Home Karnataka State Politics Updates K S Eshwarappa: ಇನ್ನೂ ಆಗದ ಬಿಜೆಪಿ ರಾಜ್ಯದ್ಯಕ್ಷರ ಆಯ್ಕೆ- ಸ್ಫೋಟಿಸಿದ ಈಶ್ವರಪ್ಪನ ತಾಳ್ಮೆ !!

K S Eshwarappa: ಇನ್ನೂ ಆಗದ ಬಿಜೆಪಿ ರಾಜ್ಯದ್ಯಕ್ಷರ ಆಯ್ಕೆ- ಸ್ಫೋಟಿಸಿದ ಈಶ್ವರಪ್ಪನ ತಾಳ್ಮೆ !!

K S Eshwarappa

Hindu neighbor gifts plot of land

Hindu neighbour gifts land to Muslim journalist

K S Eshwarappa: ಕರ್ನಾಟಕದಲ್ಲಿ ಬಿಜೆಪಿಯ(karnataka BJP) ಪಾಡಂತೂ ಹೇಳುತೀರದಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ(Assembly election) ಸೋಲುಂಡ ಬಳಿಕವಂತೂ ಸಮರ್ಥ ನಾಯಕನಿಲ್ಲದೆ, ಉತ್ತಮ ರಾಜ್ಯಾಧ್ಯಕ್ಷನಿಲ್ಲದೆ ಬಿಜೆಪಿ ಅತಂತ್ರವಾಗಿ ಬಿಟ್ಟಿದೆ. ಅದರಲ್ಲೂ ನಾಯಕರುಗಳ ಕಚ್ಚಾಟ, ಅವರ ಒಳ ಜಗಳ, ಒಳ ಭಿನ್ನಾಭಿಪ್ರಾಯಗಳಿಂದ ಪಕ್ಷ ನೆನೆಗುಂದಿದೆ. ಇನ್ನು ಹೈಕಮಾಂಡ್ ಮಾಡುತ್ತಿರುವ ನಿರ್ಲಕ್ಷ್ಯವಂತೂ ನಾಯಕನಿಗೆ ಬೇಸರ ತರಿಸಿದೆ. ಈ ನಡುವೆ ರಾಜ್ಯಾಧ್ಯಕ್ಷರ ಆಯ್ಕೆಗಾಗಿ ಕಾದು ಕಾದು ಸಾಕಾಗಿರವ ಕೆ ಎಸ್ ಈಶ್ವರಪ್ಪನವರ(K S Eshwarappa) ತಾಳ್ಮೆಯ ಕಟ್ಟೆಯೊಡೆದಿದೆ.

ಹೌದು, ಲೋಕಸಭಾ ಚುನಾವಣೆ ಹತ್ತಿರಬಂದರೂ ಕೂಡ ಇನ್ನೂ ರಾಜ್ಯ ಬಿಜೆಪಿಗೆ ಹೊಸ ಸಾರಥಿ ಬಂದಿಲ್ಲ. ಇದು ರಾಜ್ಯದ ಜನತೆಗಷ್ಟೇ ಅಲ್ಲ ಸ್ವತಃ ರಾಜ್ಯ ಬಿಜೆಪಿ ನಾರಕರಿಗೇ ಬೇಸರ ಉಂಟುಮಾಡಿದೆ. ಇಂದು ಮಾಡುತ್ತಾರೆ, ನಾಳೆ ಮಾಡುತ್ತಾರೆ ಎಂದು ಕಾದು ಕಾದು ಸಾಕಾಗಿದ್ದು, ಅವರ ತಾಳ್ಮೆಯ ಕಟ್ಟೆ ಕೂಡ ಒಡೆಯುತ್ತಿದೆ. ಅಂತೆಯೇ ಇದೀಗ ಬಿಜೆಪಿ ಪ್ರಬಲ ನಾಯಕರಾಗಿರುವ ಕೆ ಎಸ್ ಈಶ್ವರಪ್ಪ ಅವರು ಈ ಬಗ್ಗೆ ಮೌನ ಮುರಿದಿದ್ದು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ವಿಚಾರವಾಗಿ ಆದಷ್ಟು ಬೇಗನೇ ನಿರ್ಧಾರ ತೆಗೆದುಕೊಳ್ಳಬೇಕು. ಈ ಬಗ್ಗೆ ಕೇಂದ್ರದ ನಾಯಕರಿಗೆ ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಅಂದಹಾಗೆ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳೀನ್ ಕುಮಾರ್ ಕಟೀಲರನ್ನೇ ಮುಂದುವರಿಸುವುದಾದರೆ ಮುಂದುವರಿಸಲಿ. ಇಲ್ಲ ಯಾವುದಾದರೂ ತೀರ್ಮಾನ ಕೂಡಲೇ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುವೆ.
ರಾಜ್ಯದ ಬಿಜೆಪಿ ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ ನಡೆಯುತ್ತಿದೆ. ನಮ್ಮ ಕಾರ್ಯಕರ್ತರು ಕೂಡ ಇದನ್ನೇ ಕೇಳುತ್ತಿದ್ದಾರೆ. ಕಾಂಗ್ರೆಸ್ ನವರು ಇದೇ ವಿಚಾರದಲ್ಲಿ ನಮ್ಮನ್ನು ಟೀಕಿಸುತ್ತಿದ್ದಾರೆ. ಸದನದಲ್ಲಿ ಲೇವಡಿ ಮಾಡುತ್ತಿದ್ದಾರೆ. ಹೀಗಾಗಿ ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಇದನ್ನೂ ಓದಿ: H D kumarswamy: ಬಿಜೆಪಿ-ಜೆಡಿಎಸ್ ಮೈತ್ರಿ: ಮುಸ್ಲಿಮರೇ ನೀವಿನ್ನು ಎಚ್ಚರಿಕೆಯಿಂದಿರಿ ಎಂದ ಕುಮಾರಸ್ವಾಮಿ !! ಭಾರೀ ಕುತೂಹಲ ಕೆರಳಿಸಿದ ಮಾಜಿ ಸಿಎಂ ಹೇಳಿಕೆ