C M Siddaramaiah: ಮುಸ್ಲಿಮರಿಗೆ ಮತ್ತೊಂದು ಭಾಗ್ಯ – ಅಧಿಕಾರ ಅವಧಿ ಮುಗಿವ ಮುನ್ನ ಇದನ್ನು ಮಾಡೇ ತೀರುತ್ತೇನೆಂದ ಸಿಎಂ ಸಿದ್ದರಾಮಯ್ಯ !!

Karnataka politics news C M Siddaramaiah announces 10000 crore grant for minorities

C M Siddaramaiah: ನನ್ನ ಅಧಿಕಾರವಧಿ ಮುಗಿಯುವಷ್ಟರಲ್ಲಿ ಮುಸ್ಲಿಮ್ ಸಮುದಾಯದವರಿಗೆ ಬರೋ 10 ಸಾವಿರ ಕೋಟಿಯಷ್ಟು ಅನುದಾನವನ್ನು ಬಿಡುಗಡೆ ಮಾಡುವೆ ಎಂದು ಸಿಎಂ ಸಿದ್ದರಾಮಯ್ಯ(C M Siddaramaiah)ಹೇಳಿದ್ದಾರೆ.

ಹೌದು, ಮುಸ್ಲಿಮ್ ಅವರನ್ನು ಒಳಗೊಂಡು ಅಲ್ಪಸಂಖ್ಯಾತರಿಗಿದ್ದ 400 ಕೋಟಿ ರೂ ಇದ್ದ ಅನುದಾನವನ್ನು ನಾನು 3 ಸಾವಿರ ಕೋಟಿ ರು.ಗೆ ಹೆಚ್ಚಳ ಮಾಡಿದ್ದೆ. ಮುಂದಿನ ವರ್ಷವೂ ಕೂಡ ಅನುದಾನ ಹೆಚ್ಚಳ ಮಾಡುತ್ತೇನೆ. ನನ್ನ ಅಧಿಕಾರ ಅವಧಿ ಮುಗಿಯುವ ವೇಳೆಗೆ 10 ಸಾವಿರ ಕೋಟಿ ರು. ಅನುದಾನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅಂದಹಾಗೆ ಬ್ಯಾರೀಸ್‌ ವೆಲ್ ಫೇರ್‌ ಅಸೋಸಿಯೇಷನ್‌ ನೂತನವಾಗಿ ನಿರ್ಮಿಸಿರುವ ಬ್ಯಾರೀಸ್ ಸೌಹಾರ್ದ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ಮುಸ್ಲಿಂ ಸಮುದಾಯಕ್ಕೆ ಹೆಚ್ಚು ಅನುದಾನ ನೀಡುವಂತೆ ಬೇಡಿಕೆ ಇಟ್ಟಿದ್ದೀರಿ. ನಾನು ಮುಖ್ಯಮಂತ್ರಿಯಾದಾಗ ಯಾರೂ ಕೂಡ ನನಗೆ ಅನುದಾನಕ್ಕೆ ಮನವಿ ಮಾಡಲಿಲ್ಲ. ಆದರೂ ಅನುದಾನ ಹೆಚ್ಚಳ ಮಾಡಿದ್ದೆ. ರಾಜ್ಯದಲ್ಲಿ ಎಲ್ಲ ಸಮುದಾಯಗಳನ್ನೂ ಸಮಾನವಾಗಿ ಅಭಿವೃದ್ಧಿ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ರಾಜ್ಯದ ಸಂಪತ್ತು ಎಲ್ಲರಿಗೂ ಸಮಾನವಾಗಿ ಸಿಗಬೇಕು ಎಂದರು. ಮುಂದಿನ ವರ್ಷದಲ್ಲೂ ಅನುದಾನ ಹೆಚ್ಚಳದ ಕೆಲಸ ಮಾಡುತ್ತೇನೆ. ನನ್ನ ಅವಧಿ ಮುಗಿಯುವ ವೇಳೆಗೆ ಬಜೆಟ್‌ ಗಾತ್ರ ಹೆಚ್ಚಾದಂತೆ 10 ಸಾವಿರ ಕೋಟಿ ರು.ಗಳಷ್ಟು ಅನುದಾನ ಒದಗಿಸಬಹುದು. ಆ ಕೆಲಸ ನಾನು ಮಾಡುತ್ತೇನೆ ಎಂದು ಹೇಳಿದರು.

ಅಲ್ಲದೆ ಬಿಜೆಪಿಯವರೇಕೆ ಮುಸ್ಲಿಮರನ್ನು ದ್ವೇಷಿಸುತ್ತಾರೆ. ಸಂವಿಧಾನವನ್ನು ಒಪ್ಪದೇ ಇರುವವರು ಪ್ರಜಾಪ್ರಭುತ್ವದಲ್ಲಿರುವುದು ಒಳ್ಳೆಯದಲ್ಲ. ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿ ಕಟ್ಟುವುದು, ಧರ್ಮ, ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುವುದು ರಾಜಕಾರಣವಲ್ಲ. ಜನರಿಗಾಗಿ ರಾಜಕಾರಣ ಮಾಡಬೇಕೆ ಹೊರತು ಜನ ಹಾಗೂ ಸಮಾಜವನ್ನು ಬಿಟ್ಟು ರಾಜಕಾರಣ ಮಾಡಬಾರದು ಎಂದು ಹೇಳಿದರು.

ಇದನ್ನೂ ಓದಿ:Anna bhagya: ಅನ್ನಭಾಗ್ಯದ ಅಕ್ಕಿ, ಹಣದ ವಿತರಣೆಯಲ್ಲಿ ಮಹತ್ವದ ಬದಲಾವಣೆ !! ಬಿಗ್ ಅಪ್ಡೇಟ್ ನೀಡಿದ ಸಚಿವ ಮುನಿಯಪ್ಪ

 

 

 

Leave A Reply

Your email address will not be published.