Home latest Murder Case: ಕೇವಲ 30 ರೂ.ಗೆ ಶುರುವಾದ ಮೂವರ ಮಧ್ಯೆ ಮಾರಾಮಾರಿ- ಕೊನೆಗೆ 17 ವರ್ಷದ...

Murder Case: ಕೇವಲ 30 ರೂ.ಗೆ ಶುರುವಾದ ಮೂವರ ಮಧ್ಯೆ ಮಾರಾಮಾರಿ- ಕೊನೆಗೆ 17 ವರ್ಷದ ಹುಡುಗನ ಅಂತ್ಯದೊಂದಿಗೆ ಜಗಳವೂ ಅಂತ್ಯ !

Uttar Pradesh

Hindu neighbor gifts plot of land

Hindu neighbour gifts land to Muslim journalist

Uttar Pradesh : ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ.ಇದೀಗ, ಕ್ಷುಲಕ ಕಾರಣಕ್ಕೆ ವಿದ್ಯಾರ್ಥಿಯನ್ನು ಕೊಲೆ(Murder Case)ಮಾಡಿರುವ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ (Uttar Pradesh)ಬಾಗ್ಪತ್ ಗ್ರಾಮದಲ್ಲಿ 30 ರೂಪಾಯಿಗಾಗಿ ಮೂವರ ನಡುವೆ ಜಗಳ ನಡೆದು17 ವರ್ಷದ ವಿದ್ಯಾರ್ಥಿಯ ಹತ್ಯೆಯ ಮೂಲಕ ಕೊನೆಗೊಂಡಿದೆ. ಕೆಎಚ್ಆರ್ ಇಂಟರ್ ಕಾಲೇಜಿನ ವಿದ್ಯಾರ್ಥಿ (Student)ಹೃತಿಕ್ ಮೃತ ದುರ್ದೈವಿ ಎನ್ನಲಾಗಿದೆ. ಬರೌತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಆರೋಪಿಗಳು 11 ನೇ ತರಗತಿ ವಿದ್ಯಾರ್ಥಿಯ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 30 ರೂಪಾಯಿ ವ್ಯವಹಾರದ ಪರಿಣಾಮ ಹೃತ್ತಿಕ್ ಅದೇ ಗ್ರಾಮದ ಮೂವರೊಂದಿಗೆ ಜಗಳವಾಡಿದ್ದು, ಆರೋಪಿಗಳು ಕತ್ತು ಹಿಸುಕಿ ಸಾಯಿಸಿದ್ದಾರೆ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳು ಹೃತಿಕ್ ಗೆ ಪರಿಚಿತರು ಎಂದು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

30 ರೂಪಾಯಿಗೆ ಜಗಳ ಉಂಟಾಗಿ ಕೊಲೆಯಾಗಿರುವುದು ಪ್ರಾಥಮಿಕ ತನಿಖೆಯ ಮೂಲಕ ತಿಳಿದಿರುವ ಬಗ್ಗೆ ಬರೌತ್ ಪೊಲೀಸ್ ಠಾಣಾಧಿಕಾರಿ ಪಿಟಿಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಸದ್ಯ,ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Mangalore: ಮಂಗಳೂರಿನ ಸಂತ ಅಲೋಶಿಯಸ್‌ ವಿದ್ಯಾರ್ಥಿ ರೋನಕ್‌ ಡೇಸಾ ಫೋಟೋಗ್ರಫಿಗೆ ಮನಸೋತ ಭಾರತೀಯ ರೈಲ್ವೇ