Kumara parvata trek: ಭಾರೀ ಮಳೆಯ ಕಾರಣ ಅ.3ರಿಂದ ಕುಮಾರಪರ್ವತ ಚಾರಣಕ್ಕೆ ನಿರ್ಬಂಧ

Dakshina Kannada news Due to heavy rains, the Kumara parvata trek has been restricted from October 3

Share the Article

Kumara parvata trek : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಪ್ರಸಿದ್ಧ ಚಾರಣ ತಾಣ ಕುಮಾರಪರ್ವತಕ್ಕೆ ಚಾರಣಕ್ಕೆ( Kumara parvata trek)ಅ.3ರಿಂದ ನಿರ್ಬಂಧ ವಿಧಿಸಲಾಗಿದೆ.

Kumara parvata trek

ಪ್ರಸ್ತುತ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯ ಪ್ರಮಾಣ ಹೆಚ್ಚಿರುವ ಕಾರಣ ಹಾಗೂ ಹವಾಮಾನ ಇಲಾಖೆಯು ನಿರಂತರವಾಗಿ ಜಿಲ್ಲೆಯಲ್ಲಿ ಆರೆಂಜ್ ಎಲರ್ಟ್ ಘೋಷಿಸಿದ ಕಾರಣ ಚಾರಣಿಗರ ಹಿತದೃಷ್ಠಿಯಿಂದ ಅ.3ರಿಂದ ಮುಂದಿನ ಆದೇಶದ ತನಕ ಕುಮಾರಪರ್ವತ ಚಾರಣ ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾದ್ಯಮಕ್ಕೆ ತಿಳಿಸಿದ್ದಾರೆ.

ಕಡಿದಾದ ಬೆಟ್ಟವನ್ನು ಏರಲು ಮಳೆಯಿಂದಾಗಿ ಚಾರಣಿಗರಿಗೆ ಅತಿಯಾದ ಸಂಕಷ್ಟ ಮತ್ತು ಕಷ್ಟವಾಗುವ ಕಾರಣ ಇಲಾಖೆ ಅ.3ರಿಂದ ಮುಂದಿನ ಆದೇಶದ ತನಕ ಕುಮಾರಪರ್ವತ ಚಾರಣಕ್ಕೆ ನಿರ್ಬಂದ ವಿಧಿಸಿದೆ.ಆದುದರಿಂದ ಚಾರಣಿಗರು, ಪ್ರವಾಸಿಗರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಇಲಾಖೆ ವಿನಂತಿಸಿದೆ.

ಮೇ ತಿಂಗಳಿನಿಂದ ಸೆ.29ರ ತನಕ ಅರಣ್ಯ ಇಲಾಖೆಯು ಬಿರು ಬೇಸಿಗೆ ಮತ್ತು ಅಧಿಕ ಮಳೆಯ ಕಾರಣದಿಂದಾಗಿ ಚಾರಣೀಗರಿಗೆ ಕುಮಾರಪರ್ವತ ಪ್ರಯಾಣಕ್ಕೆ ನಿರ್ಭಂಧ ವಿದಿಸಿತ್ತು.

ಸೆ.30ರ ಶನಿವಾರದಿಂದ ನಿರ್ಬಂಧ ತೆರವುಗೊಳಿಸಿ ಚಾರಣಕ್ಕೆ ಮುಕ್ತ ಅವಕಾಶ ನೀಡಲಾಗಿತ್ತು.ಈ ಕಾರಣದಿಂದ ಶನಿವಾರ,ಆದಿತ್ಯವಾರ ಬೃಹತ್ ಸಂಖ್ಯೆಯಲ್ಲಿ ಚಾರಣಿಗರು ಆಗಮಿಸಿದ್ದರು.

ಆದರೆ ಈ ದಿನಗಳಲ್ಲಿ ಕುಕ್ಕೆ ಸೇರಿದಂತೆ ಬೆಟ್ಟ ಪ್ರದೇಶದಲ್ಲಿ ಅತ್ಯಧಿಕ ಮಳೆ ಸುರಿದ ಕಾರಣ ಚಾರಣಿಗರಿಗೆ ಚಾರಣ ತೆರಳು ಕಷ್ಟವಾಗಿತ್ತು.ಅಲ್ಲದೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯ ಇಲಾಖೆ ಈ ಆದೇಶ ನೀಡಿದೆ.

ಶನಿವಾರ, ಆದಿತ್ಯವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಚಾರಣಾಸಕ್ತರು ಕುಮಾರಪರ್ವತಕ್ಕೆ ತೆರಳಿದ್ದರು.

ಇದನ್ನೂ ಓದಿ: ಅರೆ ಅಜ್ಜನ ಬ್ಯಾಂಕ್ ಖಾತೆಯಿಂದ 13 ಲಕ್ಷ ನಾಪತ್ತೆಯಂತೆ! ವಿಚಾರಣೆ ವೇಳೆ ಬಯಲಾಯ್ತು ಶಾಕಿಂಗ್ ಮಾಹಿತಿ !

Leave A Reply