West Bengal:ಈ ಪುಟ್ಟ ಪೋರನ ಸಮಯ ಪ್ರಜ್ಞೆಯಿಂದ ಉಳಿಯಿತು ನೂರಾರು ಜನರ ಜೀವ! ಅಷ್ಟಕ್ಕೂ ಈತ ಮಾಡಿದ್ದೇನು ಗೊತ್ತೇ?
West Bengal boy prevents train accident through his intelligence news
West Bengal: ಪಶ್ಚಿಮ ಬಂಗಾಳದಲ್ಲಿ(West Bengal)ಬಾಲಕನೊಬ್ಬನ ಸಮಯಪ್ರಜ್ಞೆಯಿಂದ ಬಹುದೊಡ್ಡ ರೈಲು ಅಪಘಾತ ತಪ್ಪಿದ ಘಟನೆ ವರದಿಯಾಗಿದೆ.ಹೊಲದಲ್ಲಿ ಕೆಲಸ ಮಾಡುವ ಕಾರ್ಮಿಕನ ಮಗನಾದ ಮುರ್ಸಲೀನ್ ಶೇಖ್(12)ತನ್ನ ಸಮಯ ಪ್ರಜ್ಞೆ (Presence Of Mind)ಮೂಲಕ ರೈಲು ಅಪಘಾತ (Train Accident)ತಪ್ಪಿಸಿ ನೂರಾರು ಜನರ ಪ್ರಾಣ ಉಳಿಸಿದ್ದಾನೆ. ತಂದೆಯ ಜೊತೆಗೆ ಹೊಲಕ್ಕೆ ಬಂದಿದ್ದ ಮುರ್ಸಲಿನ್ ರೈಲ್ವೆ ಹಳಿಯ ಒಂದು ಭಾಗವು ಹಾನಿಯಾಗಿದ್ದನ್ನು ಗಮನಿಸಿದ್ದಾನೆ. ಅಷ್ಟರಲ್ಲಿ ರೈಲು ಬರುವ ಸಮಯ ಕೂಡ ಆಗಿತ್ತು. ಹೀಗಾಗಿ, ತಕ್ಷಣವೇ ತಾನು ಧರಿಸಿದ್ದ ಕೆಂಪು ಟಿ ಶರ್ಟ್ ತೆಗೆದು ರೈಲು ಬರುತ್ತಿದ್ದ ಕಡೆಗೆ ಬೀಸಿದ್ದಾನೆ.
ರೈಲಿನ ಲೊಕೊಮೊಟಿವ್ ಪೈಲಟ್ ಸಿಗ್ನಲ್ ಗುರುತಿಸಿ ತುರ್ತು ಬ್ರೇಕ್ ಹಾಕಿದ ಪರಿಣಾಮ ದೊಡ್ಡ ಅವಘಡವೊಂದು ಅದೃಷ್ಟವಶಾತ್ ತಪ್ಪಿದೆ. ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುವ ಮಳೆಯಿಂದ ರೈಲು ಹಳಿ ಹಾಳಾಗಿದೆ. ಬಾಲಕನ ಸಮಯಪ್ರಜ್ಞೆಯಿಂದ ಅಪಘಾತ ತಪ್ಪಿದ್ದು, ಅನೇಕ ಮಂದಿಯ ಜೀವ ಉಳಿದಿರುವ ಕುರಿತು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇದರ ನಡುವೆ, ಹಳಿಗಳಲ್ಲಿ ಹಾನಿಗೊಳಗಾದ ಭಾಗವನ್ನು ಸರಿಪಡಿಸಿ ಕಾರ್ಯಾಚರಣೆಯನ್ನು ಪುನರಾರಂಭ ಮಾಡಲಾಗಿರುವ ಕುರಿತು ಕೂಡ ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೊಡ್ಡ ಪ್ರಮಾಣದ ಸಂಭಾವ್ಯ ಅಪಾಯವನ್ನು ತಡೆದ ಬಾಲಕನ ಸಮಯಪ್ರಜ್ಞೆಗೆ ರೈಲ್ವೆ ಅಧಿಕಾರಿಗಳು ಬಾಲಕನಿಗೆ ಶೌರ್ಯ ಪ್ರಮಾಣಪತ್ರವನ್ನು ನೀಡಿ ಗೌರವಿಸಿದ್ದಾರೆ. ಸ್ಥಳೀಯ ಸಂಸದರು ಮತ್ತು ವಿಭಾಗೀಯ ರೈಲು ವ್ಯವಸ್ಥಾಪಕರು ಬಾಲಕನ ಮನೆಗೆ ಭೇಟಿ ನೀಡಿ ಅಭಿನಂದಿಸಿದ್ದು, ರೈಲ್ವೇ ಅಧಿಕಾರಿಗಳು ನಗದು ಬಹುಮಾನವನ್ನು ಕೂಡ ನೀಡಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: Love Affair: ಎರಡು ಮಕ್ಕಳ ತಾಯಿಯ ಪ್ರೀತಿಯಲ್ಲಿ ಬಿದ್ದ ಯುವತಿ!!! ಠಾಣೆಯಲ್ಲೇ ನಡೆಯಿತು ಹೈಡ್ರಾಮಾ! ಕೊನೆಗೇನಾಯ್ತು???