JDS : ಪಕ್ಷ ಬಿಡೊ JDS ನಾಯಕರಿಗೆಲ್ಲ ಬಿಗ್ ಶಾಕ್ !! ದೇವೇಗೌಡರು ಮಾಡಿದ್ರು ಮಾಸ್ಟರ್ ಪ್ಲಾನ್

ರಾಜ್ಯದಲ್ಲಿ ಬಿಜೆಪಿ(BJP) ಮತ್ತು ಜೆಡಿಎಸ್(JDS) ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದರಿಂದ ಎರಡು ಪಕ್ಷಗಳಲ್ಲಿ ಕೆಲವು ನಾಯಕರು ಅತೃಪ್ತತರಾಗಿದ್ದಾರೆ. ಅದರಲ್ಲಿಯೂ ಕೂಡ ಜೆಡಿಎಸ್ ನ ಅಲ್ಪ ಸಂಖ್ಯಾತರ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು ರಹಸ್ಯವಾಗಿ ಹಾಗೂ ಗೌಪ್ಯವಾಗಿ ಸಭೆ ನಡೆಸುತ್ತಿದ್ದಾರೆ. ಆದರೆ ಈ ನಡುವೆ ಜೆಡಿಎಸ್ ನ ಪ್ರಬಲ ನಾಯಕ ಆಗಿರುವ ಜಿಟಿ ದೇವೇಗೌಡ(GT Devegowda) ಅವರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಹೌದ, ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಆಗಿರುವ ಕಾರಣ ಅಸಮಾಧಾನಗೊಂಡಿರುವ ಶಾಸಕರು ಜೆಡಿಎಸ್ ಬಿಡುವ ಮುನ್ಸೂಚನೆ ಅರಿತ ಜೆಡಿಎಸ್ ನಾಯಕರು ಪಕ್ಷ ಬಿಟ್ಟು ಹೋಗದಂತೆ ಶಾಸಕರಿಗೆ ಜೆಡಿಎಸ್ ನ ಪ್ರಬಲ ನಾಯಕ ಜಿ ಟಿ ದೇವೇಗೌಡ ಅವರು ಪ್ರತಿಜ್ಞೆ ಮಾಡಿಸಿದ್ದಾರೆನ್ನಲಾಗಿದ್ದು, ‘ನಮ್ಮ ಪಕ್ಷ ತಾಯಿ ಇದ್ದಂತೆ. ಪಕ್ಷದ‌ ಪರವಾಗಿ ವಿಧೇಯರಾಗಿರ್ತೇವೆ. ಪಕ್ಷ ಪರವಾಗಿ ಕೆಲಸ ಮಾಡುತ್ತೇವೆ, ಪಕ್ಷದ ತೀರ್ಮಾನವೇ ಅಂತಿಮ ತೀರ್ಮಾನ, ಪಕ್ಷದ ತೀರ್ಮಾನಕ್ಕೆ ವಿಧೇಯರಾಗಿರ್ತೇವೆ ಎಂದು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.

ಇತ್ತೀಚೆಗೆ ಜೆಡಿಎಸ್ ನ ಮುಖಂಡರು ಸಾಮೂಹಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ಅದೂ ಅಲ್ಲದೇ ಸಿಎಂ ಇಬ್ರಾಹಿಂ ಕೂಡ ಪಕ್ಷ ಬಿಡುವ ಸೂಚನೆ ಇದೆ.ಸದ್ಯದಲ್ಲೇ ಬೆಂಬಲಿಗರ ಸಭೆ ಕರೆದಿರುವ ಅವರು ಯಾವ ಪಕ್ಷ ಸೇರಬೇಕು,ಅಥವಾ ಪಕ್ಷದಲ್ಲೇ ಉಳಿಯಬೇಕೆ ಎಂಬ ತೀರ್ಮಾನ ಕೈಗೊಳ್ಳಲಿದ್ದಾರೆ.

ಇನ್ನು ಅಲ್ಪಸಂಖ್ಯಾತ ನಾಯಕರು (Minority Leaders) ಸೇರಿದಂತೆ ಕೆಲ ಮಾಜಿ ಶಾಸಕರು ಜೆಡಿಎಸ್​ (JDS) ತೊರೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವ ವೇಳೆ ಮಾಜಿ ಸಚಿವ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು (Former Minister GT Devegowda) ಹೊಸ ವಿಷಯವನ್ನು ಮುನ್ನಲೆಗೆ ತಂದಿದ್ದಾರೆ. ರಾಜೀನಾಮೆ ಕೊಟ್ಟ ಮುಸ್ಲಿಂ ಮುಖಂಡರು ನಮ್ಮ ಮೂಲ ಕಾರ್ಯಕರ್ತರಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಜೆಡಿಎಸ್ ಕಾರ್ಯಕರ್ತರನ್ನು ಮೂಲ ಮತ್ತು ವಲಸಿಗ ಎಂದು ವಿಂಗಡಿಸಿದ್ರಾ ಎಂಬ ಚರ್ಚೆಗೆ ನಾಂದಿ ಹಾಕಿದ್ದಾರೆ. ಇಂದು ಪಕ್ಷ ತೊರೆಯುತ್ತಿರುವ ನಾಯಕರು ಇತ್ತೀಚೆಗೆ ಕಾಂಗ್ರೆಸ್ (Congress) ತೊರೆದು ಜೆಡಿಎಸ್ ಸೇರಿದ್ದರು. ಈಗ ಮರಳಿ ಕಾಂಗ್ರೆಸ್‌ಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ.

Leave A Reply

Your email address will not be published.