Home latest Dharwad Shocking News:ದಹನಕ್ಕಾಗಿ ಶವ ಹೊತ್ತೊಯ್ಯುತ್ತಿದ್ದ ಜನ- ಮಾರ್ಗ ಮಧ್ಯೆಯೇ ಧಿಗಿಲ್ಲನೆ ಎದ್ದು ಕುಳಿತಿತು ಹೆಣ...

Dharwad Shocking News:ದಹನಕ್ಕಾಗಿ ಶವ ಹೊತ್ತೊಯ್ಯುತ್ತಿದ್ದ ಜನ- ಮಾರ್ಗ ಮಧ್ಯೆಯೇ ಧಿಗಿಲ್ಲನೆ ಎದ್ದು ಕುಳಿತಿತು ಹೆಣ !!

Dharwad

Hindu neighbor gifts plot of land

Hindu neighbour gifts land to Muslim journalist

Dharwad News: ಪವಾಡ ಅಂದರೆ ಇದೇ ಇರಬೇಕೇನೋ!! ಸಾವಿನ ದವಡೆಗೆ ಸಿಲುಕಿ ಪವಾಡ ಸದೃಢ ರೀತಿಯಲ್ಲಿ ಧಾರವಾಡ (Dharwad) ಜಿಲ್ಲೆಯ ನವಲಗುಂದ ತಾಲ್ಲೂಕಿನ ಬಸಾಪುರದಲ್ಲಿ ಇತ್ತೀಚೆಗೆ ಮಗುವೊಂದು(Boy from death bed)ಪಾರಾದ ಘಟನೆ ವರದಿಯಾಗಿತ್ತು. ಇದೀಗ, ಸಾವನ್ನೇ ಗೆದ್ದು ಬಂದ ಮತ್ತೊಂದು ಪ್ರಕರಣ ವರದಿಯಾಗಿದೆ.

ನವಲಗುಂದ ಸಿದ್ದಾಪುರ ಓಣಿ ನಿವಾಸಿ ಶಿವಪ್ಪ ತೋಟದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರಂತೆ. ಹೀಗಾಗಿ, ಶಿವಪ್ಪ ಅವರನ್ನು ಶನಿವಾರ ಚಿಕಿತ್ಸೆಗಾಗಿ ಅವರ ಕುಟುಂಬದವರು ಹುಬ್ಬಳ್ಳಿ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿತ್ತು. ಎರಡು ದಿನಗಳ ಕಾಲ ಚಿಕಿತ್ಸೆ ನೀಡಿ ಸೋಮವಾರ ರಾತ್ರಿ ವೇಳೆಗೆ ಶಿವಪ್ಪ ಅವರು ಮೃತಪಟ್ಟಿರುವುದನ್ನು ಘೋಷಿಸಿ ದೇಹವನ್ನು ಮನೆಗೆ ಕರೆದೊಯ್ಯಲು ತಿಳಿಸಿದ್ದಾರೆ.

ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಮತ್ತೊಂದು ಪವಾಡ ಸದೃಶ ಪ್ರಕರಣ ವರದಿಯಾಗಿದೆ.ನವಲಗುಂದ ಪಟ್ಟಣದ ಶಿವಪ್ಪ ಮಲ್ಲಪ್ಪ ತೋಟದ (56) ಎಂಬಾತ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದರೂ ಕೂಡ ಸಾವನ್ನೇ ಗೆದ್ದು ಪವಾಡ ಸದೃಶರೀತಿಯಲ್ಲಿ ಬದುಕುಳಿದಿದ್ದಾರೆವೈದ್ಯರ ಸಲಹೆಯಂತೆ ಶಿವಪ್ಪ ಕುಟುಂಬದವರು ದೇಹವನ್ನು ತಮ್ಮೂರಿಗೆ ಕರೆದೊಯ್ಯಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ವಾಹನವೊಂದರಲ್ಲಿ ದೇಹವನ್ನು ತೆಗೆದುಕೊಂಡು ನವಲಗುಂದ ಪಟ್ಟಣದ ಒಳ ಬರುತ್ತಿದ್ದಂತೆ ದೇವರ ಕೃಪೆ ಎಂಬಂತೆ ಶಿವಪ್ಪ ಮತ್ತೆ ಉಸಿರಾಡಲು ಆರಂಭಿಸಿದ್ದಾರೆ. ಮನೆಯ ಹಿರಿಯ ಜೀವ ಅಗಲಿದ ಶೋಕದಲ್ಲಿ ಮುಳುಗಿದ್ದ ಕುಟುಂಬಕ್ಕೆ ಶಿವಪ್ಪನಿಗೆ ಇದಕ್ಕಿದ್ದಂತೆ ಉಸಿರು ಬಂದಿದ್ದು ಅಚ್ಚರಿಯ ಜೊತೆಗೆ ಸಂತಸ ಮೂಡಿಸಿದೆ.

ಶಿವಪ್ಪ ಬದುಕಿರುವ ವಿಚಾರ ತಿಳಿಯುತ್ತಿದ್ದಂತೆ ಕುಟುಂಬದವರು ತಕ್ಷಣವೇ ಚಿಕಿತ್ಸೆ ನೀಡಲು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಶಿವಪ್ಪ ಆರೋಗ್ಯ ಪರೀಕ್ಷಿಸಿದ ವೈದ್ಯರು ‘ಶಿವಪ್ಪ ಬದುಕಿದ್ದಾರೆ. ಆದರೆ ಪಲ್ಸ್ ರೇಟ್ ಕಡಿಮೆಯಿದೆ. ಹೀಗಾಗಿ, ಮನೆಗೆ ಕರೆದುಕೊಂಡು ಹೋಗಿ’ ಎಂದು ವೈದ್ಯರು ಶಿವಪ್ಪ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಆದರೆ, ಶಿವಪ್ಪ ಅವರ ಸೋದರ ಶಂಕ್ರಪ್ಪ ತೋಟದ ಅವರು ಮತ್ತೊಂದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ನೀಡಿದ್ದಾರೆ. ಚಿಕಿತ್ಸೆಗೆ ಸ್ಪಂದಿಸಿರುವ ಶಿವಪ್ಪನವರು ಮಂಗಳವಾರ ಮುಂಜಾನೆ ವೇಳೆಗೆ ಕಣ್ತೆರೆದು ನೋಡಿದ್ದಾರೆ. ಸಾವನ್ನು ಗೆದ್ದು, ಚಿಕಿತ್ಸೆಗೆ ಸ್ಪಂದಿಸಿರುವ ಶಿವಪ್ಪನ ಮನೆಯಲ್ಲಿಗ ಸಂತೋಷ ಇಮ್ಮಡಿಯಾಗಿದೆ.

ಇದನ್ನೂ ಓದಿ: Maneka Gandhi: ದನ ಕಡಿಯೋರಿಗೆ ಗೋವುಗಳನ್ನು ‘ಇಸ್ಕಾನ್’ ಅವರು ಮಾರಿದಷ್ಟು ಬೇರಾರು ಮಾರಿಲ್ಲ – ಸ್ಫೋಟಕ ಹೇಳಿಕೆ ನೀಡಿದ ಬಿಜೆಪಿ ಸಂಸದೆ ಮೇನಕಾ ಗಾಂಧಿ