು ಕೂಡಾ ಕೈಜೋಡಿಸಲಿದ್ದಾರೆ. ಈ ಜೋಡಿ ಏನಾದರೂ ಕೇಂದ್ರದ ಮಾತಿಗೆ ತಕ್ಕಂತೆ 25 ಸ್ಥಾನ ಗೆದ್ದು ಕೊಟ್ಟರೆ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಫಿಕ್ಸ್ ಎಂದು ಹೇಳಲಾಗುತ್ತಿದೆ.