Central Government Employees:ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ- ಈ ಸಲದ ಡಿಎ ಹೆಚ್ಚಳ ಶೇ 3 ಅಲ್ಲ, ಇನ್ನೂ ಆಗಲಿದೆ ಹೆಚ್ಚು !!

Central Government news 7th pay commission update Dearness allowance salary Hike for govt employees

Central Government Employees: ಕೇಂದ್ರ ನೌಕರರಿಗೆ(Central Government Employees) ಭರ್ಜರಿ ಗುಡ್ ನ್ಯೂಸ್ ಹೊರ ಬೀಳಲಿದೆ. ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ನೀಡುವ ಡಿಎ ಮತ್ತು ಡಿಆರ್ ಅನ್ನು (DA and DR) ಈ ಬಾರಿ ಶೇ. 3ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಳ ಮಾಡುವ ಸಂಭವ ಹೆಚ್ಚಿದೆ.

ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆ ಹೆಚ್ಚಳವಾಗುವ ಘೋಷಿಸುವ ಸಾಧ್ಯತೆ ದಟ್ಟವಾಗಿದ್ದು, ವರದಿಗಳ ಪ್ರಕಾರ ಡಿಎ ಮತ್ತು ಡಿಆರ್ ಅನ್ನು ಈ ಬಾರಿ ಶೇ. 3ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಳ ಮಾಡುವ ಸಂಭವವಿದೆ ಎನ್ನಲಾಗಿದೆ. ತುಟ್ಟಿಭತ್ಯೆ ಹೆಚ್ಚಳವನ್ನು (DA hike) ಯಾವಾಗ ಪ್ರಕಟಿಸಲಾಗುತ್ತದೆ ಎಂಬ ಕುರಿತು ಕೆಲ ಸುದ್ದಿಗಳು ಹರಿದಾಡುತ್ತಿವೆ. ಇವುಗಳ ಅನುಸಾರ, ನವರಾತ್ರಿ ಕಳೆದ ಬಳಿಕ ಮತ್ತು ದೀಪಾವಳಿಗೆ ಮುಂಚೆ ಡಿಎ ಏರಿಕೆ ನಿರ್ಧಾರ ಪ್ರಕಟವಾಗಬಹುದು ಎನ್ನಲಾಗುತ್ತಿದೆ.ಹೀಗಿದ್ದರೂ ಕೂಡ 2023ರ ಜುಲೈ 1ರಿಂದಲೇ ಅದು ಅನ್ವಯವಾಗಲಿದೆ ಎನ್ನಲಾಗಿದೆ. ಈ ಬಾರಿ ಅಕ್ಟೋಬರ್ 15ರಿಂದ 24ರವರೆಗೂ ಈ ಬಾರಿಯ ನವರಾತ್ರಿ ಇದೆ. ನವೆಂಬರ್ 12ಕ್ಕೆ ದೀಪಾವಳಿ ಹಬ್ಬ ಇದೆ. ಅಂದಾಜು ಪ್ರಕಾರ ಅಕ್ಟೋಬರ್ 25ರಿಂದ ನವೆಂಬರ್ 8ರೊಳಗೆ ಡಿಎ ಮತ್ತು ಡಿಆರ್ ಬಗ್ಗೆ ಸರ್ಕಾರ ನಿರ್ಧಾರ ಪ್ರಕಟಿಸಬಹುದು.

ಕೈಗಾರಿಕೆಯ ಕಾರ್ಮಿಕರ ಗ್ರಾಹಕ ಬೆಲೆ ಅನುಸೂಚಿ (ಸಿಪಿಐ- ಐಡಬ್ಲ್ಯು) ಆಧಾರದ ಮೇಲೆ ತುಟ್ಟಿಭತ್ಯೆಯನ್ನು ಪರಿಗಣಿಸಲಾಗುತ್ತದೆ. ಈ ಬಾರಿ ಶೇ. 3ರಷ್ಟು ಮಾತ್ರವೇ ಡಿಎ ಮತ್ತು ಡಿಆರ್ ಏರಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಆದರೆ, ಹೊಸ ಸುದ್ದಿ ಪ್ರಕಾರ ಈ ಬಾರಿಯೂ ಶೇ. 4ರಷ್ಟು ಡಿಎ ಮತ್ತು ಡಿಆರ್ ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯಕ್ಕೆ ಡಿಎ ಮತ್ತು ಡಿಆರ್ ಶೇ. 42ರಷ್ಟಿವೆ. ಈಗ 4 ಪ್ರತಿಶತದಷ್ಟು ಹೆಚ್ಚಳವಾದರೆ ಡಿಎ ಶೇ. 46ಕ್ಕೆ ಹೋಗುತ್ತದೆ. ದೀಪಾವಳಿ ಹಬ್ಬದೊಳಗಾಗಿ ಡಿಎ ಹೆಚ್ಚಳ ಪ್ರಕಟವಾಗುವ ಸಾಧ್ಯತೆಯಿದ್ದು, ಜುಲೈ 1ರಿಂದ ಅದು ಪೂರ್ವಾನ್ವಯವಾಗಲಿದೆ.

ಏಳನೇ ವೇತನ ಆಯೋಗದ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ಇಲ್ಲಿದೆ. ಶೀಘ್ರವೇ 7 ನೇ ಆಯೋಗದ ವರದಿ ಸಲ್ಲಿಕೆಯಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾಹಿತಿ ನೀಡಿದ್ದಾರೆ. 7 ನೇ ವೇತನ ಆಯೋಗ ವರದಿ ಸಿದ್ಧತೆಯ ಅಂತಿಮ ಹಂತದಲ್ಲಿದ್ದು, ಈ ಕುರಿತು ಸಿಎಂ ಸಿದ್ದರಾಮಯ್ಯನವರ ಅವಧಿ ವಿಸ್ತರಣೆಗೆ ಅವಕಾಶವಿಲ್ಲ. ನವೆಂಬರ್ 17ರವರೆಗೆ ಸಮಯವಿದ್ದು, ಅಷ್ಟರಲ್ಲಿ ವರದಿ ಸಲ್ಲಿಕೆಯಾಗುವ ಸಂಭವದ ಕುರಿತು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ಬಂಟ್ವಾಳ : ಜೀವ ಕಳೆದುಕೊಂಡ ಜೀವ ವಿಮಾ ಏಜೆಂಟ್ : ಕೆರೆಯಲ್ಲಿ ಶವವಾಗಿ ಪತ್ತೆ

Leave A Reply

Your email address will not be published.