Atal Pension Yojana: ಕೇಂದ್ರದಿಂದ ಬಂತೊಂದು ಭರ್ಜರಿ ಸುದ್ದಿ | ಈ ಯೋಜನೆಯಿಂದ ಗಂಡ ಹೆಂಡತಿಯರಿಗೆ ಸಿಗುತ್ತೆ ಬರೋಬ್ಬರಿ 10, 000
Central government scheme news husband and wife get 10000 per month in atal pension yojana
Atal Pension Yojana: ಕೇಂದ್ರ ಸರ್ಕಾರವು(Central Government)ದೇಶದ ಬಡ ಮತ್ತು ಮಧ್ಯಮ ವರ್ಗದ ಏಳಿಗೆಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ಪರಿಚಯಿಸಿ ನೆರವಾಗುತ್ತಿದೆ. ಕಾರ್ಮಿಕರಿಗೆ ಆರ್ಥಿಕ ಭದ್ರತೆಯ ಸೇವೆಗಾಗಿ ಮಾಸಿಕ ಪಿಂಚಣಿ ವ್ಯವಸ್ಥೆ ಮಾಡಲಾಗಿದೆ.
ಕೇಂದ್ರ ಸರ್ಕಾರವು ನಾಗರಿಕರಿಗೆ ಒದಗಿಸುವ ಪಿಂಚಣಿ ಯೋಜನೆಗಳಲ್ಲಿ ಅಟಲ್ ಪಿಂಚಣಿ ಯೋಜನೆ (Atal Pension Yojana)ಕೂಡ ಒಂದಾಗಿದೆ. ನಿಮ್ಮ ಹತ್ತಿರದ ಯಾವುದೇ ಸಾರ್ವಜನಿಕ ವಲಯದ ಬ್ಯಾಂಕಿಗೆ ಭೇಟಿ ನೀಡಿ ಆಧಾರ್ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಆನಂತರ, ಅರ್ಜಿಯನ್ನು ಪೂರ್ಣಗೊಳಿಸುವ ಮೂಲಕ ನೀವು ಅಟಲ್ ಪಿಂಚಣಿ ಯೋಜನೆ ಖಾತೆಯನ್ನು ತೆರೆಯಬಹುದಾಗಿದೆ. 5.2 ಕೋಟಿಗೂ ಹೆಚ್ಚು ಜನರು ಈ ಯೋಜನೆಗೆ ಸೇರ್ಪಡೆಗೊಂಡಿರುವುದು ಗಮನಾರ್ಹ ಸಂಗತಿಯಾಗಿದೆ.ಅಟಲ್ ಪಿಂಚಣಿ ಯೋಜನೆಗೆ ಸೇರಲು ಕನಿಷ್ಠ ವಯಸ್ಸು 18 ವರ್ಷವಾಗಿದ್ದು, ಗರಿಷ್ಠ ವಯಸ್ಸು 40 ವರ್ಷವಾಗಿದೆ.ಒಬ್ಬರು ತಿಂಗಳಿಗೆ ರೂ.210 ರಿಂದ ರೂ.1454 ರ ನಡುವೆ ವಯಸ್ಸಿನ ಆಧಾರದ ಮೇಲೆ ಠೇವಣಿ ಇಟ್ಟರೆ 60 ವರ್ಷ ವಯಸ್ಸಿನಿಂದ ಪ್ರತಿ ತಿಂಗಳು ರೂ.5,000 ಪಿಂಚಣಿ ಪಡೆಯಬಹುದು.
ಗಂಡ ಮತ್ತು ಹೆಂಡತಿ ಇಬ್ಬರೂ ಈ ಯೋಜನೆಗೆ ಸೇರುವುದಾದರೆ, ನೀವು ತಿಂಗಳಿಗೆ 5,000 ರೂ.ಗಳ ಪ್ರೀಮಿಯಂ ಪಾವತಿ ಮಾಡಬಹುದು. ಈ ಮೂಲಕ ನೀವು 60 ವರ್ಷ ವಯಸ್ಸಾದ ನಂತರ,ತಿಂಗಳಿಗೆ 1,000 ರಿಂದ 5,000 ರೂ.ಗಳ ಗ್ಯಾರಂಟಿ ಪಡೆಯಬಹುದು. ಆನಂತರದ ವಯಸ್ಸಿನಲ್ಲಿ ತಲಾ 5,000 ರೂ.ಗಳ ದರದಲ್ಲಿ 10,000 ರೂ.ಗಳನ್ನು ಪಡೆಯಲು ಅವಕಾಶವಿದೆ.ಅಟಲ್ ಪಿಂಚಣಿ ಯೋಜನೆಗೆ ನೀವು 18 ನೇ ವಯಸ್ಸಿನಲ್ಲಿ ಸೇರಿಕೊಂಡರೆ, ನೀವು ರೂ. 42 ಪಾವತಿ ಮಾಡಬೇಕಾಗುತ್ತದೆ. ವಯಸ್ಸಾದಂತೆ ಪ್ರೀಮಿಯಂ ಕೂಡ ಏರಿಕೆಯಾಗುತ್ತದೆ. ನೀವು 40 ನೇ ವಯಸ್ಸಿಗೆ ಸೇರ್ಪಡೆಯಾದರೆ, ನೀವು ರೂ. 210 ಪಾವತಿ ಮಾಡಬೇಕಾಗುತ್ತದೆ. ಬ್ಯಾಂಕ್ ಖಾತೆಯಿಂದ ಈ ಮೊತ್ತ ಸ್ವಯಂ-ಡೆಬಿಟ್ ಮೂಲಕ ಮೊತ್ತವನ್ನು ಪಾವತಿಸುವ ಆಯ್ಕೆ ಕೂಡ ಇದೆ. ಇದಲ್ಲದೇ, ಮೂರು, ಆರು, ವರ್ಷಕ್ಕೊಮ್ಮೆ ಪ್ರೀಮಿಯಂ ಪಾವತಿ ಮಾಡಬಹುದು. ಆದ್ರೆ, ನೀವು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿದ ಮೊಬೈಲ್ ಸಂಖ್ಯೆ ಚಾಲ್ತಿ ಯಲ್ಲಿರಬೇಕು ಎಂಬುದನ್ನು ಗಮನಿಸಬೇಕು.
ಇದನ್ನೂ ಓದಿ: Actress Nayanthara:ಕೇವಲ 50 ಸೆಕೆಂಡ್ ಗೆ 5 ಕೋಟಿ ಈ ನಟಿಯ ರೇಟ್ – ಈಕೆಯ ಸಿರಿವಂತಿಕೆ ಹೇಳಿದ್ರೆ ನೀವೇ ಸುಸ್ತು ಹೋಡೀತಿರಾ !!