Bengaluru Kambala 2023:ಬೆಂಗಳೂರು ಕಂಬಳದ ಕೋಣಗಳಿಗೆ ಮಂಗಳೂರಿಂದಲೇ ಕುಡಿವ ನೀರು ಪೂರೈಕೆ ?! ಅರೆ.. ಯಾಕೆ ಹೀಗೆ?!
Karnataka news drinking water for Bengaluru kambala buffalo comes from Mangalore latest news
Bengaluru Kambala 2023: ಪ್ರಪ್ರಥಮ ಬಾರಿಗೆ ತುಳುನಾಡಿನ ಗಡಿಯನ್ನು ದಾಟಿ ಬೆಂಗಳೂರಿನಲ್ಲಿ(Bengaluru Kambala)ಕರಾವಳಿಯ ಸಾಂಸ್ಕೃತಿಕ ಕ್ರೀಡೆ ಕಂಬಳ ನಡೆಯಲಿದ್ದು, ನವೆಂಬರ್ ತಿಂಗಳ 25 ಮತ್ತು 26ನೇ ತಾರೀಕಿನಂದು ಬೆಂಗಳೂರಿನಲ್ಲಿ ಕಂಬಳ ನಡೆಯಲಿದೆ.
ಕಂಬಳದ ನೇತೃತ್ವ ವಹಿಸಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಇಂದು ಕೂಡ ಸಭೆ ಆಯೋಜನೆಯಾಗಿದೆ. ಈ ಕಂಬಳಕ್ಕೆ ಸುಮಾರು 9 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ. ನವೆಂಬರ್ 25 ಮತ್ತು 26 ರಂದು ರಾಜ್ಯ ರಾಜಧಾನಿ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನಲ್ಲಿ ಮೊಟ್ಟ ಮೊದಲ ಬಾರಿಗೆ ಕಂಬಳ (Kambala) ಆಯೋಜನೆ ಮಾಡಲಾಗುತ್ತಿದ್ದು, ಈ ಕಂಬಳಕ್ಕೆ ನಟಿ ಐಶ್ವರ್ಯ ರೈ (Aishwarya Rai) ಹಾಗೂ ನಟ ರಜಿನಿಕಾಂತ್ (Rajinikanth) ಅವರನ್ನು ಕರೆಸಲು ಸಮಿತಿ ಯೋಜನೆ ಹಾಕಿಕೊಂಡಿದೆ.ನಟಿ ಅನುಷ್ಕಾ ಶೆಟ್ಟಿ ಅವರು ಕಂಬಳಕ್ಕೆ ಬರುವುದು ಬಹುತೇಕ ಖಚಿತ ಎನ್ನಲಾಗಿದ್ದು, ಈ ಅದ್ದೂರಿ ಕಾರ್ಯಕ್ರಮಕ್ಕೆ ಬಾಲಿವುಡ್, ಸ್ಯಾಂಡಲ್ ವುಡ್ ಸೇರಿ ಎಲ್ಲಾ ಚಿತ್ರರಂಗದ ಗಣ್ಯರಿಗೆ ಆಹ್ವಾನ ನೀಡಲಾಗಿದೆ ಎಂದು ಟಿವಿ9ಗೆ ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ರೈ (Ashok Rai) ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಕಂಬಳಕ್ಕೆ ಪೂರ್ವಭಾವಿ ಸಿದ್ಧತೆಗಳು ನಡೆದಿದ್ದು, ಕಂಬಳ ಯಶಸ್ವಿಯಾಗಿ ನಡೆಯಲು ಸಭೆ ಮೇಲೆ ಸಭೆ ನಡೆಯುತ್ತಲೇ ಇದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ 100 ಜೋಡಿಗೂ ಅಧಿಕ ಕೋಣಗಳು ಬೆಂಗಳೂರಿಗೆ ಬರಲಿದೆ. ಮಂಗಳೂರಿನಿಂದ ಮೆರವಣಿಗೆ ಮೂಲಕ ಕೋಣಗಳನ್ನು ಬೀಳ್ಕೊಡಲಾಗುವ ಕುರಿತು ಶಾಸಕ ಅಶೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ಅದರಲ್ಲೂ ಕರಾವಳಿ ಭಾಗ ಮಾತ್ರವಲ್ಲದೇ ಊರು ಬಿಟ್ಟು ಮತ್ತೊಂದು ಊರಿಗೆ ಕಂಬಳದ ಕೋಣಗಳು ಬರಲಿರುವ ಹಿನ್ನೆಲೆ ಕೋಣಗಳ ಬಗ್ಗೆ ಮಾಲೀಕರು ವಿಶೇಷ ಮುತುವರ್ಜಿಯನ್ನು ವಹಿಸಿದ್ದು, ಕಂಬಳದ ಕೋಣಗಳಿಗೆ ಕುಡಿಯಲು ನೀರು ಸಹ ಮಂಗಳೂರಿನಿಂದಲೇ ಬೇಕೆಂದು ಡಿಮ್ಯಾಂಡ್ ಮಾಡಿದ್ದಾರೆ.
ಕಂಬಳ ಪೂರ್ವಭಾವಿ ಸಭೆಯಲ್ಲಿ ಕೋಣಗಳ ಮಾಲೀಕರು ಕೋಣಗಳಿಗೆ ಕುಡಿಯುವ ನೀರಿನ ಬೇಡಿಕೆ ಇಟ್ಟಿರುವ ಹಿನ್ನೆಲೆ ಕೋಣಗಳಿಗೆ ಕುಡಿಯಲು ಮಿನರಲ್ ವಾಟರ್ ಕೊಡಿಸುವುದಾಗಿ ಸಮಿತಿ ಹೇಳಿದ್ದು, ಆದರೆ, ಇದಕ್ಕೆ ಸುತಾರಾಂ ಒಪ್ಪದ ಮಾಲೀಕರು ಕರಾವಳಿಯ ನೀರನ್ನೇ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಟ್ಯಾಂಕರ್ಗಳ ಮೂಲಕ ಕರಾವಳಿಯ ನೀರನ್ನು ಬೆಂಗಳೂರಿಗೆ ತರಲು ಚಿಂತನೆ ನಡೆದಿದೆ. ಈ ಕುರಿತು ಕಂಬಳದ ಆಯೋಜಕ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಕಂಬಳದ ಕೋಣಗಳಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಊರಿನಿಂದಲೇ 8 ಟ್ಯಾಂಕರ್‌ನಷ್ಟು ನೀರು ತರಲು ತೀರ್ಮಾನ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅವುಗಳಿಗೆ ಬೇಕಾದ ಆಹಾರವನ್ನೂ ಕರಾವಳಿಯಿಂದಲೇ ತರಿಸಲಾಗುತ್ತದೆ ಎಂದಿದ್ದಾರೆ. ಇದರ ಜೊತೆಗೆ ಪಶು ಆಂಬುಲೆನ್ಸ್, ಪಶು ವೈದ್ಯಾಧಿಕಾರಿಗಳ ಜೊತೆ ಲಾರಿಗಳ ಮೂಲಕ ಕೋಣಗಳನ್ನು ಬೆಂಗಳೂರಿಗೆ ಕರೆತರಲು ಯೋಜನೆ ಹಾಕಿಕೊಳ್ಳಲಾಗಿದೆ.