Maneka Gandhi: ದನ ಕಡಿಯೋರಿಗೆ ಗೋವುಗಳನ್ನು ‘ಇಸ್ಕಾನ್’ ಅವರು ಮಾರಿದಷ್ಟು ಬೇರಾರು ಮಾರಿಲ್ಲ – ಸ್ಫೋಟಕ ಹೇಳಿಕೆ ನೀಡಿದ ಬಿಜೆಪಿ ಸಂಸದೆ ಮೇನಕಾ ಗಾಂಧಿ

Maneka Gandhi accuses Iskcon of selling cows to butchers

 

Maneka Gandhi: ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಮೇನಕಾ ಗಾಂಧಿ( Maneka Gandhi)ಅವರು ಇಸ್ಕಾನ್ (Iskon)ವಿರುದ್ದ ಆರೋಪಿಸಿ ನೀಡಿರುವ ಹೇಳಿಕೆಯೊಂದು ಭಾರೀ ಸಂಚಲನ ಮೂಡಿಸಿ ಚರ್ಚೆಗೆ ಕಾರಣವಾಗಿದೆ.

ಮೇನಕಾ ಗಾಂಧಿ ಅವರು ಇಸ್ಕಾನ್ ಮೇಲೆ ಗಂಭೀರ ಆರೋಪ ಮಾಡಿರುವ ಹೇಳಿಕೆಯ ವೀಡಿಯೋ ವೈರಲ್ ಆಗಿದೆ. ಇದರಲ್ಲಿ ಮೇನಕಾ ಗಾಂಧಿ, “ಒಂದು ನಿಮಿಷ. ನಾನು ನಿಮಗೆ ಹೇಳಿಬಿಡುತ್ತೇನೆ. ಈ ದೇಶದಲ್ಲಿ ಅತೀ ದೊಡ್ಡ ಮೋಸಗಾರರು ಯಾರಾದರೂ ಇದ್ದರೆ ಅದು ಇಸ್ಕಾನ್. ಇವರು ಗೋ ಶಾಲೆಗಳನ್ನು ನಡೆಸಲು ಸರ್ಕಾರದಿಂದ ಬೇಕಾದ ಸೌಲಭ್ಯ, ದೊಡ್ಡ ದೊಡ್ಡ ಜಮೀನುಗಳು, ಗೋಮಾಳಗಳು ಎಲ್ಲ ವ್ಯವಸ್ಥೆ ಸಿಗುತ್ತವೆ. ಇತ್ತೀಚೆಗಷ್ಟೇ ನಾನು ಇಸ್ಕಾನ್ ನ ಅನಂತಪುರದ ಗೋ ಶಾಲೆಗೆ ಭೇಟಿ ನೀಡಿದ್ದೆ. ಅಲ್ಲಿ ಒಂದೇ ಒಂದು ಹಸುವೂ ಇರಲಿಲ್ಲ. ಸಂಪೂರ್ಣ ಹೈನುಗಾರಿಕೆ ಯೋಗ್ಯವಾದ ಹಸುವಾಗಲಿ ಇಲ್ಲವೇ ಕರುಗಳಾಲಿ ಇರಲಿಲ್ಲ. ಎಲ್ಲಾ ಕರುಗಳು ಮಾರಾಟವಾಗಿದೆ ಎಂಬುದೇ ಇದರ ಸಾರಾಂಶ.ಬೀದಿ ಬೀದಿಗಳಲ್ಲಿ ಹರೇ ರಾಮ್- ಹರೇ ಕೃಷ್ಣ ಎಂದು ಹೇಳಿಕೊಂಡು ಅಡ್ಡಾಡುವ ಇವರು ಹಾಲಿನಲ್ಲೇ ಅವರ ಜೀವನವಿದೆ ಎಂಬಂತೇ ಹೇಳಿಕೊಳ್ಳುತ್ತಾರೆ. ಆದರೆ, ಇಸ್ಕಾನ್ ಅವರು ಮಾಂಸ ಮಾಡುವವರಿಗೆ ಮಾರಿದಷ್ಟು ಗೋವುಗಳನ್ನು ಖಂಡಿತವಾಗಿಯೂ ಬೇರೆ ಯಾರೂ ಕೂಡ ಮಾರಿರಲು ಸಾಧ್ಯವೇ ಇಲ್ಲವೇನೋ?!ಇವರೇ ಹೀಗೆ ಮಾಡಿರುವಾಗ ಬೇರೆಯವರ ಕಥೆಯೇನು? “ಎಂದು ಬಿಜೆಪಿ ಸಂಸದೆ ಮೇನಕಾ ಹೇಳಿರುವ ವೀಡಿಯೋ ವೈರಲ್ ಆಗಿದೆ. ಮೇನಕಾ ಗಾಂಧಿ ಎಲ್ಲಿ ಯಾವಾಗ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂಬುದು ತಿಳಿದಿಲ್ಲ.

ಪ್ರಚಾರ ಉಸ್ತುವಾರಿಯಾಗಿರುವ ಪ್ರಶಾಂತ್ ಕನೋಜಿಯಾ ಅವರು ತಮ್ಮ ಖಾತೆಯಲ್ಲಿ ಮೇನಕಾ ಗಾಂಧಿ ಇಸ್ಕಾನ್ ಬಗ್ಗೆ ಮಾಹಿತಿ ನೀಡಿರುವ ವೀಡಿಯೋ ಶೇರ್ ಮಾಡಿದ್ದಾರೆ. ಇದೇ ವೇಳೆ, ತಮ್ಮ ಪೋಸ್ಟ್ ನಲ್ಲಿ, ” ಭಾರತದಲ್ಲಿ ಅತಿ ಹೆಚ್ಚು ಬೋಗಸ್ ಮತ್ತು ಮೋಸ ಮಾಡುವ ಸಂಸ್ಥೆ ISKON ಎಂದು ನಾನು ಹಲವು ವರ್ಷಗಳಿಂದ ಹೇಳಿಕೊಂಡು ಬರುತ್ತಿದ್ದೆ. ಸದ್ಯ, ಈ ಮಾತನ್ನು ಬಿಜೆಪಿ ಹಿರಿಯ ನಾಯಕಿ ಮೇನಕಾ ಗಾಂಧಿ ಕೂಡ ಒಪ್ಪಿಕೊಂಡಿದ್ದಾರೆ ಎಂದು ಬರೆದಿದ್ದಾರೆ.

ಬಿಜೆಪಿ ಸಂಸದೆ ಮೇನಕಾ ಗಾಂಧಿ ಧಾರ್ಮಿಕ ಸಂಸ್ಥೆಯಾದ ಇಸ್ಕಾನ್ ವಿರುದ್ದ ಆರೋಪ ಮಾಡಿರುವ ವಿಚಾರಕ್ಕೆ ಇಸ್ಕಾನ್ ಪ್ರತಿಕ್ರಿಯೆ ನೀಡಿದೆ.ಇಸ್ಕಾನ್ ಸಂಸದೆ ಮಾಡಿರುವ ಆರೋಪಗಳೆಲ್ಲವೂ ಸುಳ್ಳು ನಾವು ಯಾವ ಕಟುಕರಿಗೂ ಗೋವುಗಳನ್ನು ಮಾರಾಟ ಮಾಡುವುದಿಲ್ಲ. ನಾವು ಗೋಮಾಂಸವೇ ಪ್ರಧಾನ ಆಹಾರವಾಗಿರುವ ವಿಶ್ವದ ಹಲವು ಭಾಗಗಳಲ್ಲಿ ಇಸ್ಕಾನ್ ಗೋಸಂರಕ್ಷಣೆಯನ್ನು ಮಾಡುತ್ತಿದೆ ಎಂದು ಇಸ್ಕಾನ್ ರಾಷ್ಟ್ರೀಯ ವಕ್ತಾರ ಯುಧಿಸ್ತಿರ್ ಗೋವಿಂದ ದಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಇಸ್ಕಾನ್ ಗೋಶಾಲೆಯಲ್ಲಿ ಹಲವು ಹಸುಗಳಿದ್ದು ಅವುಗಳಲ್ಲಿ ಕೆಲವೊಂದು ಹಸುಗಳು ವಧೆಗೆ ಸಾಗಿಸುತ್ತಿದ್ದ ಹಸುಗಳು ಅವುಗಳನ್ನು ರಕ್ಷಣೆ ಮಾಡಿ ನಮ್ಮ ಗೋಶಾಲೆಯಲ್ಲಿ ಚಿಕಿತ್ಸೆ ನೀಡಿ ರಕ್ಷಣೆ ಮಾಡುತ್ತಿದ್ದೇವೆ. ಹೀಗಿರುವಾಗ ನಾವು ಕಟುಕರಿಗೆ ಪಶುಗಳನ್ನು ಮಾರಾಟ ಮಾಡುವ ವಿಚಾರವೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Snake Catcher:ಬರಿ ಕೈಯಲ್ಲಿ ಹಾವು ಹಿಡಿದ ಯುವತಿ- ಯಪ್ಪಾ.. ವಿಡಿಯೋ ನೋಡಿದ್ರೆ ನೀವೇ ಶಾಕ್ ಆಗ್ತೀರಾ

Leave A Reply

Your email address will not be published.