Mobile : ಮೊಬೈಲ್ ಬಳಕೆದಾರರೇ ಎಚ್ಚರ !! ಚಾರ್ಜ್ ಮಾಡುವಾಗ ಈ ತಪ್ಪು ಮಾಡಿದ್ರೆ ‘ಫೋನ್’ ಸ್ಫೋಟಗೊಳ್ಳೋದು ಪಕ್ಕಾ !!
Mobile: ನಮ್ಮ ದಿನನಿತ್ಯ ಬಳಕೆಯ ವಸ್ತುಗಳಲ್ಲಿ ಮೊಬೈಲ್ ಸಹ ಒಂದಾಗಿದೆ. ಮೊಬೈಲ್ (Mobile) ಆಧುನಿಕತೆ ಕಾಲದಲ್ಲಿ ತುಂಬಾ ಮುಖ್ಯವಾದ ಸಂಪರ್ಕ ಕಲ್ಪಿಸುವ ಸಾಧನವಾಗಿದೆ. ಸಣ್ಣ ವಯಸ್ಸಿನಿಂದ ಹಿರಿಯರ ತನಕ ಮೊಬೈಲ್ ಉಪಯೋಗ ಮಾಡದವರಿಲ್ಲ. ಮೊಬೈಲ್ ನಿಂದ ಎಷ್ಟು ಉಪಯೋಗವೊ ಅಷ್ಟೇ ಅಪಾಯ ಇದೆ ಎನ್ನುವುದು ನಾವು ತಿಳಿದುಕೊಳ್ಳುವುದು ಅಗತ್ಯ. ಹೌದು, ಮೊಬೈಲ್ ಬಳಕೆದಾರರೇ ಎಚ್ಚರ. ಮೊಬೈಲ್ ಚಾರ್ಜ್ ಮಾಡುವಾಗ ಈ ತಪ್ಪು ಮಾಡಿದ್ರೆ ‘ಫೋನ್’ ಸ್ಫೋಟಗೊಳ್ಳೋದು ಪಕ್ಕಾ !!
ಮೊಬೈಲ್ ಚಾರ್ಚ್ ಮಾಡುವಾಗ ಅನೇಕರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಮೊಬೈಲ್ ನಲ್ಲಿ ಚಾರ್ಚ್ ಖಾಲಿಯಾದಾಗ ತಕ್ಷಣ ಫೋನ್ ಚಾರ್ಚಿಂಗ್ ಗೆ ಹಾಕುತ್ತೇವೆ. ಮೊಬೈಲ್ ಚಾರ್ಚ್ ಆಗಲು ಒಂದರಿಂದ ಎರಡು ಗಂಟೆ ತೆಗೆದುಕೊಳ್ಳಬಹುದು. ಆದರೆ ಅಗತ್ಯಕ್ಕಿಂತ ಹೆಚ್ಚು ಚಾರ್ಜ್ ಮಾಡಿದರೆ ಅದರಿಂದ ಕೆಲವೊಂದು ದುಷ್ಟಪರಿಣಾಮ ಬೀರುತ್ತವೆ.
ನೀವು ರಾತ್ರಿಯಿಡೀ ಮೊಬೈಲ್ ಅನ್ನು ಚಾರ್ಜ್ ನಲ್ಲಿ ಬಿಟ್ಟರೆ, ಹಾಗೆ ಮಾಡುವುದನ್ನು ನಿಲ್ಲಿಸಿ. ಇದು ನಿಮ್ಮ ಮೊಬೈಲ್ ಬ್ಯಾಟರಿಯನ್ನು ಹಾನಿಗೊಳಿಸುತ್ತದೆ. ರಾತ್ರಿಯಿಡೀ ಚಾರ್ಜ್ ಮಾಡಿದ ನಂತರವೂ ಮೊಬೈಲ್ ಅನೇಕ ಬಾರಿ ಸ್ಫೋಟಗೊಳ್ಳುವ ಪ್ರಕರಣ ಹೆಚ್ಚಿದೆ. ಅತಿಯಾಗಿ ಚಾರ್ಜ್ ಮಾಡುವುದು ಯಾವಾಗಲೂ ಫೋನ್ ಗೆ ಅಪಾಯಕಾರಿ. ಇದು ಬ್ಯಾಟರಿ ಬಾಳಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಫೋನ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ರಾತ್ರಿಯಿಡೀ ಚಾರ್ಜ್ ಮಾಡುವುದರಿಂದ ಮೊಬೈಲ್ ಆನೇಕ ಬಾರಿ ಬಿಸಿಯಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಅನೇಕ ಸ್ಮಾರ್ಟ್ ಫೋನ್ ಗಳು ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಬರುತ್ತವೆ. ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದಲ್ಲಿ, ಸ್ಮಾರ್ಟ್ಫೋನ್ ಕಡಿಮೆ ಸಮಯದಲ್ಲಿ ವೇಗವಾಗಿ ಚಾರ್ಜ್ ಆಗುತ್ತದೆ. ಆದರೆ, ಇದು ಹಾನಿಕಾರಕವಾಗಿದೆ. ಎಲ್ಲಾ ಸ್ಮಾರ್ಟ್ರೋನ್ಗಳು ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದಲ್ಲಿ ವಿಭಿನ್ನ ಮಿತಿಗಳನ್ನು ಹೊಂದಿವೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಫೋನ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸದಿದ್ದರೆ ಮತ್ತು ನೀವು ಅದನ್ನು ಫಾಸ್ಟ್ ಚಾರ್ಜನೊ್ರಂದಿಗೆ ಚಾರ್ಜ್ ಮಾಡುತ್ತಿದ್ದರೆ, ಅದು ಹಾನಿಕಾರಕವಾಗಬಹುದು.
ಫಾಸ್ಟ್ ಚಾರ್ಜಿಂಗ್ ನಿಂದಾಗಿ, ಸ್ಮಾರ್ಟ್ರೋನ್ಗಳು ವೇಗವಾಗಿ ಬಿಸಿಯಾಗುತ್ತವೆ. ಅನೇಕ ಬಾರಿ ಮದರ್ಬೋಡ್ನ್ರಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗುತ್ತದೆ. ಫೋನ್ ಕೂಡ ಸ್ಫೋಟದ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಫೋನ್ ಅನ್ನು ಚಾರ್ಜ್ ಮಾಡಲು ಬಾಕ್ಸ್ ನಲ್ಲಿ ಬರುವ ಮೂಲ ಮತ್ತು ಪ್ರಮಾಣಿತ ಚಾರ್ಜರ್ ಅನ್ನು ಬಳಸಿ.
ಅನೇಕ ಬಳಕೆದಾರರ ಫೋನ್ಗಳು ಡೆಡ್ ಆಗಿರುವುದನ್ನು ಅಥವಾ ಆನ್ ಮಾಡಿದ ತಕ್ಷಣ ಆಫ್ ಆಗುವುದನ್ನು ಕಾಣಬಹುದು. ಈ ರೀತಿಯ ಸಮಸ್ಯೆ ಹಳೆಯ ಮೊಬೈಲ್ ಗಳಲ್ಲಿ ಕಂಡುಬರುತ್ತದೆ. ಫೋನ್ ಡೆಡ್ ಆಗಲು ಅನೇಕ ಕಾರಣಗಳಿದ್ದರೂ, ಫಾಸ್ಟ್ ಚಾರ್ಜಿಂಗ್ ಸಂದರ್ಭದಲ್ಲಿ ಇದು ಹೆಚ್ಚು ಕಂಡುಬರುತ್ತದೆ. ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸದ ಮೊಬೈಲ್ ಗಳಲ್ಲಿ, ನೀವು ಫಾಸ್ಟ್ ಚಾರ್ಜರ್ ಅನ್ನು ಬಳಸಿದರೆ, ಫೋನ್ ಸ್ಫೋಟಗೊಳ್ಳುವ ಸಾಧ್ಯತೆಯಿದೆ.