Transportation department : ಬೆಳ್ಳಂಬೆಳಗ್ಗೆಯೇ ಸಾರಿಗೆ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ – ಈ ನೌಕರರ ಭತ್ಯೆಯಲ್ಲಿ ಬರೋಬ್ಬರಿ 10 ಪಟ್ಟು ಹೆಚ್ಚಳ !!
Karnataka govt news monthly allowance for accident free driving for transport employees increased
Transport employees : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ಬಳಿಕ ಸರ್ಕಾರಿ ಸಾರಿಗೆ ನೌಕರರು ಬಹಳ ಕಷ್ಟದಲ್ಲಿದ್ದಾರೆ. ಸರಿಯಾದ ಸಮಯಕ್ಕೆ ವೇತನ ಜಾರಿಯಾಗದೆ ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಈ ನಡುವೆ ಸಾರಿಗೆ ನೌಕರರಿಗೆ ಇಲಾಖೆಯು (Transportation department ) ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.
ಹೌದು, ರಾಜ್ಯ ಸಾರಿಗೆ ನೌಕರರಿಗೆ (Transport employees) ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಿಹಿಸುದ್ದಿ ನೀಡಿದ್ದು, ಅಪಘಾತ ರಹಿತ ಚಾಲನೆಗಾಗಿ ನೀಡುವ ಮಾಸಿಕ ಭತ್ಯೆಯನ್ನು 10 ಪಟ್ಟು ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವಂತಹ ಸಚಿವರು,ಚಿನ್ನದ ಪದಕ ವಿಜೇತರಿಗೆ ಮಾಸಿಕ ಭತ್ಯೆ ಪರಿಷ್ಕರಣೆ ಮಾಡಲಾಗಿದೆ ಎಂದಿದ್ದಾರೆ.
ಯಾರ್ಯಾರ ಭತ್ಯೆ ಹೆಚ್ಚಾಗಲಿದೆ?
• ಚಿನ್ನದ ಪದಕ ವಿಜೇತರಿಗೆ ಮಾಸಿಕ ಭತ್ಯೆ ಪರಿಷ್ಕರಣೆ ಮಾಡಲಾಗಿದ್ದು ಐದು ವರ್ಷಗಳ ಅಪಘಾತ ರಹಿತ ಚಾಲನೆಗಾಗಿ ಬೆಳ್ಳಿ ಪದಕ ವಿಜೇತರಿಗೆ ನೀಡುವ ಮಾಸಿಕ ಭತ್ಯೆ ರೂ 50ನ್ನು ಹತ್ತು ಪಟ್ಟು ಹೆಚ್ಚಿಸಿ ರು.500 ಮಾಸಿಕ ಭತ್ಯೆ ಪಾವತಿಗೆ ಅವಕಾಶ ಮಾಡಲಾಗುವುದು.
• 15 ವರ್ಷಗಳ ಅಪಘಾತ ರಹಿತ ಚಾಲನೆಗಾಗಿ ಮುಖ್ಯ ಮಂತ್ರಿಗಳ ಬಂಗಾರದ ಪದಕ ವಿಜೇತರಿಗೆ ಪ್ರಸ್ತುತ ಇರುವ ರು. 100 ಮಾಸಿಕ ಭತ್ಯೆಯನ್ನು ಹತ್ತು ಪಟ್ಟು ಹೆಚ್ಚಿಸಿ ರು. 1000ಕ್ಕೆ ಹೆಚ್ಚಿಸಲಾಗುವುದು.
• ಪ್ರಸ್ತುತ ಬೆಳ್ಳಿ ಪದಕ ಮತ್ತು ಚಿನ್ನದ ಪದಕ ವಿಜೇತರಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲ ಚಾಲಕ ಹಾಗೂ ಚಾಲಕ ಜೊತೆಗೆ ನಿರ್ವಾಹಕರಿಗೆ ಪರಿಷೃತ ಪ್ರಶಸ್ತಿ ಭತ್ಯೆ ಅನ್ವಯಿಸಿ ಪಾವತಿಗೆ ಅವಕಾಶ ಮಾಡಲಾಗುವುದು.
ಸೇವೆ ವೇಳೆ ಮೃತಪಟ್ಟರೆ 50 ಲಕ್ಷ ಪರಿಹಾರ!!
ನೌಕರರು ಅಪಘಾತದಲ್ಲಿ ಮೃತಪಟ್ಟಿಲ್ಲಿ ಅವರ ಅವಲಂಬಿತರಿಗೆ ಗರಿಷ್ಠ ರೂ, 50 ಲಕ್ಷ ಮೊತ್ತವನ್ನು ಪಾವತಿಸಲಾಗುತ್ತದೆ. ಅಂದಹಾಗೆ ನೌಕರರು ಸಂಸ್ಥೆಯ ಸೇವೆಯಲ್ಲಿದ್ದಾಗ ಕರ್ತವ್ಯ ನಿರತ, ಖಾಸಗಿ ಅಪಘಾತದಿಂದ ಮೃತಪಟ್ಟಲ್ಲಿ ಮತ್ತು ಅಂಗನ್ಯೂನತೆಗಳಿಗೆ ಒಳಗಾದಲ್ಲಿ ಅವರ ಅವಲಂಬಿತರಿಗೆ, ನೌಕರರಿಗೆ ಗರಿಷ್ಠ ಮೊತ್ತದ ಆರ್ಥಿಕ ಸೌಲಭ್ಯ ಸಿಗುವ ಉದ್ದೇಶದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರವರೊಂದಿಗೆ ನೌಕರರಿಗೆ ಸಿ.ಎಸ್.ಪಿ ಯೋಜನೆಯಡಿ ಅಪಘಾತ ವಿಮಾ ಸೌಲಭ್ಯವನ್ನು ಎಸ್.ಬಿ.ಐ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡು, ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಇದನ್ನೂ ಓದಿ: ISRO-NASA: ಭಾರತದ ವಿಕ್ರಮ್, ಪ್ರಗ್ಯಾನ್ ಎಚ್ಚರಗೊಳ್ಳೋದು ಡೌಟಾ ?! ಬಾಹ್ಯಾಕಾಶದಲ್ಲಿ ಅಮೇರಿಕದ ‘ನಾಸಾ’ ಶುರುಮಾಡ್ತಾ ಹೊಸ ಆಟ ?!